ಗಜಪಡೆ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಆನೆಗಳ ನಡುವೆ ಪೈಪೋಟಿ; ತಾಲೀಮಿನಲ್ಲಿ ಸೈ ಎನಿಸಿಕೊಂಡ ಆನೆಗೆ ಪಟ್ಟ ಗ್ಯಾರಂಟಿ
ಮೈಸೂರು; ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಯ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಆನೆಗಳ ನಡುವೆ ಪೈಪೋಟಿ ನಡೆಯಲಿದೆ. ಕಾಡಿನಿಂದ ನಾಡಾದ ಅರಮನೆ ನಗರಿ ಮೈಸೂರಿಗೆ ಬಂದು ಅರಮನೆ ಆವರಣದಲ್ಲಿ ಬೀಡು ಬಿಡಲಿರುವ ಗಜಪಡೆಗೆ ನಿತ್ಯವೂ ತಾಲೀಮು ನಡೆಸಲಾಗುತ್ತದೆ. ಇದರಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಗಂಡಾನೆಗಳು ಪೈಪೋಟಿ ನೀಡಲಿವೆ. ತಾಲೀಮನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲರೀತಿಯಿಂದ ನಾನು ಸಮರ್ಥ ಎಂದು ಸಾಬೀತುಪಡಿಸುವ ಆನೆಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ.ಇಲ್ಲಿಯ ತನಕ ಚಿನ್ನದ…