
ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಗಜಪಡೆ ಹಾಗೂ ಪೊಲೀಸ್ ಅಶ್ವದಳಕ್ಕೆ ಮೊದಲ ಹಂತದ ಸಿಡಿಮದ್ದಿನ ತಾಲೀಮು ನಡೆಸಲಾಯಿತು.
ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ಗಜಪಡೆಯನ್ನು ಸಾಲಾಗಿ ನಿಲ್ಲಿಸಿ, ನಗರ ಸಶಸ್ತç ಮೀಸಲು ಪಡೆಯ ಸಿಬ್ಬಂದಿಗಳು ಸಾಲಾಗಿ ನಿಲ್ಲಿಸಿಲಾಗಿದ್ದ ೭ ಫಿರಂಗಿ ಗಾಡಿಗಳಲ್ಲಿದ್ದ ಪಿರಂಗಿಗಳಿಗೆ ತುಂಬಿದ್ದ ಮದ್ದಿಗೆ ಬೆಂಕಿ ಕೊಡುವ ಮೂಲಕ ೨೧ ಸುತ್ತು ಕುಶಾಲ ತೋಪುಗಳನ್ನು ಸಿಡಿಸಿ ತಾಲೀಮು ನಡೆಸಿದರು.
ತಾಲೀಮಿನಲ್ಲಿ ಅಶ್ವದಳದ ೪೩ ಕುದುರೆಗಳು ಹಾಗೂ ದಸರಾ ಗಜಪಡೆಯ ೧೩ ಆನೆಗಳಾದ ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವಾ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷಿ÷್ಮ, ಚೈತ್ರಾ, ರೂಪಾ ಮತ್ತು ಶ್ರೀಕಂಠ ಆನೆಗಳು ಭಾಗವಹಿಸಿದ್ದವು.
ಕುಶಾಲತೋಪಿನ ಭಾರೀ ಸದ್ದಿಗೂ ಹೆದರದೆ ಆನೆಗಳು ಹಾಗೂ ಕುದುರೆಗಳು ಶಿಸ್ತಿನಿಂದ ನಿಂತಿದ್ದು, ಆದರೆ ಸಿಡಿಮದ್ದಿನ ಢಂ, ಢಂ ಶಬ್ದಕ್ಕೆ ಕೊಂಚ ಶ್ರೀರಾಮ ಆನೆ ಬೆಚ್ಚಿ ಪ್ರತಿಕ್ರಿಯೆ ನೀಡಿದರೂ ಯಾವುದೇ ಗಲಿಬಿಲಿ, ಆತಂಕವನ್ನುAಟಾಗಲಿಲ್ಲ. ಮೊದಲ ಹಂತದ ತಾಲೀಮು ಯಶಸ್ವಿಯಾಯಿತು.
ಈ ವೇಳೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಹರ್ಷಪ್ರಿಯಂವಧಾ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದ, ಸಿಡಿಮದ್ದಿನ ತಾಲೀಮು ವೀಕ್ಷಿಸಿದರು. ದಸರಾದ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡುವಾಗಿ ಗೌರವ ಸಲ್ಲಿಸುವುದಕ್ಕಾಗಿ ೨೧ ಕುಶಾಲ ತೋಪುಗಳನ್ನು ಸಿಡಿಸಲಾಗುತ್ತದೆ. ಈ ವೇಳೆ ಗಜಪಡೆ, ಅಶ್ವಪಡೆ ಬೆದರಬಾರದೆಂಬ ಉದ್ದೇಶದಿಂದ ಅವುಗಳನ್ನು ಸಿಡಿ ಮದ್ದಿನ ಶಬ್ದಕ್ಕೆ ಒಗ್ಗಿಸಲು ಸಿಡಿಮದ್ದಿನ ತಾಲೀಮನ್ನು ಮೂರು ಹಂತದಲ್ಲಿ ನಡೆಸಲಾಗುತ್ತದೆ.
ಸಿಡಿಮದ್ದಿನ ತಾಲೀಮಿನ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅರಣ್ಯ ಇಲಾಖೆ ಹಾಗೂ ನಗರ ಸಶಸ್ತç ಮೀಸಲು ಪಡೆಯಿಂದ ಜಂಟಿಯಾಗಿ ಮೊದಲ ಹಂತದ ಸಿಡಿಮದ್ದು ತಾಲೀಮನ್ನು ನಡೆಸಿದ್ದೇವೆ. ತರಬೇತಿ ಪಡೆದ ಒಟ್ಟು ೩೬ ನುರಿತ ಸಿಬ್ಬಂದಿಯಿAದ ಈ ತಾಲೀಮನ್ನು ನಡೆಸಲಾಯಿತು. ದಸರಾ ಗಜಪಡೆಯ ೧೩ ಆನೆಗಳು ಸೇರಿದಂತೆ ಅಶ್ವದಳದ ೪೦ ಕುದುರೆಗಳಿಗೆ ತಾಲೀಮಿನಲ್ಲಿ ಭಾಗಿಯಾಗಿದ್ದವು. ವಿಜಯದಶಮಿ ಜಂಬೂಸವಾರಿ ಪುಷ್ಪಾರ್ಚನೆ ವೇಳೆ ಹಾಗೂ ಟಾರ್ಚ್ ಲೈಟ್, ಪರೇಡ್ ವೇಳೆ ಎರಡು ಬಾರಿ ಸಿಡಿಮದ್ದನ್ನು ಸಿಡಿಸಲಾಗುವುದು. ಈ ಶಬ್ಧಕ್ಕೆ ದಸರಾ ಗಜಪಡೆ ಹಾಗೂ ಅಶ್ವದಳಗಳು ಹೊಂದಿಕೊಳ್ಳುವ ಉದ್ದೇಶದಿಂದ ಈ ತಾಲೀಮನ್ನು ನಡೆಸಲಾಗುವುದು. ಇನ್ನೂ ಎರಡು ಬಾರಿ ಈ ತಾಲೀಮನ್ನು ನಡೆಸಲಿದ್ದು, ಇಂದಿನ ತಾಲೀಮು ಯಶಸ್ವಿಯಾಗಿ ನಡೆದಿದೆ” ಎಂದು ತಿಳಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್.ಎಸ್.ರವಿಶಂಕರ್ ಮಾತನಾಡಿ, “ದಸರಾ ಗಜಪಡೆಯ ಎಲ್ಲಾ ಆನೆಗಳು ಅಭಿಮನ್ಯು ಆನೆ ನೇತೃತ್ವದಲ್ಲಿ ಸಿಡಿಮದ್ದು ತಾಲೀಮನ್ನು ಸಮರ್ಥವಾಗಿ ನಿಭಾಯಿಸಿದವು. ಯಶಸ್ವಿಯಾಗಿ ನಡೆದ ಈ ತಾಲೀಮಿನಲ್ಲಿ ಶ್ರೀರಾಮ ಆನೆ ಮಾತ್ರ ಸಿಡಿಮದ್ದಿನ ಶಬ್ಧಕ್ಕೆ ಸ್ವಲ್ಪ ಪ್ರತಿಕ್ರಿಯೆ ನೀಡಿದೆ. ಆದರೆ ಕಂಟ್ರೋಲ್‌ನಲ್ಲಿ ಇದ್ದ. ಇನ್ನೂ ತಾಲೀಮಿನ ಪ್ರಕ್ರಿಯೆ ನಡೆಯುತ್ತಿದೆ, ಕೊನೆ ಬಾರಿಯ ಸಿಡಿಮದ್ದು ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆಯನ್ನು ಆಯ್ಕೆ ಮಾಡಲಾಗುವುದು. ಧನಂಜಯ ಆನೆ ಕೂಡ ಉತ್ತಮ ಆನೆಯಾಗಿ ಹೊರಹೊಮ್ಮಿದೆ. ಆದರೆ ತಾಲೀಮು ಇನ್ನೂ ಬಾಕಿಯಿರುವ ಕಾರಣ ಈಗಲೇ ಅಂಬಾರಿ ಆನೆಯನ್ನು ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲಾ ತಾಲೀಮುಗಳು ಮುಗಿದ ಬಳಿಕ ಇಲಾಖೆ ವತಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.
ಡಿಸಿಎಫ್ ಡಾ. ಪ್ರಭುಗೌಡ ಮಾತನಾಡಿ, ದಸರಾ ಗಜಪಡೆಯ ಎಲ್ಲಾ ೧೩ ಆನೆಗಳ ಆರೋಗ್ಯ ಉತ್ತಮವಾಗಿದ್ದು, ಪಶು ವೈದ್ಯರು ದಿನಕ್ಕೆ ಎರಡು ಬಾರಿಯಂತೆ ಪರೀಕ್ಷೆ ಮಾಡುತ್ತಿದ್ದಾರೆ. ಈ ಬಾರಿ ಬಿಸಿಲು ಹೆಚ್ಚಾಗಿರುವ ಕಾರಣ ದಿನಕ್ಕೆ ೩ ಬಾರಿ ಅವುಗಳ ಮೈ ಅನ್ನು ಉಜ್ಜಿ ಸ್ನಾನ ಮಾಡಿಸಲಾಗುತ್ತಿದೆ. ಅಲ್ಲದೇ ಆನೆಗಳ ದೇಹದ ಉಷ್ಣತೆ ಸ್ಥಿರವಾಗಿಡಲು ಅವುಗಳಿಗೆ ಅವಲಕ್ಕಿ ಹಾಗೂ ಮೊಸರನ್ನು ನೀಡಲಾಗುತ್ತಿದೆ. ಅಭಿಮನ್ಯುವಿಗೆ ಭಾರ ಹೊರಿಸುವುದು ಮುಗಿದ ಅಧ್ಯಾಯ. ಆತನನ್ನು ಇನ್ನೇನಿದ್ದರು ಆರಾಮಾಗಿ ನಡೆಸಿಕೊಂಡು ಓಡಾಡಿಸುತ್ತೇವೆ” ಎಂದು ತಿಳಿಸಿದರು.
ಮಹೇಂದ್ರ, ಲಕ್ಷಿ÷್ಮ ಇಂಟರೆಸ್ಟಿAಗ್ ಲವ್ ಸ್ಟೋರಿ: ಮಹೇಂದ್ರ ಹಾಗೂ ಲಕ್ಷಿ÷್ಮ ಆನೆಗಳು ಬಳ್ಳೆ ಶಿಬಿರದ ಆನೆಗಳಾಗಿದ್ದು ಉತ್ತಮ ಬಾಂಧವ್ಯ ಹೊಂದಿವೆ. ಮನುಷ್ಯರಂತೆ ಅವುಗಳಿಗೂ ಪೊಸೆಸಿವ್‌ನೆಸ್ ಇರುತ್ತದೆ. ಲಕ್ಷಿ÷್ಮ ಆನೆಗೂ ಮಹೇಂದ್ರನ ಮೇಲೆ ಪೊಸಿಸಿವ್‌ನೆಸ್ ಇದೆ. ಈ ಕಾರಣದಿಂದ ಮಹೇಂದ್ರನ ಪಕ್ಕ ಯಾವುದೇ ಹೆಣ್ಣಾನೆ ಬಂದರೂ ಲಕ್ಷಿ÷್ಮ ಆನೆ ಪ್ರತಿಕ್ರಿಯೆ ನೀಡುತ್ತಾಳೆ ಎಂದು ತಿಳಿಸಿದರು.