Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ತ್ರಿವಿಧ ದಾಸೋಹಿಗಳಾಗಿ ಅನಕ್ಷರತೆಯನ್ನು ಹೋಗಲಾಡಿಸಿದ ರಾಜೇಂದ್ರ ಶ್ರೀಗಳು


ಮೈಸೂರು; ತ್ರಿವಿಧ ದಾಸೋಹಿಗಳಾಗಿ ಗ್ರಾಮೀಣ ಜನರ ಅನಕ್ಷರತೆಯನ್ನು ರಾಜೇಂದ್ರ ಶ್ರೀಗಳು’ ಹೋಗಲಾಡಿಸಿದರು ಎಂದು ವಿಶ್ರಾಂತಕನ್ನಡ ಪ್ರಾಧ್ಯಾಪಕರಾದ ಡಾ. ಸಿ.ಜಿ. ಉಷಾದೇವಿ ಹೇಳಿದರು.
ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕದತ್ತಿಯ ವತಿಯಿಂದ ಮೈಸೂರು ವಾಣಿವಿಲಾಸ ರಸ್ತೆಯ ಕೆಎಸ್‌ಎಸ್ ಸಂಸ್ಕೃತ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ೩೪೧ನೇ ಶಿವಾನುಭವ ದಾಸೋಹ ಉಪನ್ಯಾಸ ಕಾರ್ಯಕ್ರಮದಲ್ಲಿ ‘ತ್ರಿವಿಧದಾಸೋಹಿ ಪರಮಪೂಜ್ಯರಾಜೇಂದ್ರ ಶ್ರೀಗಳು’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಸ್ವಾತಂತ್ರö್ಯ ಪೂರ್ವದಲ್ಲೇ ಪೂಜ್ಯ ರಾಜೇಂದ್ರ ಶ್ರೀಗಳು ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ಸ್ಥಾಪಿಸಿದ್ದರು.ಗ್ರಾಮಾಂತರ ಪ್ರದೇಶಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳನ್ನು ತೆರೆಯುವುದರ ಮೂಲಕ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು ಎಂದು ತಿಳಿಸಿದರು.
ಪ್ರಸಾದನಿಲಯಗಳ ನಿರ್ವಹಣೆಗಾಗಿ ಪೂಜ್ಯರು ಚಿನ್ನದ ಕರಡಿಗೆಯನ್ನೆ ಅಡವಿಟ್ಟು ವಿದ್ಯಾರ್ಥಿಗಳ ಊಟಕ್ಕೆ ಬೇಕಾದ ದವಸ, ಧಾನ್ಯಗಳನ್ನು ಖರೀದಿಸಿದ್ದರು.ಗ್ರಾಮಾಂತರದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆAದು ಹಗಲಿರುಳು ಶ್ರಮಿಸುತ್ತಿದ್ದರು.ತ್ರಿವಿಧ ದಾಸೋಹಿಗಳಾಗಿ ಅನ್ನ, ಅರಿವು, ಆರೋಗ್ಯದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದರು. ಪೂಜ್ಯರುಜೀವನದಲ್ಲಿ ಏನೇ ಕಷ್ಟ ಬಂದರೂ, ಅದು ಅನುಭವಕ್ಕಾಗಿ ಬರುತ್ತದೆ ಎಂದು ಹೇಳುತ್ತಿದ್ದರು.ಬಡಜನರ ಅನುಕೂಲಕ್ಕಾಗಿ ಆಸ್ಪತ್ರೆಯನ್ನು ಆರಂಭಿಸಿ, ಜನರಿಗೆ ಆರೋಗ್ಯ ಭಾಗ್ಯವನ್ನು ಒದಗಿಸಿದರು ಎಂದು ಹೇಳಿದರು.
ಪ್ರಸಾದನಿಲಯಗಳ ಮೂಲಕ ಡಾ.ಎಂ.ಚಿದಾನAದಮೂರ್ತಿ, ಡಾ. ಎಂ.ನAಜುAಡಪ್ಪ, ಪ್ರೊ. ಸಾ.ಶಿ. ಮರುಳಯ್ಯ, ಡಾ.ಜಿ.ಎಸ್. ಶಿವರುದ್ರಪ್ಪ, ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಸೇರಿದಂತೆ ನೂರಾರು ವಿದ್ವಾಂಸರುಗಳಿಗೆ, ರಾಜಕೀಯ ಗಣ್ಯರಿಗೆ, ಧಾರ್ಮಿಕ ಮುಖಂಡರುಗಳಿಗೆ ಆಶ್ರಯದಾತರಾಗಿದ್ದರು.ಸಮಾಜ ಹಾಗೂ ವಿವಿಧ ಮುಖಂಡರುಗಳ ಬೆಳವಣಿಗೆಗೆ ಸಹಕಾರಿಯಾಗಿದ್ದರು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಂಸ್ಕಾರವAತರಾಗುವುದರ ಮೂಲಕ ಸಂಸ್ಥೆಯ I್ಮಣ ತೀರಿಸಬೇಕೆಂದರು.
ವಿಶ್ರಾAತ ಪ್ರಾಂಶುಪಾಲ ಡಾ.ಎಂ.ನAಜುAಡಪ್ಪ ಅಧ್ಯಕ್ಷ ಭಾಷಣ ಮಾಡಿದರು. ವಚನಗಾಯನವನ್ನು ಕುಮಾರಿ ಚೂಡಾಮಣಿ ಹಾಗೂ ಅಗಮ್ನೇಶ್ವರಿಯವರು ನಡೆಸಿಕೊಟ್ಟರು. ವಿಶ್ವನಾಥ್ ಹಿರೇಗೌಡ, ದೇವೇಂದ್ರ, ರೋಹನ್ ಬುಳ್ಳಾ, ನೀಲಾಂಬಿಕಾ ಹಾಗೂ ವಿದ್ಯಾರ್ಥಿಗಳು, ನಾಗರಿಕರು, ಜಿಜ್ಞಾಸುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.