Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿಗೈದವರು; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್


ಮೈಸೂರು; ಶಿಕ್ಷಣ ಕ್ಷೇತ್ರದಲ್ಲಿ ಮಹತ್ವವಾದ ಕ್ರಾಂತಿಯನ್ನು ಮಾಡಿದವರು ಸುತ್ತೂರು ಮಹಾ ಸಂಸ್ಥಾನದ ಪರಮಪೂಜ್ಯ ರಾಜೇಂದ್ರ ಶ್ರೀಗಳು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಶನಿವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಏರ್ಪಡಿಸಲಾಗಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವವನ್ನು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಜೇಂದ್ರ ಶ್ರೀಗಳು ಅತ್ಯಂತ ಚಿಕ್ಕ ವಯಸ್ಸಿನಿಂದಲೇ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಕೈಗೊಂಡ ಕಾರ್ಯಗಳಿಂದ ಅನೇಕ ಜನರ ಕಷ್ಟಗಳು ದೂರವಾಗಿವೆ ಎಂದು ಹೇಳಿದರು.
ಬಹಳ ಹಿಂದಿನಿAದಲೂ ಮಠಮಾನ್ಯಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದು ನಾಡಿಗೆ ಶಕ್ತಿ ತುಂಬಿದೆ. ವಿದ್ಯೆಯಿದ್ದರೆ ವಿನಯವಿರುತ್ತದೆ. ದ್ವೇಷ-ಅಸೂಯೆಗಳನ್ನು ಬಿಟ್ಟು ಜೀವನ ಸಾಗಿಸಬೇಕು. ಜೀವನದಲ್ಲಿ ಉತ್ತಮ ಮಾರ್ಗದರ್ಶನಕ್ಕಾಗಿ ಗುರುವಿನ ಆಶೀರ್ವಾದವಿರಬೇಕು. ಶ್ರೀಗಳ ಜಯಂತಿಯನ್ನು ಸ್ಮರಣೀಯವಾಗಿಸಲು ಅನೇಕ ಸಾಮಾಜಿಕ ಕಾರ್ಯಗಳನ್ನು ಸುತ್ತೂರು ಶ್ರೀಗಳು ಹಮ್ಮಿಕೊಂಡಿದ್ದಾರೆ. ಅತ್ಯಂತ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜೇಂದ್ರ ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಶ್ರೀಮಠದ ಕರ್ಣಧಾರತ್ವವವನ್ನು ವಹಿಸಿಕೊಂಡರು. ಅವರು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಕಷ್ಟದಲ್ಲಿದ್ದ ಅನೇಕ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದರು. ಶ್ರೀಗಳು ಕೈಗೊಂಡ ಸೇವಾಕಾರ್ಯಗಳಿಂದ ಅನೇಕರು ಇಂದು ಶಿಕ್ಷಣ ವಂಚಿತಾಗುವುದು ತಪ್ಪಿತು. ಬಸವಣ್ಣನವರ ಸಮಸಮಾಜ ನಿರ್ಮಾಣದ ಆಶಯಕ್ಕೆ ಪೂರಕವಾಗಿ ರಾಜೇಂದ್ರ ಶ್ರೀಗಳು ಸೇವೆ ಸಲ್ಲಿಸಿದರು. ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೂ ಮಹತ್ವವನ್ನು ನೀಡಿದ್ದರು ಎಂದು ತಿಳಿಸಿದರು.
ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಯವರು ಮಾತನಾಡಿ, ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಾಮರಸ್ಯ ಸ್ಥಾಪನೆಗೆ ಕಾರಣವಾದ ಪವಿತ್ರ ಪರಂಪರೆಯುಳ್ಳ ಮಠವಿದು. ವಚನಕಾರರಾದ ಶ್ರೀ ಘನಲಿಂಗ ಶಿವಯೋಗಿಗಳು, ಶ್ರೀ ಮಂತ್ರಮಹರ್ಷಿಗಳAತಹ ಪೂಜ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಅಕ್ಷರ ಕ್ರಾಂತಿಯನ್ನು ಮಾಡಿದ ರಾಜೇಂದ್ರ ಶ್ರೀಗಳು ನಾಡಿನ ಉದ್ದಗಲಕ್ಕೂ ಮಠದ ಸೇವಾ ಕಾರ್ಯಗಳನ್ನು ಎಲ್ಲ ಕ್ಷೇತ್ರಕ್ಕೂ ವಿಸ್ತರಿಸಿದರು. ಅವರು ಮಾತ್ರ ಉದ್ಧಾರವಾಗದೇ, ಎಲ್ಲರ ಬದುಕನ್ನು ಉದ್ಧಾರವಾಗಿಸಿದರು. ಬಹಳ ಕಷ್ಟಕಾಲದಲ್ಲಿ ಪ್ರಸಾದನಿಲಯಗಳನ್ನು ತೆರೆದರು. ಅನೇಕ ಕಷ್ಟದ ಸಂದರ್ಭಗಳಲ್ಲಿಯೂ ತ್ಯಾಗದಿಂದ ಪ್ರಸಾದನಿಲಯಗಳನ್ನು ಮುನ್ನಡೆಸಿದ್ದಾರೆ ಎಂದರು.
ರಾಜೇಂದ್ರ ಶ್ರೀಗಳು ಈ ಭಾಗದ ಜನರಿಗೆ ದಾರಿದೀಪವಾದವರು. ಅವರು ಉಪಮಾತೀತರು. ಅವರ ಕಾರ್ಯವನ್ನು ಸಹಸ್ರಪಟ್ಟು ಹೆಚ್ಚಿಸಿದವರು ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು. ಸುತ್ತೂರು ಮತ್ತು ಸಿದ್ಧಗಂಗಾ ಶ್ರೀಮಠಗಳ ಮಧ್ಯೆ ಅವಿನಾಭಾವ ಸೋದರ ಸಂಬAಧವಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ವಿಜ್ಞಾನ ವಾಹಿನಿಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ, ರಾಜೇಂದ್ರ ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನಿಸ್ವಾರ್ಥ ಮನೋಭಾವವನ್ನು ಹೊಂದಿದ್ದರು. ಇನ್ನೊಬ್ಬರ ಕಷ್ಟಕ್ಕೆ ಸಹಾಯ ಮಾಡುವ ವ್ಯಕ್ತಿತ್ವ ಅವರದಾಗಿತ್ತು. ರಾಜೇಂದ್ರ ಶ್ರೀಗಳು ದೂರದೃಷ್ಟಿ ಹೊಂದಿದ್ದ ಸಂತರಾಗಿದ್ದರು. ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಇದು ಸಮಾಜ ಪರಿವರ್ತನೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಅಂದು ರಾಜೇಂದ್ರ ಶ್ರೀಗಳು ಹಾಕಿದ ಅಡಿಪಾಯದ ಫಲವಾಗಿ ಇಂದು 370ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಅದು ಮಾಡಲಾಗದ ಕೆಲಸಗಳನ್ನು ಸುತ್ತೂರು ಶ್ರೀಮಠದಂತಹ ಧಾರ್ಮಿಕ ಸಂಸ್ಥೆಗಳು ನಿರ್ವಹಿಸುತ್ತಿವೆ ಎಂದು ಹೇಳಿದರು.
ಶ್ರೀ ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಮಹಾಸ್ವಾಮಿ ಮಾತನಾಡಿ, ಗುರುವಿನಲ್ಲಿ ಭಕ್ತಿಯಿದ್ದರೆ ಎಂದಿಗೂ ಅಪಜಯವಿರುವುದಿಲ್ಲ. ಪೂಜ್ಯ ರಾಜೇಂದ್ರ ಶ್ರೀಗಳು ಲಕ್ಷಾಂತರ ಜನರ ಕಣ್ಣೀರನ್ನು ಒರೆಸಿದವರು. ಅವರನ್ನು ನೆನೆಯುವುದೇ ಒಂದು ಪುಣ್ಯ ವಿಶೇಷ ಎಂದರು.
ವಿಶ್ವ ಒಕ್ಕಲಿಗರ ಮಠದ ಜಗದ್ಗುರು ಡಾ. ಶ್ರೀ ನಿಶ್ವಲಾನಂದನಾಥ ಮಹಾಸ್ವಾಮಿ ಮಾತನಾಡಿ, ನಿಸ್ವಾರ್ಥವಾದ ತ್ಯಾಗ ಮನೋಭಾವನೆಯೊಂದಿಗೆ ರಾಜೇಂದ್ರ ಶ್ರೀಗಳು ಸ್ವಾತಂತ್ರö್ಯಪೂರ್ವದಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಜೀವನವನ್ನು ಹಸನುಗೊಳಿಸಿದ ಮಹಾತ್ಮರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ‘ರಾಜೇಂದ್ರ ನುಡಿ ನಮನ’ (2ನೇ ಆವೃತ್ತಿ), ‘ಒಚಿಟಿ ತಿiಣh ಆiviಟಿiಣಥಿ : Pooರಿಥಿಚಿ ಖಚಿರಿeಟಿಜಡಿಚಿ Shಡಿee’, ‘ನಮ್ಮೊಡನಿದ್ದ ದೈವ : ಪೂಜ್ಯ ರಾಜೇಂದ್ರ ಶ್ರೀ’ ಕೃತಿಗಳನ್ನು, `ಪ್ರಸಾದ ವಿಶೇಷ ಸಂಚಿಕೆ’ ಹಾಗೂ ಜೆಎಸ್‌ಎಸ್ ವಾರ್ತಾಪತ್ರ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರುಗಳಾದ ಸಿ. ಪುಟ್ಟರಂಗಶೆಟ್ಟಿ, ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರುಗಳಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಹೆಚ್.ಎಂ. ಗಣೇಶ್‌ಪ್ರಸಾದ್, ಟಿ.ಎಸ್. ಶ್ರೀವತ್ಸ. ಜಿ.ಡಿ. ಹರೀಶ್‌ಗೌಡ, ಅಶೋಕ್ ಪಟ್ಟಣ, ಕೆ. ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ್, ಡಿ. ರವಿಶಂಕರ್, ಕೆ. ವಿವೇಕಾನಂದ, ಡಾ. ಡಿ. ತಿವ್ಮ್ಮಯ್ಯ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ವೀರಭದ್ರಸ್ವಾಮಿ, ಬಿ. ನಿರಂಜನಮೂರ್ತಿ ಉಪಸ್ಥಿತರಿದ್ದರು.