ಗ್ರಾಮೀಣ ಭಾಗದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು : ಸಿದ್ದರಾಮಯ್ಯ
ಮೈಸೂರು : ಗ್ರಾಮೀಣ ಭಾಗದ ಮಕ್ಕಳು ಕೆ.ಎ.ಎಸ್. ಮತ್ತು ಐ.ಎ.ಎಸ್. ತರಬೇತಿ ಪಡೆದು, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುವ0ತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಶ್ರೀಕಾಗಿನೆಲೆ ಮಹಾಸಂಸ್ಥಾನದ ವತಿಯಿಂದ ನಿರ್ಮಿಸುತ್ತಿರುವ ಕೆ.ಎ.ಎಸ್., ಐ.ಎ.ಎಸ್. ತರಬೇತಿ ಕೇಂದ್ರದ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಹಣವಿರುವ ವಿದ್ಯಾರ್ಥಿಗಳು ಕೆ.ಎ.ಎಸ್, ಐ.ಎ.ಎಸ್. ತರಬೇತಿ ಪಡೆಯಲು ಬೆಂಗಳೂರು ಹೈದರಾಬಾದ್, ದೆಹಲಿಗಳಿಗೆ ಹೋಗುತ್ತಿದ್ದಾರೆ. ಆದರೆ ಬಡವರ, ರೈತರ ಮಕ್ಕಳಿಗೆ ಅಲ್ಲಿಗೆ ಹೋಗಿ ತರಬೇತಿ ಪಡೆಯಲು…