Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿ ಕೆಲಸ, ಆಡಳಿತ ಎಲ್ಲರಿಗೂ ಮಾರ್ಗದರ್ಶಕವಾಗಿದೆ; ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು; ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿ ಕೆಲಸ, ಆಡಳಿತ ಎಲ್ಲರಿಗೂ ಮಾರ್ಗದರ್ಶಕವಾಗಿದೆ; ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಮಾರಿಯಮ್ಮನ ಸಮುದಾಯ ಭವನದಲ್ಲಿ ಟೀಂ ಮೈಸೂರು ತಂಡದ ವತಿಯಿಂದ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142ನೇ ಜಯಂತಿ ಹಾಗೂ 2025 – 26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇಗರ್ಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಸಂಸ್ಥಾನವನ್ನಾಳಿದ ನಾಲ್ವಡಿ…

Read More

ಸಮೃದ್ಧ, ರೋಗನಿರೋಧಕ ಶಕ್ತಿ ನುಗ್ಗೆ ಸೊಪ್ಪು!

ವಿಟಮಿನ್, ಕಬ್ಬಿಣ, ಆ0ಟಿ ಆಕ್ಸಿಡೆಂಟ್ಗಳಿ0ದ ಸಮೃದ್ಧ, ರೋಗನಿರೋಧಕ ಶಕ್ತಿ ಹೊಂದಿರುವ ಆಹಾರ ಯಾವುದು ಗೊತ್ತಾ.. ಅದು ನುಗ್ಗೆ ಸೊಪ್ಪು! ಹೌದು ನುಗ್ಗೆ ಸೊಪ್ಪು. ಇದನ್ನು ತಿನ್ನುವ್ಯದರಿಂದ ಏನೆಲ್ಲಾ ದೈಹಿಕ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ. ನುಗ್ಗೆ ಸೊಪ್ಪಿನ ದೋಸೆ ಮಾಡಿಕೊಂಡು ತಿಂದಿದ್ದಿರಾ !ಎಲುಬು, ಮಧುಮೇಹ, ಹೃದಯ ಆರೋಗ್ಯಕ್ಕೆ ಸಹಕಾರಿ, ಪಲ್ಯ, ದೋಸೆ, ಸೂಪ್ ರೂಪದಲ್ಲಿ ಸೇವನೆ ಹೆಚ್ಚುತ್ತಿದೆ. ನುಗ್ಗೆ ಸೊಪ್ಪಿನಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ದೇಹವನ್ನು ವಿವಿಧ ಸೋಂಕುಗಳು ಮತ್ತು ಕಾಯಿಲೆಗಳಿಂದ ರಕ್ಷಿಸುತ್ತವೆ. ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬAಧಿ…

Read More

ಸೈಲೆಂಟ್ ಕಿಲ್ಲರ್ ರಕ್ತದೊತ್ತಡ

 ರಕ್ತದೊತ್ತಡವು ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ಪ್ರಮುಖ ಆದರೆ ತಡೆಗಟ್ಟಬಹುದಾದ ಸಮಸ್ಯೆಯಾಗಿದೆ. ವಿಶ್ವದಾದ್ಯಂತ ಇಂದು ಅಂದಾಜು 1.4 ಶತಕೋಟಿ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಇಂದು ಅಧಿಕ ರಕ್ತದೊತ್ತಡಕ್ಕೆ ಹಿಂದಿಗಿಂತ ಅನೇಕ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆಗಳು ಲಭ್ಯವಿದ್ದರೂ ಅನೇಕ ಜನರಿಗೆ ಈ ಸಮಸ್ಯೆಯ ಅರಿವೇ ಇಲ್ಲ. ರಕ್ತದೊತ್ತಡ ಇರುವವರಲ್ಲಿ ಕೇವಲ ನಾಲ್ವರಲ್ಲಿ ಒಬ್ಬರಷ್ಟೇ ತಮ್ಮ ರಕ್ತದೊತ್ತಡವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿಟ್ಟಿದ್ದಾರೆ. ರಕ್ತದೊತ್ತಡವನ್ನು “ಮೌನ ಹಂತಕ”(ಸೈಲೆಂಟ್ ಕಿಲ್ಲರ್) ಎಂದು ಕರೆಯಲಾಗುತ್ತದೆ, ಏಕೆಂದರೆ…

Read More

ಹಸು ಸಾಕಾಣಿಕೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

ಮೈಸೂರು: ಹಾರ್ಟ್ ಸಂಸ್ಥೆ ವತಿಯಿಂದ ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಯುವಕರು ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ “ಹಸು ಸಾಕಾಣಿಕೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆ” ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.ಈ ತರಬೇತಿ ಕಾರ್ಯಕ್ರಮವು ಜೂನ್ 14ರಂದು ಬೆಳಿಗ್ಗೆ 10 ರಿಂದ ಸಂಜೆ 4.00 ಗಂಟೆಯವರೆಗೆ ಮೈಸೂರು ತಾಲೂಕಿನ , ಕೋಟೆಹುಂಡಿಯಲ್ಲಿರುವ ಹಾರ್ಟ್ ಸಂಸ್ಥೆಯಲ್ಲಿ ನಡೆಯಲಿದೆ.ಕಾರ್ಯಾಗಾರದಲ್ಲಿ ಪಶುಸಂಗೋಪನಾ ಮತ್ತು ಹೈನುಗಾರಿಕೆ ತಜ್ಞರು ಭಾಗವಹಿಸಿ ಹಸುಗಳ ವೈಜ್ಞಾನಿಕ ಸಾಕಾಣಿಕೆ, ಉತ್ತಮ ತಳಿಗಳ…

Read More

ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು; ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಉತ್ಸಾಹದೊಂದಿಗೆ ಆಚರಿಸಲಾಯಿತು. ಪ್ರಕೃತಿಯನ್ನು ಪೋಷಿಸುವ ಮತ್ತು ರಕ್ಷಿಸುವ ಮಹತ್ವವನ್ನು ಬಿಂಬಿಸುವAತೆ ಪ್ರಾಂಶುಪಾಲ ವೀಣಾ ಎಸ್. ಎ. ಹಾಗೂ ಮುಖ್ಯ ಶಿಕ್ಷಕಿಯರು ಸಸ್ಯಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಪರಿಸರಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಾಗೂ ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೇರೇಪಿಸಲಾಯಿತು.ಆಚರಣೆಯ ಅಂಗವಾಗಿ ಶಾಲೆಯ ಅಧ್ಯಕ್ಷ ಆರ್. ವಾಸುದೇವ ಭಟ್ ರವರು ಹತ್ತನೇ ತರಗತಿ ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ…

Read More

ನಂಜನಗೂಡಿನಲ್ಲಿ ವಿಜೃಂಭಣೆಯಿ0ದ ನಡೆದ ಹನುಮನ ಮೆರವಣಿಗೆ

ನಂಜನಗೂಡು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ನಂಜನಗೂಡು ಪಟ್ಟಣದಲ್ಲಿ ವಿಜೃಂಭಣೆಯಿAದ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು.ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಲಾಗಿದ್ದ ಹನುಮ ಜಯಂತಿ ಕಾರ್ಯಕ್ರಮವನ್ನು ಸಿದ್ದಲಿಂಗಸ್ವಾಮೀಜಿ, ಇಮ್ಮಡಿ ಮುರುಗಿ ಸ್ವಾಮೀಜಿ, ಪಟ್ಟದ ನಾಗರಾಜ ಸ್ವಾಮೀಜಿ, ಜ್ಞಾನಾನಂದ ಚೆನ್ನ ರಾಜ ಅರಸ್ ಸ್ವಾಮೀಜಿ, ಮಾಜಿ ಶಾಸಕ ಹರ್ಷವರ್ಧನ್ ಅವರು ಹನುಮ ಮತ್ತು ಶ್ರೀ ರಾಮ ಮೆರವಣಿಗೆಯ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, “ಪ್ರತಿ ವರ್ಷ ಹನುಮ…

Read More

ಬಸವಣ್ಣನವರ ವಚನಗಳು ಸರಳವಾಗಿದ್ದು, ಇಂದಿಗೂ ಪ್ರಸ್ತುತವಾಗಿವೆ; ಸಂಸದ ಯದುವೀರ್

ಮೈಸೂರು: ಬಸವಣ್ಣನವರ ವಚನಗಳು ಸರಳವಾಗಿದ್ದು, ಇವತ್ತಿನ ದಿನಮಾನಗಳಿಗೂ ಪ್ರಸ್ತುತವಾಗಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಮೈಸೂರಿನ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಸಭಾಭವನದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ 6ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಬಸವ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, ಪೌರಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ, ಸಹಪಂಕ್ತಿ ಭೋಜನ, ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರು ಸೇರಿದಂತೆ ಎಲ್ಲಾ…

Read More

ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವ ಸಂಪನ್ನ

ಮೈಸೂರು; ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಮೈಸೂರಿನ ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರದ ಶಾರದಾ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಹಾಗೂ ಆರೋಗ್ಯ ಅರಿವು ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನದ ಪೂರ್ವಭಾವಿಯಾಗಿ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು.ಸುಮಾರು 45 ನಿಮಿಷಗಳ ಕಾಲ ಪ್ರಾರ್ಥನೆ, ಚಾಲನಾ ಕ್ರಿಯೆ, ತಾಡಾಸನ, ವೃಕ್ಷಾಸನ, ಪಾದ-ಹಸ್ತಾಸನ, ಅರ್ಧ ಚಕ್ರಾಂತಾಸನ ಮತ್ತು ತ್ರಿಕೋಣಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾçಸನ, ಉಷ್ಟಾçಸನ, ಶಶಕಾಸನ, ಉತ್ತಾನ ಮಂಡೂಕಾಸನ ಮತ್ತು ವಕ್ರಾಸನ,…

Read More