Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಹನೀಯರ ಜಯಂತಿಗಳನ್ನು ಆಚರಿಸುವುದರಿಂದ ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ; ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮಹನೀಯರ ಜಯಂತಿಗಳನ್ನು ಆಚರಿಸುವುದರಿಂದ ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಸೋಮವಾರ ನಗರದ ಕಲಾಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಮೈಸೂರು ಮೈಸೂರು ಮಹಾನಗರ ಪಾಲಿಕೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ವತಿಯಿಂದ ಆಯೋಜಿಸಾಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ…

Read More

ಆಡಳಿತದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್

ಕೆ.ಆರ್.ನಗರ;ಸಾಮಾಜಿಕನ್ಯಾಯದ ಹರಿಕಾರಎನಿಸಿದ ಬಸವಣ್ಣ ನಾಲ್ವಡಿಯವರ ನಂತರ ಸಂವಿಧಾನಾತ್ಮಕ ರಾಜಕೀಯದ ರಾಜಕಾರಣದಲ್ಲಿ ಸಾಮಾಜಿಕನ್ಯಾಯದ ಬಂಡಿಯನ್ನು ಎಳೆದು ಆಡಳಿತದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿದವರು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸ್‌ರವರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.ಪಟ್ಟಣದ ರೋಟರಿಭವನದಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಡಿ.ದೇವರಾಜಅರಸುರವರ ನೆನೆಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಅಧಿಕಾರವಧಿಯಲ್ಲಿ ಕನ್ನಡವನ್ನು ಆಡಳಿತಭಾಷೆ ಮಾಡಿದ ಕೀರ್ತಿ ಪಡೆದ ಅರಸರು, ಭೂಸುಧಾರಣೆ ಕಾಯ್ದೆ, ಉಳುವವನೆ ಭೂಮಿಒಡೆಯ, ಜೀತ ಪದ್ದತಿ ವಿರುದ್ದ ಕಾನೂನು, ಮಲಹೊರುವ ಪದ್ದತಿ…

Read More

ಅ.26ರ0ದು ನಂಜನಗೂಡಿನಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿ

ನಂಜನಗೂಡು; ಅ.26ರ ಸೋಮವಾರದಂದು ನಂಜನಗೂಡಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಅದ್ದೂರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಗ್ರಾಮಗಳ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ನಾಯಕರ ಸಂಘದ ಅಧ್ಯಕ್ಷ ಕೆ.ನಾಗರಾಜು ಹೇಳಿದರು.  ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   ಅಂದು ಬೆಳಗ್ಗೆ 10 ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಾಲ್ಮೀಕಿ ಅವರ ಪುತ್ಥಳಿಯನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ…

Read More

ಜೀವನಾಧಾರಿತ ಕೃಷಿ ಪದ್ದತಿಯ ಬಳಕೆ ಕುರಿತು ಕಾರ್ಯಗಾರ

ಎಚ್ ಡಿ ಕೋಟೆ : ತಾಲೂಕಿನ  ಬಸವನಗಿರಿಹಾಡಿಯ ಆಶ್ರಮ ಶಾಲೆಯಲ್ಲಿ ಗ್ರೀನ್ ಇಂಡಿಯ ಟ್ರಸ್ಟ್ ವತಿಯಿಂದ  ಜೀವನಾಧಾರಿತ ಕೃಷಿ ಪದ್ದತಿಯ ಬಳಕೆ ಮತ್ತು ಮೂಲಭೂತ ಸೌಕರ್ಯ ಅನುಷ್ಠಾನ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದ  ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ  ನೇತ್ರಾವತಿ,  ಆದಿವಾಸಿಗಳು ತಮ್ಮ  ಮನೆಯ ಹಿತ್ತಲಿನಲ್ಲೇ  ಸೌತೆ, ಬದನೆ, ಸೊಪ್ಪು, ಮರದ ಅವರೆ ಸೇರಿದಂತೆ ಇನ್ನಿತರ  ಬೆಳೆ ಬೆಳೆದು ಯಾವುದೇ ರಾಸಾಯನಿಕ ಮಿಶ್ರಣ ಇಲ್ಲದೆ ತರಕಾರಿ, ಸೊಪ್ಪುಗಳನ್ನು  ತಿನ್ನಬಹುದು. ಇದರಿಂದ ಆರೋಗ್ಯ ಕಾಪಾಡುವುಕೊಳ್ಳುವುದರ ಜೊತೆಗೆ…

Read More

ಚಾಮುಂಡಿಬೆಟ್ಟದಲ್ಲಿ ರಸ್ತೆಗೆ ಉರುಳಿ ಬಿದ್ದ ಬಂಡೆ !

ಮೈಸೂರು; ನಗರದ ಚಾಮುಂಡಿಬೆಟ್ಟದಲ್ಲಿ ಬಂಡೆಯೊAದು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ.ಚಾಮುಂಡಿಬೆಟ್ಟದ ಉತ್ತನಹಳ್ಳಿ ರಸ್ತೆ ಮಾರ್ಗದಲ್ಲಿ ಜೋರು ಮಳೆಯಿಂದಾಗಿ ಕುಸಿದಿರುವ ಬಂಡೆರಸ್ತೆ ಮದ್ಯೆಗೆ ಬಂದು ಬಿದ್ದಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಸ್ವಲ್ಪ ತೊಂದರೆಯಾಯಿತು. ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬಂಡೆಯನ್ನು ಅಲ್ಲಿಂದ ತೆರವುಗೊಳಿಸಿದರು. ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿಈ ಹಿಂದೆ ಚಾಮುಂಡಿಬೆಟ್ಟದಲ್ಲಿ ಕುಸಿತ ಕಂಡಿತ್ತುನAದಿ ಮಾರ್ಗದಲ್ಲಿ ಕುಸಿತ ಕಂಡು ನಾಲ್ಕೆöÊದು ವರ್ಷ ಬಂದ್ ಆಗಿತ್ತು. ಆಗ್ಗಾಗ್ಗೆ ಚಾಮುಂಡಿಬೆಟ್ಟದಲ್ಲಿ ಕುಸಿಯುತ್ತಿರುವ ಗುಡ್ಡ, ಬಂಡೆಹೆಚ್ಚಿನ ದಟ್ಟಣೆಯಿಂದ ಎದುರಾಗುತ್ತಿದೆಯಾ ಅಪಾಯ…

Read More

ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ

ಮೈಸೂರು; ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಮೈಸೂರು ತಾಲೂಕಿನ ಚಿಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿಯಾದ ರವಿಚಂದ್ರ ಜೆ ಹಾಗೂ ರಾಜೇಶ್.ಜೆ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಆನೆ ಕಾರ್ಯಪಡೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿಕ್ಕಹಳ್ಳಿ ಗ್ರಾಮದ ಶ್ರೀರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿ, ಅವರಿಂದ ಆನೆ ದಂತ ಸಾಗಾಣಿಕೆ ಮಾಡಲು ಬಳಸಿದ್ದ ಬೈಕ್,…

Read More

ಹುಣಸೂರು ಬಂದ್ ಯಶಸ್ವಿ

ಅಂಗಡಿ ಮುಂಗಟ್ಟುಗಳು ಬಂದ್; ಎಂದಿನಂತೆ ಸಂಚರಿಸಿದ ಬಸ್‌ಗಳು — ಮೀಸಲಾತಿ ಮರುಪರಿಶೀಲನೆಗೆ ಆಗ್ರಹ ಹುಣಸೂರು: ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿನ ಪರಿಶಿಷ್ಟ ಜಾತಿಗೆ ಪ್ರಾತಿನಿಧ್ಯ ನೀಡದಿರುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಹುಣಸೂರು ಬಂದ್ ಯಶಸ್ವಿಯಾಯಿತು. ಬಂದ್‌ಗೆ ಬೆಂಬಲವಾಗಿ ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದರೆ, ಸಾರಿಗೆ ಬಸ್‌ಗಳು ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ನಡೆಯಿತು. ಹುಣಸೂರು ತಾಲೂಕಿನ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ ಒಂದೂ ಕ್ಷೇತ್ರವನ್ನು ಮೀಸಲಿಡದಿರುವುದನ್ನು…

Read More

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಶಾಸಕ ಕೆ.ವೆಂಕಟೇಶ್

ಟಿಕೆಎಂ ಸಿಎಸ್ಆರ್ ನಿಧಿಯಲ್ಲಿ ಸುಂಡವಾಳು ಪ್ರೌಢಶಾಲೆಗೆ 10 ಕೊಠಡಿ, ಶೌಚಾಲಯ, ಅಡುಗೆ ಮನೆ ನಿರ್ಮಾಣಕ್ಕೆ ಚಾಲನೆ. ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗ್ರಾಮಾಂತರ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ತಲುಪುವಂತೆ ನೋಡಿಕೊಳ್ಳಲಾಗಿದೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು. ತಾಲ್ಲೂಕಿನ ಸುಂಡವಾಳು ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ಸರ್ಕಾರಿ ಪ್ರೌಢಶಾಲೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ರೂ. 2 ಕೋಟಿ ಸಿಎಸ್ಆರ್ ನಿಧಿಯಲ್ಲಿ ಶಾಲಾ ಕೊಠಡಿ, ಶೌಚಾಲಯ ಮತ್ತು ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ…

Read More

ನೋಡುಗರ ಗಮನ ಸೆಳೆದ ನೃತ್ಯ ರೂಪಕ

ಚಾಮರಾಜನಗರ; ರಾಜ್ಯದ ಗಮನ ಸೆಳೆದಿರುವ ಚಾಮರಾಜನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ೬೪ನೇ ವರ್ಷದ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿರುವ ನಂಜನಗೂಡಿನ ಭರತನಾಟ್ಯ ಕಲಾವಿದೆ ವಿದುಷಿ ರಂಜಿತಾ ಸೋಮಶೇಖರ್ ಶಿಷ್ಯಾವೃಂದದವರಿAದ ನೃತ್ಯರೂಪಕ. ಭಕ್ತಾದಿಗಳ ಗಮನ ಸೆಳೆಯಿತು.ಚಾಮರಾಜನಗರ ಜೈ ಭುವನೇಶ್ವರಿ ಕನ್ನಡ ವೇದಿಕೆ ಅಧ್ಯಕ್ಷ ಜಿ ಬಂಗಾರು ಪ್ರಾಯೋಜನೆ ಮಾಡಿರುವ ನೃತ್ಯರೂಪಕ ಸುಮಾರು ಒಂದು ಗಂಟೆಗಳ ಕಾಲ ಭಕ್ತಾದಿಗಳ ಗಮನ ಸೆಳೆಯಿತುಅ. ೨೮ರ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ವಿವಿಧ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರು…

Read More

ಹೋಟೆಲ್‌ಗಳು , ಉಪಾಹಾರ ಗೃಹಗಳ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ನಗರಪಾಲಿಕೆಯ ಆಯಕ್ತರ ಸೂಚನೆ

ಮೈಸೂರು; ನಗರದ ಹೋಟೆಲ್‌ಗಳು ಹಾಗೂ ಉಪಾಹಾರ ಗೃಹಗಳ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ.ಕೆ.ಸವಿತಾ ಸೂಚಿಸಿದ್ದಾರೆ.ಸ್ವಚ್ಛತೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮೈಸೂರು ನಗರದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಶೌಚಾಲಯ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ನಗರದ ಹೋಟೆಲ್‌ಗಳು ಹಾಗೂ ಉಪಾಹಾರ ಗೃಹಗಳಲ್ಲಿ ಲಭ್ಯವಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಉಚಿತವಾಗಿ ಮುಕ್ತಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಯು ಹೋಟೆಲ್ ಮಾಲೀಕರ ಸಂಘಕ್ಕೆ ಮನವಿ ಮಾಡಿದ್ದಾರೆ.ಮೈಸೂರು ನಗರಕ್ಕೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಾರ್ವಜನಿಕರು, ಮಹಿಳೆಯರು, ಹಿರಿಯ…

Read More