Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಂಬಾ ವಿಲಾಸ ಅರಮನೆಯಿಂದ ಕಾಡಿನ ಶಿಬಿರಗಳಿಗೆ ಹೋದ ದಸರಾ ಆನೆಗಳು


*ದಸರಾ ಯಶಸ್ವಿಗೊಳಿಸಿಕೊಟ್ಟ ಗಜಪಡೆಗೆ ಭಾವುಕ ಬೀಳ್ಕೋಡುಗೆ

ಮೈಸೂರು: ಈ ಬಾರಿ ವಿಜೃಂಭಣೆಯಿAದ ಅದ್ಧೂರಿಯಾಗಿ ಜರುಗಿದ ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದ ಜಂಬೂಸವಾರಿಯನ್ನು ಯಶಸ್ವಿಗೊಳಿಸಿಕೊಟ್ಟಿರುವ ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಗಜಪಡೆ ಗುರುವಾರ ಅಂಬಾ ವಿಲಾಸ ಅರಮನೆಯಿಂದ ಕಾಡಿನಲ್ಲಿರುವ ತಮ್ಮ ಶಿಬಿರಗಳಿಗೆ ಹೊರಟು ಹೋದವು.
ತವರು ಮನೆಗೆ ಹೊರಟು ನಿಂತ ದಸರಾ ಆನೆಗಳಿಗೆ ಗುರುವಾರ ಬೆಳಗ್ಗೆ ಅರಮನೆಯ ಆವರಣದಲ್ಲಿ ಮಜ್ಜನ ಮಾಡಿಸಲಾಯಿತು. ಬಳಿಕ ಸಾಂಪ್ರದಾಯಿಕ ಪೂಜೆಯೊಂದಿಗೆ ಬೀಳ್ಕೊಡಲಾಯಿತು. ಈ ವೇಳೆ ಅರಮನೆ ಅಂಗಳದಲ್ಲಿ ಭಾವನಾತ್ಮಕ ವಾತಾವರಣ ನಿರ್ವಾಣವಾಗಿತ್ತು.
ದಸರಾ ಆರಂಭದಿAದಲೂ ಅರಮನೆ ಆವರಣದಲ್ಲಿ ಜನರ ಆಕರ್ಷಣೆಯಾ ಕೇಂದ್ರವಾಗಿದ್ದ ಗಜಪಡೆಯನ್ನು ಅವುಗಳ ಸ್ವಸ್ಥಾನಗಳಿಗೆ ಕಳುಹಿಸಿಕೊಡುವ ಕ್ಷಣ ಅನೇಕರಿಗೆ ಬೇಸರ ಮೂಡಿಸಿತು. ದಿನನಿತ್ಯ ಆನೆಗಳ ತಾಲೀಮು ವೀಕ್ಷಿಸಿ ಸಂಭ್ರಮಿಸುತ್ತಿದ್ದ ಮೈಸೂರಿನ ಜನರು, ತಮ್ಮ ನೆಚ್ಚಿನ ಆನೆಗಳು ಲಾರಿಗಳನ್ನೇರಿ ಹೊರಡುವುದನ್ನು ಮೌನವಾಗಿ ಭಾವುಕರಾಗಿ ನೋಡುತ್ತಿದ್ದರು.
ಕಳೆದ ಎರಡು ತಿಂಗಳ ಒಡನಾಟದಲ್ಲಿ ನಗರದ ಜನರೊಂದಿಗೆ ಬೆರೆತಿದ್ದ ಆನೆಗಳಿಗೂ ತಮ್ಮ ನೆಲೆಗಳಿಗೆ ಮರಳುವುದು ಅನಿವಾರ್ಯವಾಗಿತ್ತು.
ಸಾಂಪ್ರದಾಯಿಕ ಪೂಜೆ;
ದಸರಾ ವೇಳೆ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಗೆ ಬಂದಿದ್ದ ಆನೆಗಳನ್ನು ಇದೀಗ ಅದೇ ದ್ವಾರದ ಬಳಿ ಆನೆಗಳನ್ನು ಸಾಲಾಗಿ ನಿಲ್ಲಿಸಿ, ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಬೂದುಗುಂಬಳ ಒಡೆದು ದೃಷ್ಟಿ ತೆಗೆದು, ಆನೆಗಳಿಗೆ ವಿವಿಧ ಬಗೆಯ ಹಣ್ಣುಗಳು ಹಾಗೂ ಬೆಲ್ಲವನ್ನು ನೀಡಲಾಯಿತು. ಈ ವೇಳೆ ಸಿಎಫ್ ಡಾ. ಎಸ್. ರವಿಶಂಕರ್, ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ, ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್, ಆರ್‌ಎಫ್‌ಒ ಮಾಙಚಮ್ಮ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿಯ ಅಧಿಕಾರಿಗಳು ಹಾಜರಿದ್ದರು.
ಪೂಜಾ ಕಾರ್ಯದ ನಂತರ ವಾವುತರು ಮತ್ತು ಕಾವಾಡಿಗಳ ಕುಟುಂಬದವರಿಗೆ ಉಪಾಹಾರ ವ್ಯವಸ್ಥೆ ವಾಡಲಾಗಿತ್ತು. ಆನೆ ಶಿಬಿರಗಳಿಗೆ ಮರಳುವ ಸಿಬ್ಬಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಬಳಿಕ ಆನೆಗಳನ್ನು ಒಂದೊAದಾಗಿ ಲಾರಿಗಳಿಗೆ ಹತ್ತಿಸಿ ಅವುಗಳ ಮೂಲ ಶಿಬಿರಗಳಿಗೆ ಕಳುಹಿಸಲಾಯಿತು.
ದಸರಾ ದಿನಗಳಲ್ಲಿ ಅರಮನೆ ಆವರಣದ ಸಂಭ್ರಮದ ಭಾಗವಾಗಿದ್ದ ಮಾವುತರು ಮತ್ತು ಕಾವಾಡಿಗಳ ಕುಟುಂಬದ ಸದಸ್ಯರು ಕೂಡ ತಮ್ಮ ಊರುಗಳತ್ತ ತಮ್ಮ ಆನೆಗಳೊಂದಿಗೆ ಲಾರಿಯನ್ನೇರಿದರು.
ಈ ಬಾರಿ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಮೊದಲ ಬಾರಿಗೆ ಗಮನ ಸೆಳೆದ ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಗಜಪಡೆ, ದಸರಾ ಕರ್ತವ್ಯವನ್ನು ಯಶಸ್ವಿಯಾಗಿ ಮುಗಿಸಿದ ತೃಪ್ತಿಯೊಂದಿಗೆ ಎಲ್ಲರಿಗೂ ಟಾಟಾ ಬೈ ಬೈ ಹೇಳಿ ಕಾಡಿನತ್ತ ಹೊರಟಿತು. ಅಂಬಾರಿ ಹೊತ್ತ ಪ್ರಶಾಂತ, ನಿಶಾನೆ ಆನೆಯಾಗಿ ಸಾಗಿದ ಅಭಿಮನ್ಯು ಸೇರಿದಂತೆ ದಸರಾ ಮೆರವಣಿಗೆಯ ಮೆರುಗು ಹೆಚ್ಚಿಸಿದ್ದ ಆನೆಗಳಿಗೆ ಜನರು ಕೈಬೀಸಿ ವಿದಾಯ ಹೇಳಿದರು.
ಅರಮನೆ ಆವರಣದಿಂದ ಲಾರಿಗಳಲ್ಲಿ ಹೊರಟ ಆನೆಗಳನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಕೈಬೀಸಿ ಅಭಿನಂದಿಸಿದರು. ದಸರಾ ಯಶಸ್ಸಿನ ನೆನಪುಗಳನ್ನು ಹೊತ್ತು ಕಾಡಿನತ್ತ ಮರಳಿದ ಗಜಪಡೆಗೆ ಕೊನೆ ಬಾರಿಗೆ ಕಣ್ತುಂಬಿಕೊAಡರು.