
ಮೈಸೂರು; ಈ ಬಾರಿ ನಡೆಯಲಿರುವ ನಾಡ ಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ನಕಲಿ ಆಹಾರ ಪದಾರ್ಥಗಳು ಹಾಗೂ ಮೈಸೂರು ವಿಶೇಷ ಉತ್ಪನ್ನಗಳ ಹೆಸರಿನಲ್ಲಿ ಮಾರಾಟವಾಗುವ ಕಳಪೆ, ನಕಲಿ ಉತ್ಪನ್ನಗಳನ್ನು ತಡೆಗಟ್ಟಲು ವಿಶೇಷ ದಳ ರಚಿಸಬೇಕು ಹಾಗೂ “ಪ್ಲಾಸ್ಟಿಕ್ ಮುಕ್ತ” ಮೈಸೂರನ್ನಾಗಿಸಬೇಕೆಂದು ಶಾಸಕ ಟಿ.ಎಸ್.ಶ್ರೀವತ್ಸ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಮೈಸೂರು ದಸರವು ವಿಶ್ವವಿಖ್ಯಾತ ಸಾಂಸ್ಕöÈತಿಕ ಹಾಗೂ ಪ್ರವಾಸೋದ್ಯಮದ ಪ್ರಮುಖ ಉತ್ಸವವಾಗಿದ್ದು. ದಸರಾ ೨೦೨೬ರ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕೆಲವು ಕಡೆಗಳಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು, ಮೈಸೂರು ಪಾಕ್, ಮೈಸೂರು ಸ್ಯಾಂಡಲ್ ಆಯಿಲ್, ಸ್ಯಾಂಡಲ್ ಉತ್ಪನ್ನಗಳು ಹಾಗೂ “ಮೈಸೂರು ವಿಶೇಷ” ಎಂಬ ಹೆಸರಿನಲ್ಲಿ ಮಾರಾಟವಾಗುವ ಇತರ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇಂತಹ ಉತ್ಪನ್ನಗಳಿಂದ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುವುದಲ್ಲದೆ, ಮೈಸೂರಿನ ಪ್ರಸಿದ್ಧ ಉತ್ಪನ್ನಗಳ ಗುಣಮಟ್ಟ ಮತ್ತು ನಗರದ ಪ್ರವಾಸೋದ್ಯಮದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.
ಆದ್ದರಿಂದ ದಸರಾ ೨೦೨೬ರ ಅವಧಿಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ವಿಶೇಷ ತಪಾಸಣೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ದಸರಾ ೨೦೨೬ರ ಅವಧಿಗೆ ವಿಶೇಷ “ಆಹಾರ ಮತ್ತು ನಕಲಿ ಉತ್ಪನ್ನ ತಡೆ ದಳವನ್ನು ಕೂಡಲೇ ರಚಿಸಬೇಕು. ಈ ವಿಶೇಷ ದಳದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು, ಸಂಬAಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಅಗತ್ಯವಿರುವ ಇತರೆ ಇಲಾಖೆಗಳ ಸಿಬ್ಬಂದಿಯನ್ನು ಒಳಗೊಂಡು ಜಂಟಿ ತಪಾಸಣಾ ತಂಡ ರಚಿಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಬಳಕೆಗೆ ಯೋಗ್ಯವಲ್ಲದ, ಕಾನೂನು ರೀತ್ಯಾ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿಗಳಿAದ ವಶಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮೈಸೂರು ಅರಮನೆ, ಚಾಮುಂಡಿಬೆಟ್ಟ, ದೇವರಾಜ ಮಾರುಕಟ್ಟೆ. ಕೆ.ಆರ್. ವೃತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ, ಚರ್ಚ್ ಸುತ್ತಮುತ್ತ ಹಾಗೂ ದಸರಾ ಕಾರ್ಯಕ್ರಮ ನಡೆಯುವ ಪ್ರದೇಶಗಳು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಮಾರುಕಟ್ಟೆ ಪ್ರದೇಶಗಳಲ್ಲಿ ನಿಯಮಿತ ತಪಾಸಣೆ ನಡೆಸಬೇಕು.
ಮೈಸೂರು ಪಾಕ್, ಸ್ಯಾಂಡಲ್ ಆಯಿಲ್, ಸ್ಯಾಂಡಲ್ ಸೋಪ್ ಹಾಗೂ ಇತರೆ ಮೈಸೂರು ವಿಶೇಷ ಉತ್ಪನ್ನಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಅಥವಾ ಕಳಪೆ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ದ ಕಾನೂನುಬದ್ದ ಕ್ರಮ ಕೈಗೊಳ್ಳಬೇಕು. ಆಹಾರ ಪದಾರ್ಥಗಳ ಗುಣಮಟ್ಟ, ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ, ಲೇಬಲ್, ಪ್ಯಾಕಿಂಗ್, ಈSSಂI ಪರವಾನಗಿ, ನೋಂದಣಿ ಹಾಗೂ ಮೂಲದ ವಿವರಗಳನ್ನು ಪರಿಶೀಲಿಸಬೇಕು.
ಅನುಮಾನಾಸ್ಪದ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.
ಪ್ರವಾಸಿಗರಿಗೆ ಅನುಕೂಲವಾಗುವಂತೆ “ಮೈಸೂರು ವಿಶೇಷ ಉತ್ಪನ್ನಗಳನ್ನು ಅಧಿಕೃತ, ವಿಶ್ವಾಸಾರ್ಹ ಮಾರಾಟಗಾರರಿಂದ ಮಾತ್ರ ಖರೀದಿಸಿ’ ಎಂಬ ಜಾಗೃತಿ ಫಲಕಗಳನ್ನು ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಳವಡಿಸಬೇಕು. ಸಾರ್ವಜನಿಕರು ನಕಲಿ ಅಥವಾ ಕಳಪೆ ಉತ್ಪನ್ನಗಳ ಕುರಿತು ದೂರು ನೀಡಲು ವಿಶೇಷ ಸಹಾಯವಾಣಿ, ದೂರು ಸ್ವೀಕಾರ ವ್ಯವಸ್ಥೆ ಕಲ್ಪಿಸಬೇಕು.
ದಸರಾ ಅವಧಿಯಲ್ಲಿ ದಿನನಿತ್ಯದ ತಪಾಸಣೆ ಹಾಗೂ ವಶಪಡಿಸಿಕೊಂಡ ನಕಲಿ, ಕಳಪೆ ಉತ್ಪನ್ನಗಳ ಕುರಿತು ವರದಿ ಸಿದ್ಧಪಡಿಸಿ ಸಂಬAಧಪಟ್ಟ ಮೇಲಾಧಿಕಾರಿಗಳಿಗೆ ಸಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದು, ಮೈಸೂರಿನ ಹೆಸರಿನಲ್ಲಿ ಮಾರಾಟವಾಗುವ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವುದು ಹಾಗೂ ಪ್ರವಾಸಿಗರ ಆರೋಗ್ಯ ಮತ್ತು ಹಿತಾಸಕ್ತಿಯನ್ನು ರಕ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ.
ಆದ್ದರಿಂದ ದಸರಾ ೨೦೨೬ರ ಪೂರ್ವದಲ್ಲಿಯೇ ವಿಶೇಷ ದಳವನ್ನು ರಚಿಸಿ, ದಸರಾ ಮುಗಿಯುವವರೆಗೆ ಹಾಗೂ ಮುಗಿದ ನಂತರವು ನಿರಂತರ ತಪಾಸಣೆ ಮತ್ತು ನಿಗಾ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.