Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಳೆದ ವರ್ಷದ ದಸರಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಕಾರ್ತಿಕ್ ಅಪರಾಧಿ ಎಂದು ಘೋಷಣೆ

ಮೈಸೂರು: ಕಳೆದ ವರ್ಷ ನಡೆದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾರ್ತಿಕ್ (32) ಅಪರಾಧಿ ಎಂದು ಇದೀಗ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಿರುವ ಮೈಸೂರಿನ ಶೀಘ್ರಗತಿ ನ್ಯಾಯಾಲಯ, ಶುಕ್ರವಾರ ಮೈಸೂರು ತಾಲೂಕಿನ ಸಿದ್ದಲಿಂಗಪುರದ ನಿವಾಸಿಯಾದ ಕಾರ್ತಿಕ್‌ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಘಟನೆ ದಿನದಂದು ದಸರಾ ಸಮಯದಲ್ಲೇ ಕೃತ್ಯವೆಸಗಿದ್ದ ಆರೋಪಿಗೆ ಇದೀಗ ದಸರಾ ಮಹೋತ್ಸವ ಸಮಯದಲ್ಲೇ ಶಿಕ್ಷೆ ವಿಧಿಸಿರುವುದು…

Read More

ಶನಿವಾರ ಮೈಸೂರಿಗೆ ಬರಲಿವೆ 150 ಕೋಣಗಳು; ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ

ಮೈಸೂರು; ನಾಡ ಹಬ್ಬ ದಸರಾದಲ್ಲಿ ನಡೆಯಲಿರುವ ಎರಡು ದಿನಗಳ ಕಂಬಳ ಕ್ರೀಡೆಗೆ 150 ಕೋಣಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳು ಶನಿವಾರ ಸಂಜೆ ಮೈಸ್ರರಿಗೆ ಆಗಮಿಸಲಿವೆ ಎಂದು ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ತಿಳಿಸಿದರು.ಗುರುವಾರ ಮೈಸೂರಿನ ಸಾತಗಳ್ಳಿಯಲ್ಲಿ ನಿರ್ಮಿಸಲಾಗಿರುವ ಕಂಬಳ ಕ್ರೀಡೆಯ ಟ್ಯಾçಕ್‌ನ್ನು ಹಾಗೂ ಇಲ್ಲಿ ಮಾಡಲಾಗಿರುವ ಸೌಲಭ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಂಬಳ ಕ್ರೀಡೆಗೆ ಒಟ್ಟು 150 ಕೋಣಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ಇದಲ್ಲದೆ ಇನ್ನೂ 150 ಕೋಣಗಳ ಮಾಲೀಕರು…

Read More

ಅಪ್ಪ-ಮಗನ ಹೆಗಲಿಗೆ ಮಹತ್ತರ ಜವಾಬ್ದಾರಿ

ಮೈಸೂರು; ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾ ಎರಡೂ ಕಡೆ ಅಂಬಾರಿ ಹೊರುವ ಜವಾಬ್ದಾರಿ ಅಪ್ಪ-ಮಗನ ಹೆಗಲಿಗೆ ವಹಿಸಲಾಗಿದೆ. ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನ ನಡೆಯುವ ಐತಿಹಾಸಕ ಜಂಬೂಸವಾರಿಯಲ್ಲಿ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿ ಕುಳಿತಿರುವ ಚಿನ್ನದ ಅಂಬಾರಿಯನ್ನು ಬೆನ್ನ ಮೇಲೆ ಹೊರುವ ಪ್ರಶಾಂತ ಆನೆಯ ಮಾವುತ ಚಿಣ್ಣಪ್ಪ ಮತ್ತು ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊರುತ್ತಿರುವ ಧನಂಜಯ ಆನೆಯ ಮಾವುತ ಭಾಸ್ಕರ್ ಅವರು ತಂದೆ ಮಗನಾಗಿದ್ದಾರೆ. ಅಂಬಾರಿಯನ್ನು…

Read More

ದಸರಾ ಪುಸ್ತಕ ಮೇಳದಲ್ಲಿ ವಿವಿಧ ಲೇಖಕರ ಕೃತಿಗಳ ಲೋಕಾರ್ಪಣೆ

ಮೈಸೂರು; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ- 2026ರ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದ ರಾಷ್ಟçಕವಿ ಡಾ. ಜಿ.ಎಸ್. ಶಿವರುದ್ರಪ್ಪ ಸಾಂಸ್ಕöÈತಿಕ ವೇದಿಕೆಯಲ್ಲಿ ವಿವಿಧ ಲೇಖಕರ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ನಗರದ ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ಆಯೋಜಿಸಲಾಗಿರುವ ಐದನೇ ದಿನದ ಪುಸ್ತಕ ಮೇಳದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಉದ್ಘಾಟಿಸಿ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ….

Read More

ವಿದ್ಯುತ್ ದೀಪಗಳ ಬೆಳಕಿನ ಹಿಂದಿದೆ ಕಾಣದ ಕೈಗಳ ಪರಿಶ್ರಮ

*ಸೆಸ್ಕ್ ವತಿಯಿಂದ ದೀಪಾಲಂಕಾರ ನಿರ್ವಹಣೆ, ಮೇಲ್ವಿಚಾರಣೆಒಟ್ಟು 642 ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆಮೈಸೂರು: ವಿಶ್ವ ಪ್ರಸಿದ್ದ ನಾಡಹಬ್ಬ ಮೈಸೂರು ದಸರಾದ ವೈಭವಕ್ಕೆ ಕಿರೀಟವಿಟ್ಟಂತೆ ಅರಮನೆ ನಗರಿ ಮೈಸೂರು ನಗರ ಪ್ರತಿವರ್ಷವೂ ವಿದ್ಯುತ್ ದೀಪಾಲಂಕಾರದ ಸೌಂದರ್ಯದಿAದ ಲಕ್ಷಾಂತರ ಜನರು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರದ ಸಂಭ್ರಮದ ಹಿಂದೆ ವಿದ್ಯುತ್ ವ್ಯವಸ್ಥೆಯ ನಿರ್ವಹಣೆಗಾಗಿ ಶ್ರಮಿಸುವ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮವಿದೆ.ನಾಡ ಹಬ್ಬ ಮೈಸೂರು ದಸರಾ ಬಂತೆAದರೆ ಅರಮನೆ ಮಾತ್ರವಲ್ಲದೇ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ…

Read More

ಮೈಸೂರಿನ ಪರಂಪರೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಚಿತ್ರ ನಟ ಬಿ. ಸುರೇಶ್

ಮೈಸೂರು: ಮೈಸೂರು ಎಂದರೆ ಕೇವಲ ಅರಮನೆಗಳ ನಗರವಲ್ಲ, ಬದಲಿಗೆ ಪರಂಪರೆಯನ್ನು ತೆರೆದಿಡುವಂತಹ ಸುಂದರ ಊರು. ಸಾಂಪ್ರದಾಯಿಕ ಕಟ್ಟಡಗಳು ಮತ್ತು ಇತಿಹಾಸವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಖ್ಯಾತ ನಟ ಹಾಗೂ ನಿರ್ದೇಶಕ ಬಿ. ಸುರೇಶ್ ಹೇಳಿದರು.ಗುರುವಾರ ನಗರದ ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಲಾಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ಧ ದಸರಾ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಹಸಿರು ಭಾವುಟ ತೋರಿಸುವ ಮೂಲಕ…

Read More

ದಸರಾದ ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚಿಸಿದ ಚಿಗುರು ಕವಿಗಳು

ಮೈಸೂರು : ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 5 ನೇ ದಿನವಾದ ಗುರುವಾರ ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆದ ಚಿಗುರು ಕವಿಗೋಷ್ಠಿಯಲ್ಲಿ ಬಾಲಕರು, ಬಾಲಕಿಯರು ಕವಿತೆಗಳನ್ನು ವಾಚಿಸಿದರು.ದಾವಣಗೆರೆಯ ಎ.ಟಿ.ಅದ್ವಿಕ ಕಾವ್ಯ “ಕನ್ನಡಕ್ಕೆ ನನ್ನ ಜೈಂಕಾರ” ಶಿರ್ಷಿಕೆಯಡಿ ಕವಿತೆ ವಾಚಿಸಿ ಕನ್ನಡಪ್ರೇಮ ಮೆರೆದರೆ, ಲಾವಣ್ಯ ಅವರು ‘ಮನುಷ್ಯ ಮತ್ತು ಯಂತ್ರ’ ಎಂಬ ಶಿರ್ಷೆಕಯಡಿ ಕವಿತೆ ವಾಚಿಸಿ ಯಂತ್ರವು ಮನುಷ್ಯರ ಉದ್ಯೋಗವಬ್ನು ಕಸಿದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಂಜನಗೂಡಿನ…

Read More

10 ಲಕ್ಷ ವೆಚ್ಚದಲ್ಲಿ ಕನಕ ಭವನ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ

ನಂಜನಗೂಡು; ತಾಲೂಕಿನ ಸಿಂಧುವಳ್ಳಿಪುರ ಗ್ರಾಮದಲ್ಲಿ ಗ್ರಾಮಸ್ಥರ ಬೇಡಿಕೆಯಂತೆ 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ಕನಕ ಸಮುದಾಯ ಭವನವನ್ನು ನಿರ್ಮಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.   ಅವರು ಮಂಗಳವಾರ ತಾಲೂಕಿನ ಸಿಂಧುವಳ್ಳಿಪುರ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಕನಕ ಭವನ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.  2023 -24ನೇ ಸಾಲಿನಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ನೀಡಿದ್ದ 25 ಕೋಟಿ ವಿಶೇಷ ಅನುದಾನದಲ್ಲಿ 20 ಕೋಟಿ ಅನುದಾನವನ್ನು ಸಾಮಾನ್ಯ ವರ್ಗದ ಬೀದಿಗಳ ಅಭಿವೃದ್ಧಿಗೆ ಮೀಸಲಾಗಿರಿಸಲಾಗಿತ್ತು, 2.5…

Read More

ಎಸ್ಸಿ-ಎಸ್ಟಿ ಸಮಾಲೋಚನಾ ಸಭೆಯಲ್ಲಿ ದೂರುಗಳ ಸುರಿಮಳೆ 

ಮೂಲಭೂತ ಸೌಕರ್ಯಗಳ ಕೊರತೆ – ಕೆಂಚನಹಳ್ಳಿ ಗ್ರಾಮಸ್ಥರ ಅಸಮಾಧಾನ   ಎಚ್.ಡಿ.ಕೋಟೆ : ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ  ಎಸ್ಸಿ -ಎಸ್ಟಿ ಸಮುದಾಯದ ಜೊತೆ ಶಾಸಕರು ಹಾಗೂ ಅಧಿಕಾರಿಗಳ ನಡುವಿನ ಸಮಾಲೋಚನಾ ಸಭೆಯಲ್ಲಿ ದೂರುಗಳ ಸರಮಾಲೆಯೇ ಕೇಳಿಬಂತು. ತಾಲೂಕಿನ ವಿವಿಧ ಭಾಗಗಳಿಂದ ಸಮಸ್ಯೆಗಳನ್ನು ಹೊತ್ತು ತಂದ ಜನರು, ಇಷ್ಟು ದಿನ ತಾವು ಅನುಭವಿಸುತ್ತಿರುವ, ಸಮಸ್ಯೆಗಳು ಹಾಗು  ತೊಂದರೆಗಳನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತಂದರು.  ಸಭೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸದ್ದು ಮಾಡಿತ್ತು.   ಸರಿಯಾದ ಚರಂಡಿ ವ್ಯವಸ್ಥೆ …

Read More

ದಸರಾ ಕ್ರೀಡಾಕೂಟದ ಸಿಎಂ ಕಪ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ದಸರಾ ಕ್ರೀಡಾಕೂಟ ಸಿಎಂ ಕಪ್-2026″ರ ವಿಜೇತರಿಗೆ ಬುಧವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಶಾಸಕ ತನ್ವೀರ್ ಸೇಠ್ ಮಾತನಾಡಿ, ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಎಂದು ಪ್ರೇರೆಪಿಸುತ್ತಿಲ್ಲ. ಅತೀ ಹೆಚ್ಚು ಅಂಕ ಪಡೆಯಬೇಕು ಎಂದು ನೀರಿಕ್ಷಿಸುತ್ತಿದ್ದಾರೆ. ಎಲ್ಲರೂ ವೈದ್ಯರು, ಎಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ ಎಂದು ಹೇಳಿದರು.ಈ ನಾಡನ್ನು ಕಟ್ಟಲು ಎಲ್ಲಾ…

Read More