Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಾಲೇಜು ವಿದ್ಯಾರ್ಥಿಗಳಿಗಾಗಿ ರಂಗ ತರಬೇತಿ ಶಿಬಿರ
ಮೈಸೂರು: ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಕುರಿತು ಆಸಕ್ತಿ ಬೆಳೆಸುವ ಹಾಗೂ ಅವರ ಸೃಜನಶೀಲತೆ ಮತ್ತು ಅಭಿನಯ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಿರಂತರ ಫೌಂಡೇಶನ್ ವತಿಯಿಂದ “ಸಹಜ ರಂಗ ೨೦೨೬” ರಂಗ ತರಬೇತಿ ಶಿಬಿರವನ್ನು ಸೆಪ್ಟೆಂಬರ್ ೪ ರಿಂದ ಮೈಸೂರಿನ ಮಾನಸಗಂಗೋತ್ರಿ, ಗಾಂಧಿಭವನದಲ್ಲಿ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು ಹಾಗೂ ಭಾರತ ಸರ್ಕಾರದ ಸಂಸ್ಕöÈತಿ ಸಚಿವಾಲಯದ ಸಹಕಾರದೊಂದಿಗೆ ನಡೆಯಲಿರುವ ಈ ಶಿಬಿರವು ಸೆಪ್ಟೆಂಬರ್ ೪ರಿಂದ ಅಕ್ಟೋಬರ್ ೩ ರವರೆಗೆ ನಡೆಯಲಿದೆ. ಪ್ರತಿದಿನ ಸಂಜೆ ೪:೪೫ರಿಂದ ರಾತ್ರಿ ೮:೧೫ರವರೆಗೆ ತರಬೇತಿ ನೀಡಲಾಗುತ್ತದೆ.
ರಂಗಭೂಮಿಯ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಈ ಶಿಬಿರದಲ್ಲಿ ರಂಗ ಇತಿಹಾಸ, ನಾಟಕದ ಓದು, ಅಭಿನಯ, ಪರಿಸರ ಮತ್ತು ರಂಗಭೂಮಿ, ರಂಗ ಸಂಗೀತ, ಗ್ರೀಕ್ ರಂಗಭೂಮಿ, ಶೇಕ್ಸ್ಪಿಯರ್ ರಂಗಭೂಮಿ, ಮಾರ್ಷಿಯಲ್ ಆರ್ಟ್್ಸ, ನಾಟಕ, ಭರತನ ನಾಟ್ಯಶಾಸ್ತç ಹಾಗೂ ವಿವಿಧ ರಂಗ ಆಟಗಳು ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೩ ಕೊನೆಯ ದಿನ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ೮೯೫೧೭೫೫೨೬೭ | ೯೬೧೧೦೭೪೪೨೪ | ೯೯೮೦೨೭೩೧೬೭ನ್ನು ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.