Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕರ್ನಾಟಕ ಕಾಂಗ್ರೆಸ್ ಮುಕ್ತ ಆಗೋದು ಗ್ಯಾರಂಟಿ; ಛಲವಾದಿ ನಾರಾಯಣಸ್ವಾಮಿ


ಮೈಸೂರು: ಕರ್ನಾಟಕ ಕಾಂಗ್ರೆಸ್ ಮುಕ್ತ ಆಗೋದು ಗ್ಯಾರಂಟಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ಎನ್.ಡಿ.ಎ. ಮುಂದೆ ಸುಭದ್ರ ಸರ್ಕಾರವನ್ನು ಕರ್ನಾಟಕದಲ್ಲಿ ಕೊಡುತ್ತೇವೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮಂಗಳವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ರೈತರ ಪರವಾಗಿ ನಿಲ್ಲುವಂತ ಪರಿಸ್ಥಿತಿಯಲ್ಲಿ ಈ ಸರ್ಕಾರ ಇಲ್ಲ.
ಇದು ಒಂದು ದರಿದ್ರ ಸರ್ಕಾರ. ಇದು ದಿವಾಳಿ ಸರ್ಕಾರ. ಇವರಲ್ಲಿ ಹಣ ಇಲ್ಲ ಅನ್ನೋದು ನೇರವಾಗಿ ಗೊತ್ತಾಗಿದೆ. ಅದಕ್ಕೆ ಹಣಕಾಸು ಇಲಾಖೆ ಈಗಾಗಲೇ ನೋಟೀಸ್ ನೀಡಿದೆ ಎಂದರು.
ಎಸ್.ಐ.ಆರ್. ಎಂಬುದು ಬಿಜೆಪಿಗೆ ಸಂಬAಧಪಟ್ಟ ವಿಷಯ ಅಲ್ಲ; ಅಥವಾ ಯಾವುದೇ ರಾಜಕೀಯ ಪಕ್ಷಗಳಿಗೆ ಸಂಬAಧಪಟ್ಟ ವಿಷಯ ಅಲ್ಲ. ಎಸ್.ಐ.ಆರ್. ಚುನಾವಣಾ ಆಯೋಗ ಮಾಡುವ ಕೆಲಸ. ಪ್ರತಿ 15 -20 ವರ್ಷಕ್ಕೊಮ್ಮೆ ವಿಶೇಷ ಪರಿಶೀಲನೆಯನ್ನು ಸಹಜವಾಗಿ ಮಾಡುತ್ತಾರೆ ಎಂದು ವಿವರಿಸಿದರು.
ದೇಶದ ಚುನಾವಣಾ ಪಟ್ಟಿಯಲ್ಲಿ ಯಾರು ಈ ದೇಶಕ್ಕೆ ಸಂಬAಧಪಡದವರು ಮತದಾರರ ಪಟ್ಟಿಯಲ್ಲಿ ಇದ್ದರೆ ಅದನ್ನು ಎಸ್‌ಐಆರ್ ಅಡಿ ರದ್ದುಪಡಿಸಲಾಗುತ್ತದೆ. ಎರಡು ಕಡೆ ಹೆಸರು ಇರುವುದು, ಮೃತರ ಹೆಸರು ಇನ್ನೂ ಮತದಾರರ ಪಟ್ಟಿಯಲ್ಲಿ ಇದ್ದಾಗ ಅದನ್ನು ರದ್ದು ಮಾಡಲಾಗುತ್ತದೆ. ಇದಕ್ಕಾಗಿ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತದೆ ಎಂದು ತಿಳಿಸಿದರು. ಬಾಂಗ್ಲಾದೇಶದವರು ನಿಮ್ಮ ಪಕ್ಷದವರಾದರೆ ನಾವು ಬಿಡಬೇಕಾ? ಪಾಕಿಸ್ತಾನದವರು, ಶ್ರೀಲಂಕಾ ವಾಸಿಗಳು ನಿಮ್ಮ ಪಕ್ಷದವರಾಗಿ ಮತದಾರರಾಗಿದ್ದರೆ ಅದನ್ನು ಹಾಗೇ ಬಿಡಬೇಕಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ವೋಟ್ ಚೋರಿ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ. ಕರ್ನಾಟಕ, ಹಿಮಾಚಲ ಪ್ರದೇಶ ಸೇರಿ ಅನೇಕ ಕಡೆ ಕಾಂಗ್ರೆಸ್ ಗೆದ್ದಾಗ ವೋಟ್ ಚೋರಿ ಆಗ್ಲಿಲ್ವಾ?, ಈ ದೇಶದಲ್ಲಿ ವೋಟ್ ಚೋರಿ ಆಗ್ತಿಲ್ಲ, ಆದರೆ ಚೋರಿ ಗಳಿಗೆ ಜನರು ವೋಟ್ ಹಾಕುತ್ತಿಲ್ಲ .
ನೀವು ಕರ್ನಾಟಕದಲ್ಲಿ ಕಳೆದ ಬಾರಿ 136 ಸೀಟ್ ಗೆದ್ದಾಗ ಮತಗಳ್ಳತನ ನಡೆದಿದೆಯೇ? ತೆಲಂಗಾಣ, ಹಿಮಾಚಲ, ಕೇರಳಂನಲ್ಲಿ ಚುನಾವಣೆ ನಡೆದಾಗ ಮತಗಳ್ಳತನ ಆಗಿದೆಯೇ ಎಂದು ಪ್ರಶ್ನಿಸಿದರು. ಪಶ್ಚಿಮ ಬಂಗಾಳದಲ್ಲಿ ನಿಮ್ಮ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಒಂದು ಸೀಟು ಗೆಲ್ಲೋ ಪರಿಸ್ಥಿತಿಯಲ್ಲಿ ನೀವು ಅಲ್ಲಿಲ್ಲ. ಜನ ನಿಮಗೆ ಅಲ್ಲಿ ಮತ ಹಾಕಲ್ಲ ಎಂದರೆ ಮತಗಳ್ಳತನ ನೆನಪಾಗುತ್ತದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿನ ರಾಹುಲ್ ಗಾಂಧಿಯವರು ಮತ್ತು ರಾಷ್ಟಿçÃಯ ಕಾಂಗ್ರೆಸ್ ಪಕ್ಷವು ಕಾಕ್ರೋಚ್ ಜನತಾ ಪಾರ್ಟಿಯ ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ . ರಾಹುಲ್ ಗಾಂಧಿಯವರು ನೆಹರು, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಿಂಬಾಲಕರಲ್ಲ. ಒಬ್ಬ ಯುವಕ ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ ಎಂದು ಇದು ಈ ದೇಶದ ವಿಪರ್ಯಾಸದ ರಾಜಕಾರಣ ಎಂದು ಟೀಕಿಸಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷವು ಎಸ್.ಐ.ಆರ್.ನ ವಿರುದ್ಧ ಒಂದು ದೊಡ್ಡ ಸಮಸ್ಯೆ ಮಾಡಲು ಹೊರಟಿದೆ.
ಅಭಿಜಿತ್ ದೀಪ್ಕೆಯನ್ನು ಹಿಂಬಾಲಿಸುವ ಕಾಂಗ್ರೆಸ್ ಪಕ್ಷವು ಎಸ್‌ಐಆರ್ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರಕಾರದ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಆರೋಪ ಇಲ್ಲ. ಕಳಂಕರಹಿತ ಆಡಳಿತ ಕೇಂದ್ರದಲ್ಲಿದೆ. ಅಭಿವೃದ್ಧಿ ತೀವ್ರಗತಿಯಲ್ಲಿದೆ. ಜನ ಇವತ್ತು ಬಹಳ ಸಂತುಷ್ಟರಾಗಿದ್ದಾರೆ. ಇದು ಕಾಂಗ್ರೆಸ್ಸಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದಲೇ ರಾಹುಲ್ ಗಾಂಧಿಯವರು ಇದ್ದಕ್ಕಿದ್ದಂಗೆ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಂಸತ್ತಿಗೆ ಮೂರು ಬಾರಿ ಚುನಾವಣೆ ಆಗಿದೆ. 180- 280 ಸೀಟು ಗೆದ್ದಾಗ ಈಗಿರತಕ್ಕಂತ ಚುನಾವಣಾ ಕಮಿಷನರ್ ಇರಲಿಲ್ಲ; 302 ಸೀಟು ಗೆದ್ದಾಗ ಅವರು ಇರಲಿಲ್ಲ. ಕಡಿಮೆ ಇದ್ದಿದ್ದು ಹೆಚ್ಚಾಯಿತು. ಈಗ ಇವರು ಬಂದಮೇಲೆ ನಮ್ಮ ಸೀಟುಗಳು ಕಡಿಮೆಯಾಗಿ 242ಕ್ಕೆ ಬಂದಿದೆ. ಇದನ್ನು ಕಾಂಗ್ರಸ್ಸಿನವರು ಗಮನಿಸಿಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ನಲ್ಲಿ ಇರತಕ್ಕಂತ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದ ಈ ಬೋಗಸ್ ಮತದಾರರನ್ನು ಓಡಿಸುವ ಕೆಲಸ ಆಗುತ್ತಿದೆ. ಇದರಿಂದ ಕಾಂಗ್ರೆಸ್ಸಿನ ಭವಿಷ್ಯ ಶೂನ್ಯವಾಗುತ್ತಿದೆ. ಇದಕ್ಕಾಗಿ ಇವರು ಹೋರಾಟ ಮಾಡಲಿಕ್ಕೆ ಹೊರಟಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಎಸ್ ಮಹದೇವಯ್ಯ, ಅನಿಲ್ ಥಾಮಸ್, ಶೈಲೇಂದ್ರ, ರುದ್ರಮೂರ್ತಿ ಅಶೋಕ್, ವಿನಯ್ ಕುಮಾರ್, ಅನಿಲ್ ಕುಮಾರ್, ಕಾರ್ತಿಕ್, ಮರಿಯಪ್ಪ, ಅರ್ಜುನ್, ಪಾರ್ಥ, ಪರಶುರಾಮ್, ಶ್ರೀನಿವಾಸ್, ವಸಂತ್ ಕುಮಾರ್, ಪರಮಾನಂದ ಹಾಜರಿದ್ದರು.