ಎಸ್‌ಐಆರ್ ಕಾರ್ಯಾಚರಣೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸದ ಬಿ.ಎಲ್.ಒಗಳು; ಮಾಜಿ ಮೇಯರ್ ಸಂದೇಶ್‌ಸ್ವಾಮಿ
ಮೈಸೂರು; ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಿಂದ ಎಸ್‌ಐಆರ್ ಕಾರ್ಯಾಚರಣೆ ನಡೆಸುತ್ತಿರುವ ಕೆಲವು ಬಿ.ಎಲ್.ಒ. ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಮಹಾನಗರಪಾಲಿಕೆಯ ಮಾಜಿ ಮೇಯರ್ ಸಂದೇಶ್‌ಸ್ವಾಮಿ ಆರೋಪಿಸಿದರು.ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣಾ ಆಯೋಗದ ಸೂಚನೆಯಂತೆ ಮನೆ-ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಿ ಪರಿಶೀಲನೆ ನಡೆಸಬೇಕಾದ ಬದಲಾಗಿ, ಕೆಲವು ಬಿ.ಎಲ್.ಒ. ಅಧಿಕಾರಿಗಳು ಶಾಲೆಗಳು ಹಾಗೂ ಇತರೆ ಗೌಪ್ಯ ಸ್ಥಳಗಳಲ್ಲಿ ಗುಂಪು-ಗುAಪಾಗಿ ಕುಳಿತುಕೊಂಡು, ಬಿ.ಎಲ್.ಎ.-2ರ ಉಪಸ್ಥಿತಿಯಿಲ್ಲದೆ ಮಧ್ಯವರ್ತಿಗಳ ಮೂಲಕ…