
ತಂಬಾಕು ಹರಾಜು ಪ್ರಕ್ರಿಯೆ ಆರಂಭ ಪ್ರತಿ ಕೆಜಿ ತಂಬಾಕಿಗೆ ರೂ. 270 ರೂ
ಪಿರಿಯಾಪಟ್ಟಣ : ಬರಗಾಲದಿಂದ ರೈತ ಕಂಗಲಾಗಿದ್ದು ತಂಬಾಕಿಗೆ ಉತ್ತಮ ಬೆಲೆ ನೀಡಿ ರೈತರ ಹಿತ ಕಾಪಾಡಬೇಕು ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದರು.
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2026-27 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಿನಾದ್ಯಂತ ಬರ ಆವರಿಸಿದ್ದು ರೈತರು ತತ್ತರಿಸಿ ಹೋಗಿದ್ದು ತಂಬಾಕು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಾರದೆ ತಂಬಾಕು ಬೆಳೆ ಕುಂಠಿತವಾಗಿ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ತಂಬಾಕು ಮಂಡಳಿ ರೈತರ ನೆರವಿಗೆ ಧಾವಿಸಿ ಸೂಕ್ತ ಬೆಂಬಲ ಬೆಲೆ ನೀಡಬೇಕು ಇಂದು ಹರಾಜು ಪ್ರಕ್ರಿಯೆ ಆರಂಭವಾಗಿ ಆರಂಭಿಕವಾಗಿ ಮೊದಲ ದಿನವೇ ಉತ್ಕೃಷ್ಟ ತಂಬಾಕು ಪ್ರತಿ ಕೆ.ಜಿ.ಗೆ ರೂ.270 ನೀಡಲಾಗಿದೆ. ಕಳೆದ ವರ್ಷ ಮಾರುಕಟ್ಟೆ ಪ್ರಾರಂಭವಾದಾಗ 320 ಪ್ರಾರಂಭಿಕ ಬೆಲೆ ನೀಡಿದ್ದರು ನಂತರ ಕಡಿಮೆ ಬೆಲೆ ನೀಡಿದ್ದರು ಇದರಿಂದ ರೈತರು ಸಂಕಷ್ಟವನ್ನು ಅನುಭವಿಸಿದ್ದರು.
ಕಂಪನಿಗಳು ನೀಡುತ್ತಿರುವ ಈ ಬೆಲೆಯ ಬಗ್ಗೆ ನನಗೆ ಬೇಸರವಿದೆ ಈ ಬೆಲೆ ರೈತನ ಪರಿಶ್ರಮಕ್ಕೆ ತಕ್ಕ ಬೆಲೆ ಅಲ್ಲ, ತಂಬಾಕು ಬೆಳೆಯಲು ಖರ್ಚು ವೆಚ್ಚಗಳು ಹೆಚ್ಚಾಗಿರುವ ಕಾರಣ ಈ ಬೆಲೆ ಸಾಲುವುದಿಲ್ಲ ಹಾಗಾಗಿ ಪ್ರತಿ ಕೆಜಿಗೆ ಕನಿಷ್ಠ 300 ರಿಂದ 350 ರೂಪಾಯಿ ಸರಾಸರಿ ಬೆಲೆ ನೀಡಿದರೆ ಮಾತ್ರ ರೈತನಿಗೆ ನೆಮ್ಮದಿ ಸಿಗುತ್ತದೆ ಹಾಗಾಗಿ ಬೆಲೆ ಕಡಿಮೆ ಮಾಡದೆ ಉತ್ತಮ ಸರಾಸರಿ ಬೆಲೆ ನೀಡಬೇಕು
ಈ ವರ್ಷ ತಂಬಾಕು ಮಂಡಳಿಯವರು ಕೇವಲ 56 ಮಿಲಿಯನ್ ಕೆಜಿ ಬೆಳೆಯುವಂತೆ ನಿಗದಿ ಮಾಡಿದ್ದಾರೆ ಆದ್ದರಿಂದ ತಂಬಾಕು ಮಂಡಳಿ ಹಾಗೂ ಅಧಿಕಾರಿಗಳು ರೈತರು ಬೆಳೆದಿರುವ ತಂಬಾಕಿಗೆ ಉತ್ತಮ ಬೆಲೆ ನೀಡಬೇಕು ಎಂದು ಹೇಳಿದರು
ಮಾರುಕಟ್ಟೆ ಪ್ರಾರಂಭ ಮಾಡುವಾಗ ಸಂಸದರು ಭೇಟಿ ನೀಡಬೇಕು:
ಕರ್ನಾಟಕದಲ್ಲಿ ಬೆಳೆಯುವ ತಂಬಾಕಿನಲ್ಲಿ ಶೇಕಡಾ 60 ರಿಂದ 70 ರಷ್ಟು ತಂಬಾಕನ್ನು ಪಿರಿಯಾಪಟ್ಟಣ ತಾಲೂಕಿನಲ್ಲೇ ಬೆಳೆಯುತ್ತಾರೆ ಆದರೂ ಸಂಸದರು ಮಾರುಕಟ್ಟೆ ಪ್ರಾರಂಭದ ದಿನ ಬೇರೆ ತಾಲೂಕು ಮಾರುಕಟ್ಟೆಗೆ ಹೋಗುತ್ತಾರೆ ಆದರೆ ಪಿರಿಯಾಪಟ್ಟಣಕ್ಕೆ ಬರುತ್ತಿಲ್ಲ ತಂಬಾಕು ಮಂಡಳಿ ಕೇಂದ್ರ ಸರ್ಕಾರದ ಅಧೀನಕ್ಕೆ ಬರುವುದರಿಂದ ನಮ್ಮ ಮಾತಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ ಆದ್ದರಿಂದ ಮಾರುಕಟ್ಟೆ ಪ್ರಾರಂಭ ದಿನ ಸಂಸದರು ಪಿರಿಯಾಪಟ್ಟಣ ಮಾರುಕಟ್ಟೆಗೆ ಬಂದು ಅಧಿಕಾರಿಗಳಿಗೆ ಹೆಚ್ಚಿನ ಬೆಲೆ ನೀಡಲು ಸೂಚನೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕಾಫ್ ಕಮಿಟಿ ಮಾಜಿ ಅಧ್ಯಕ್ಷ ಹುಣಸೆಕುಪ್ಪೆ ಚಂದ್ರೇಗೌಡ, ರೈತ ಮುಖಂಡ ತಂಬಾಕು ಮಂಡಳಿ ಹರಾಜು ಅಧೀಕ್ಷಕರಾದ ಸಿದ್ದರಾಜು, ಧನರಾಜ್, ಸವಿತಾ ರೈತ ಮುಖಂಡರಾದ ಸ್ವಾಮಿಗೌಡ, ಮಲ್ಲಿನಾಥಪುರ ಗಣೇಶ್, ಹೆಮ್ಮಿಗೆ ಮಹೇಶ್ ಸೇರಿದಂತೆ ರೈತರು
ಉಪಸ್ಥಿತರಿದ್ದರು.