
ಮೈಸೂರು; ಇಲ್ಲಿನ ವಿಜಯ ವಿಠಲ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವರುಣ್ ಪಟೇಲ್ ಅವರು ಬಿ.ಸಿ.ಸಿ.ಐ. ವಿನು ಮಂಕಟ್ ಟ್ರೋಫಿಯಲ್ಲಿ ಭಾಗವಹಿಸುವ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಅ. ೮ ರಿಂದ ೧೬ರವರೆಗೆ ವೈe಼Áಗ್ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇವರು ಮೈಸೂರಿನ ಶಿಕ್ಷಕ ಲೋಕೇಶ್ ಮತ್ತು ಪ್ರತಿಮಾ ರವರ ಪುತ್ರ. ವಿದ್ಯಾರ್ಥಿಯನ್ನು ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.