Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಲವು ಬಡಾವಣೆಗಳಲ್ಲಿ ಆ.11,12ರಂದು ನೀರು ಸರಬರಾಜು ವ್ಯತ್ಯಯ ಮೈಸೂರು: ನಗರಕ್ಕೆ ಕುಡಿಯುವನೀರು ಸರಬರಾಜು ಮಾಡುವ ಮೆಳಾಪುರ ನೀರು ಸರಬರಾಜುಯೋಜನೆಯ ಪ್ರಮುಖ ಕೊಳವೆ ಮಾರ್ಗದಲ್ಲಿತುರ್ತು ದುರಸ್ಥಿಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಆ. 11 ಮತ್ತು 12 ರಂದು ಮೈಸೂರಿನ ಹಲವು ಭಾಗಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.ನಗರ ಪಾಲಿಕೆಯ ವಾರ್ಡ್ ಸಂಖ್ಯೆ 9 ರಿಂದ 16, 28 ರಿಂದ 39, ಹಾಗೂ 52 ಮತ್ತು 53 ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ರಾಜೇಂದ್ರನಗರ, ಸುಭಾಷ್ ನಗರ, ಎನ್.ಆರ್.ಮೊಹಲ್ಲಾ, ಗಾಂಧಿನಗರ, ಉದಯಗಿರಿ, ರಾಜೀವ್…

Read More

ಚಾಮುಂಡಿಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಮೈಸೂರು: ನಗರದ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಪಕ್ಕದ ವಸತಿ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದು ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಚಿರತೆ ಬೀದಿ ನಾಯಿಗಳನ್ನು ಬೇಟೆಯಾಡಲು ಸಮೀಪದ ಚಾಮುಂಡಿಬೆಟ್ಟ ಗ್ರಾಮದ ನಾಯಕರ ಬೀದಿಯ ಮಾರಮ್ಮ ದೇವಾಲಯದ ಬಳಿ ಓಡಾಡುತ್ತಿತ್ತು. ನಾಯಕರ ಬೀದಿಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆಗೆ ಬೋನ್ ಇರಿಸಿ ಕಾರ್ಯಾಚರಣೆ…

Read More

ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಮೈಸೂರು; ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ಪ್ರತಿಭಾವಂತ ಐವರು ವಿದ್ಯಾರ್ಥಿನಿಯರಿಗೆ ಮೈಸೂರಿನ ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ನ ನರಸಿಂಹ ಪ್ರಸಾದ್, ವಾದಿರಾಜ್, ಕೃಷ್ಣ ಜಿ.ವಿ., ಹರಿಹರ ದೀಕ್ಷಿತ್, ಅರುಣ್, ಕಾಲೇಜಿನ ಪ್ರಾಚಾರ್ಯರಾದ ಎಚ್. ಸತ್ಯಪ್ರಸಾದ್, ವಿದ್ಯಾರ್ಥಿನಿಯರಾದ ಸಿಂಚನ ಆರ್.ಜೆ., ವಂದನಾ ಎಂ., ಟಿ.ವಿ. ರಜನಿ, ಭುವನ ಹಾಗೂ ನಂದಿತಾ ಎಸ್. ಹಾಜರಿದ್ದರು.

Read More

ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಖದೀಮಮೈಸೂರು; ಖದೀಮನೊಬ್ಬ ವೃದ್ಧೆಯೊಬ್ಬರ ಬಳಿಯಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಮೈಸೂರಿನ ಶಾಂತವೇರಿಗೋಪಾಲಗೌಡ ನಗರದಲ್ಲಿ ನಡೆದಿದೆ. ಶಿವಮ್ಮ (70) ಚಿನ್ನದ ಸರ ಕಳೆದುಕೊಂಡವರು. ಇವರು ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಯುವಕ ಬಂದು ತಳ್ಳಿ ಕೆಳಕ್ಕೆ ಬೀಳಿಸಿ, ಅವರ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಶಿವಮ್ಮ ಅವರ ಕುತ್ತಿಗೆ ಹಾಗೂ ಕಿವಿಗೆ ಗಾಯವಾಗಿದೆ. ಘಟನೆ ಸಂಬAಧ ಅವರು ನೀಡಿದ ದೂರಿನ ಮೇಲೆ ಆಲನಹಳ್ಳಿ…

Read More

ತುಂಬಿ ಹರಿಯುತ್ತಿರುವ ಕಪಿಲಾ ನದಿಗೆ ಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಿದ ರೈತರು

ನಂಜನಗೂಡು : ಕೇರಳದ ವೈನಾಡು ಹಾಗೂ ಜಲನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದ, ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಕಾರಣ, ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ನಂಜನಗೂಡಿನಲ್ಲಿ ಕಪಿಲ ನದಿ ಮೈದುಂಬಿ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಸೋಮವಾರ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ರೈತ…

Read More

ಅಪರಾಧದ ಹಿಂದೆ ಅರ್ಥ ಶಾಸ್ತ್ರದ ಲೆಕ್ಕಾಚಾರ; ಪ್ರೊ. ಸೌಮ್ಯ ಕೆ.

ಮೈಸೂರು; ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ‘ಅಪರಾಧ ಮತ್ತು ಶಿಕ್ಷೆಯ ಅರ್ಥಶಾಸ್ತ್ರ ಎಂಬ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಹಾಜನ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೌಮ್ಯ ಕೆ. ಅವರು ‘ಅಪರಾಧ ಮತ್ತು ಶಿಕ್ಷೆಗೆ ಸಂಬAಧಿಸಿದ ಅರ್ಥಶಾಸ್ತç’ ಈ ವಿಷಯವನ್ನು ಕುರಿತು ಮಾತನಾಡಿ, ಅಪರಾಧಿಗಳ ನಡವಳಿಕೆ, ಕಾನೂನು ಜಾರಿ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಆರ್ಥಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದರು. ಭಾರತದ ಸನ್ನಿವೇಶದಲ್ಲಿ ಆರ್ಥಿಕ, ರಾಜಕೀಯ…

Read More

ಮೌಂಟ್ ಕೊಸಿಯುಸ್ಕೊ ಪರ್ವತಾರೋಹಣಕ್ಕೆ ಸಜ್ಜಾದ ಡಬಲ್ ಗೋಲ್ಡ್ ವಿಜೇತೆ ಪ್ರೀತ್ ಅಪ್ಪಯ್ಯ

ಮೈಸೂರು: 14ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆ ಹಾಗೂ ಚಾಂಪಿಯನ್‌ಷಿಪ್-2026ರಲ್ಲಿ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ರಾಷ್ಟಿçÃಯ ದಾಖಲೆಯೊಂದಿಗೆ ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯದ ಗಮನ ಸೆಳೆದಿರುವ ಮೈಸೂರಿನ ಪ್ರೀತ್ ಅಪ್ಪಯ್ಯ ಅವರು ಇದೀಗ ಆಸ್ಟೆçÃಲಿಯಾದ ಅತಿ ಎತ್ತರದ ಪರ್ವತವಾದ ಮೌಂಟ್ ಕೊಸಿಯುಸ್ಕೊ ಶಿಖರಾರೋಹಣಕ್ಕೆ ಸಜ್ಜಾಗಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿರುವ ಬನ್ನಿಮಂಟಪದ ನಿವಾಸಿ ಪ್ರೀತ್ ಅಪ್ಪಯ್ಯ ಅವರು ಶೂಟಿಂಗ್ ಮತ್ತು ಪರ್ವತಾರೋಹಣ ಎರಡೂ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟç…

Read More

ನೂರಾರು ಜನರಿಗೆ ಮೋಸ ಮಾಡಿರುವ ಚಿನ್ನತಂಬಿ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು; ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹ

ಮೈಸೂರು: ಅಡವಿಟ್ಟ ಚಿನ್ನವನ್ನು ಬಿಡಿಸಿ, ಮಾರುಕಟ್ಟೆ ಬೆಲೆಗೆ ಕೊಂಡು ಕೊಳ್ಳುತ್ತೇವೆ ಎಂದು ನಂಬಿಸಿ ನೂರಾರು ಮಂದಿ ‘ಗ್ರಾಹಕರಿಂದ ಪಡೆದ ಚಿನ್ನಾಭರಣಗಳನ್ನು ಕರಗಿಸಿ, ಕೋಟ್ಯಾಂತರ ರೂಗಳನ್ನು ದುರುಪಯೋಗಪಡಿಸಿಕೊಂಡು ಮೋಸ ಎಸಗಿದ ಅರೋಪ ಎದುರಿಸುತ್ತಿರುವ ‘ಡಿಜಿಎಫ್ ಗೋಲ್ಡ್ ಅಂಡ್ ಡೈಮಂಡ್’ ಮಾಲೀಕ ಸೌಂದರ್‌ರಾಜ್ ಅಲಿಯಾಸ್ ಚಿನ್ನತಂಬಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು’ ಎಂದು ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.ಸೋಮವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಸಕ್ಕೆ ಒಳಗಾದವರು ನೀಡಿದ…

Read More