Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಧುನಿಕ ತಂತ್ರಜ್ಞಾನವನ್ನು ವಿವೇಕದಿಂದ ಬಳಸಬೇಕು; ಶ್ರೀ ವಿದ್ಯಾಬಲ್ಲಭತೀರ್ಥಸ್ವಾಮೀಜಿ

ಮೈಸೂರು; ಸಮಯದ ಸದ್ಬಳಕೆ, ವ್ಯಾಸಂಗದತ್ತ ಏಕಾಗ್ರತೆ ಹಾಗೂ ಸಚ್ಚಾರಿತ್ರ‍್ಯ ಮತ್ತು ಸತ್ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾಬಲ್ಲಭತೀರ್ಥಸ್ವಾಮೀಜಿ ತಿಳಿಸಿದರು.ಮೈಸೂರಿನ ವಿಜಯ ವಿಠಲ ವಿದ್ಯಾ ಸಂಸ್ಥೆಗಳಲ್ಲಿ ನಡೆದ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಸಾರ್ಥಕ ಹಾಗೂ ಯಶಸ್ವಿ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಶಿಸ್ತು, ಭಕ್ತಿ, ಸನ್ಮೌಲ್ಯಗಳು ಮತ್ತು ಜವಾಬ್ದಾರಿಯುತ ನಡವಳಿಕೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಆಧುನಿಕ ತಂತ್ರಜ್ಞಾನವನ್ನು ವಿವೇಕದಿಂದ ಬಳಸಬೇಕು ಮತ್ತುಅದುಅಧ್ಯಯನ ಹಾಗೂ ಕರ್ತವ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಚ್ಚರ ವಹಿಸಬೇಕು…

Read More

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ; ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಮೈಸೂರು: ಗಣೇಶೋತ್ಸವ ಎಂದರೆ ಕೇವಲ ಮನೆಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಹಬ್ಬವಲ್ಲ. ಅದು ಭಕ್ತಿ, ಸಂಭ್ರಮ, ಸಂಸ್ಕöÈತಿ, ಪರಂಪರೆ ಹಾಗೂ ಸಮಾಜದ ಒಗ್ಗಟ್ಟನ್ನು ಸಾರುವ ಅಪೂರ್ವ ಸಂದರ್ಭವಾಗಿದೆ. ಇದೇ ಆಶಯದೊಂದಿಗೆ ಮೈಸೂರಿನಲ್ಲಿ ನಡೆಯಲಿರುವ 23ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆ ಈ ಬಾರಿ ಮತ್ತಷ್ಟು ವೈಭವದಿಂದ ನಡೆಯಲು ಸಜ್ಜಾಗಿದೆ.ಮೈಸೂರಿನ ದತ್ತನಗರದಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿ ವತಿಯಿಂದ ಸೆ. 20ರಂದು ನಡೆಯಲಿರುವ 23ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆಯ…

Read More

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಹಿಂದಕ್ಕೆ ಯಾವುದೇ ಉಪಯೋಗ ಆಗಲಿಲ್ಲ; ಹೆಚ್.ವಿಶ್ವನಾಥ್

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಹಿಂದಕ್ಕೆ ಯಾವುದೇ ಉಪಯೋಗ ಆಗಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದರು.ಮಂಗಳವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಮತ್ತೆ ಅಹಿಂದ ಜಪ ಮಾಡುತ್ತಿದ್ದಾರೆ. ಇವರಿಗೆ ಸಂಕಟ ಬಂದಾಗ ಅಹಿಂದ ನೆನಪಾಗುತ್ತದೆ. ಅಧಿಕಾರದಲ್ಲಿ ಇದ್ದಾಗ ಅಹಿಂದಾಗೆ ಏನು ಮಾಡಿಲ್ಲ. ಆದರೆ, ಅಧಿಕಾರ ಹೋಗುವ ಮುನ್ನ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಬ್ಲಾ÷್ಯಕ್ ಮೇಲ್ ಮಾಡಿದ್ದಾರೆ. ಈಗ ಮತ್ತೆ ಅಹಿಂದ ಸಮಾವೇಶ ಮಾಡಿದ್ದಾರೆ. ಆದರೆ…

Read More

ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ; ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

ಮೈಸೂರು; ರಾಜ್ಯ ಬರಕ್ಕೆ ತುತ್ತಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ, ಕೂಡಲೇ ನಿಲ್ಲಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬರಕ್ಕೆ ತುತ್ತಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಸಂದರ್ಭದಲ್ಲೂ ಕಾವೇರಿ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ ಕಾವೇರಿ ಜಲಾಶಯಗಳಿಂದ ನೀರು ಹರಿಸುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ…

Read More

ಸಂಗೀತದಿಂದ ನೆಮ್ಮದಿ ಸಿಗಲಿದೆ. ಡಾ ಆರ್ .ಎಸ್. ಅಶ್ವಿನಿ

ಚಾಮರಾಜನಗರ; ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪಾರಾಗಲು ಸಂಗೀತ ಕೇಳುವ ಹಾಗೂ ಹಾಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾಕ್ಟರ್ ಆರ್ ಎಸ್ ಅಶ್ವಿನಿ ತಿಳಿಸಿದರು ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ಸಾಂಸ್ಕೃತಿಕ ವಿಭಾಗ ಸೋಮವಾರ ಮಧ್ಯಾಹ್ನ ಏರ್ಪಡಿಸಿದಪ್ರತಿಭಾನ್ವೇಷಣೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾಭ್ಯಾಸದ ಜೊತೆಗೆ ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಉದ್ದೇಶ ಪವಾಡ ಪುರುಷರ ಜನಿಸಿದ ಜಾನಪದ ಗಳ ತವರೂರು ಚಾಮರಾಜನಗರ…

Read More

ಪತ್ರಕರ್ತ ಜಿ ಬಂಗಾರು ಗೆ ಸನ್ಮಾನ

ಚಾಮರಾಜನಗರ ಸೆ.7; ಪತ್ರಕರ್ತ ಚಾಮರಾಜನಗರ ವಿಶ್ವವಿದ್ಯಾಲಯ 26, 27 ನೇ ಸಾಲಿನ. ಕ್ರೀಡಾ ಸಲಹೆ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಜಿ ಬಂಗಾರು ರವರಿಗೆ ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು ಸನ್ಮಾನಿಸಿದರು.ನಂತರ ಮಾತನಾಡಿದ ಜಿ ಬಂಗಾರು ವಿವಿ ಕುಲಪತಿ ಎಂ ಆರ್ ಗಂಗಾಧರ್. ದೈಹಿಕ ನಿರ್ದೇಶಕರಾದ ಡಾ ಶಾಂತರಾಜು ರವರ ಮಾರ್ಗದರ್ಶನದಲ್ಲಿ. ಕ್ರೀಡಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರುಜೆಎಸ್ಎಸ್ ಮಹಿಳಾ ಕಾಲೇಜುದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಎಸ್ ಉಮೇಶ್ ಹಾಜರಿದ್ದರು;

Read More

ಋಗ್ವೇದ ಬ್ರಾಹ್ಮಣ ಮತ್ತು ಆರಣ್ಯಕ ಎಂಬ ವಿಷಯದಲ್ಲಿ ಪಿಹೆಚ್.ಡಿ ಪಡೆದ ಎ. ಚಿನ್ಮಯ ದತ್ತ ಘನಪಾಠಿರಿಗೆ ಸನ್ಮಾನ

ಮೈಸೂರು; ಮೈಸೂರಿನ ಪ್ರಮುಖ ಋಗ್ವೇದ ಅಧ್ಯಾಪಕರಾದ ಎ. ಚಿನ್ಮಯ ದತ್ತ ಘನಪಾಠಿ ಅವರು, ಕೇವಲ ೩೨ ವರ್ಷ ವಯಸ್ಸಿನಲ್ಲಿ ಕರ್ನಾಟಕ ಸಂಸ್ಕöÈತ ವಿಶ್ವವಿದ್ಯಾಲಯದಲ್ಲಿ ಋಗ್ವೇದ ಬ್ರಾಹ್ಮಣ ಮತ್ತು ಆರಣ್ಯಕ ಎಂಬ ಅತ್ಯಂತ ವಿಶೇಷ ಹಾಗೂ ಗಂಭೀರ ವಿಷಯದಲ್ಲಿ ಡಾ. ವಂಶೀ ಕೃಷ್ಣ ಘನಪಾಠಿ ಜೀ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಅವರಿಗೆ ಇತ್ತೀಚಿಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸನ್ಮಾನಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದ ವಿದ್ವಾಂಸರಲ್ಲಿ ಇವರೂ ಒಬ್ಬರು. ಇವರ…

Read More

ದಸರಾ ಗಜಪಡೆಗಳಿಗೆ ಭಾರ ಹೊರುವ ತಾಲಿಮು*ಗಂಡು ಆನೆಗಳಿಗೆ ಹಂತ, ಹಂತವಾಗಿ ತೂಕ ಹೆಚ್ಚಳ

ಮೈಸೂರು; ಈ ಬಾರಿ ಅದ್ಧೂರಿಯಾಗಿ ಜರುಗಲಿರುವ ವಿಶ್ವಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ಕಾಡಿನ ವಿವಿಧ ಶಿಬಿರಗಳಿಂದ ಅರಮನೆ ನಗರಿ ಮೈಸ್ರರಿಗೆ ಬಂದಿರುವ ಗಜಪಡೆಗೆ ಇದೀಗ ಭಾರ ಹೊರೆಸುವ ತಾಲೀಮು ಆರಂಭಿಸಲಾಗಿದೆ.ಗಜಪಯಣದ ಮೂಲಕ ಮೈಸೂರಿಗೆ ಬಂದಿರುವ ಮೊದಲ ಹಂತದ ಗಜಪಡೆಗೆ ನಿತ್ಯವೂ ಎರಡು ಹೊತ್ತು ಅರಮನೆಯಿಂದ ಬನ್ನಿಮಂಟಪದ ತನಕ ತಾಲೀಮು ನಡೆಸಲಾಗುತ್ತಿತ್ತು. ನಾಗರೀಕ ಜೀವನಕ್ಕೆ ಆನೆಗಳು ಹೊಂದಿಕೊಳ್ಳುತ್ತಿದ್ದು, ಎಷ್ಟೇ ಜನರು ಎದುರಿಗೆ ಬಂದರೂ, ಹೋದರೂ ನಿಂತಿದ್ದರೂ ಆನೆಗಳು ಕೊಂಚವೂ ಗಲಿಬಿಲಿಗೊಳ್ಳದೆ ನಿತ್ಯವೂ ತಾಲೀಮು ನಡೆಸುತ್ತಿವೆ….

Read More

ಮೊಬೈಲ್ ನ ಮಿತಿಮೀರಿದ ಬಳಕೆ ‘ಸಾಮಾಜಿಕ ಕಾಯಿಲೆ’ಯಾಗಿದೆ; ಜಿ.ಆರ್. ರಾಜೇಶ್ ನಾಯಕ

ಮೈಸೂರು : ಮೊಬೈಲ್ ನ ಮಿತಿಮೀರಿದ ಬಳಕೆ ‘ಸಾಮಾಜಿಕ ಕಾಯಿಲೆ’ಯಾಗಿದೆ ಎಂದು ರಾಧೇ ಪುಸ್ತಕ ಸಂಗ್ರಹ ಮಂದಿರದ ಸಂಸ್ಥಾಪಕ ಜಿ.ಆರ್. ರಾಜೇಶ್ ನಾಯಕ ಹೇಳಿದರು.ಆತ್ಮಶ್ರೀ ಕನ್ನಡ ಸಾಂಸ್ಕöÈತಿಕ ಪ್ರತಿಷ್ಠಾನದ ವತಿಯಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ನಡೆದ ‘ವಿದ್ಯಾರ್ಥಿ ವಿಚಾರಗೋಷ್ಠಿ ಹಾಗೂ ಉಚಿತ ನೋಟ್ ಬುಕ್ ವಿತರಣೆ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಾಯಿಲೆಗೆ ಮೂಲವಾದ ಮೊಬೈಲ್ ಮಾದಕ ವಸ್ತುವಿದ್ದಂತೆ. ಅದರ ನಶೆಗೆ ಮಕ್ಕಳು ಮತ್ತು ಪೋಷಕರಿಬ್ಬರೂ ಒಳಗಾಗಿದ್ದಾರೆ. ಇದರಿಂದ ನೆನಪಿನ ಶಕ್ತಿಯೂ ಕ್ಷೀಣವಾಗಿದೆ….

Read More

ಜನರಲ್ಲಿ ಜಾಗೃತಿ ಮೂಡಿಸಬೇಕಾದ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ : ವಕೀಲ ಆರ್. ನಾಗೇಶ್

ಎಚ್.ಡಿ.ಕೋಟೆ: ಪತ್ರಿಕಾರಂಗವು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದು, ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್. ನಾಗೇಶ್ ತಿಳಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜೊತೆಗೆ ಪತ್ರಿಕಾರಂಗವೂ ಪ್ರಮುಖ ಪಾತ್ರ…

Read More