Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನರ್ಸಿಂಗ್ ವೃತ್ತಿ ಶೇಷ್ಠ ವೃತ್ತಿ ; ಜಿ.ವಿನಯಕುಮಾರ್


ಚಾಮರಾಜನಗರ ; ಎಲ್ಲಾ ವೃತ್ತಿ ಗಿಂತ ನರ್ಸಿಂಗ್ ವೃತ್ತಿ ಶೇಷ್ಠ ಎಂದು
ಚಾಮರಾಜನಗರ ಜೆಎಸ್ಎಸ್ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲ ಜಿ ವಿನಯಕುಮಾರ್ ತಿಳಿಸಿದರು
ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ನರ್ಸಿಂಗ್ ಆಫ್ ಏರ್ಪಡಿಸಿದ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಜಿ ವಿನಯ್ ಕುಮಾರ್ ಮಾತನಾಡಿ ದಿನದ 24 ಗಂಟೆಗಳು ಸಹ ರೋಗಿಗಳನ್ನು ನಗುಮುಖದಿಂದ ಮಾತನಾಡಿಸಿ ವೈದ್ಯರ ಸಲಹೆ ದಂತೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ನರ್ಸಿಂಗ್ ವಿದ್ಯಾರ್ಥಿಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು
ಮನುಷ್ಯನಿಗೆ ಆರೋಗ್ಯದಲ್ಲಿ ಏರೋಪೇರು ಅಪಘಾತ ಇನ್ನಿತರ ಸಂದರ್ಭದಲ್ಲಿ ತಕ್ಷಣ ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಸೇವೆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾಕ್ಟರ್ ಚಂದ್ರಶೇಖರ್ ಪಿ. ಮಾತನಾಡಿ
ಇತ್ತೀಚಿನ ದಿನಗಳಲ್ಲಿ ಕೆಲವು ಮಾನಸಿಕ ಒತ್ತಡದಿಂದ ಹಾಗೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದೇವೆ ಎಂದು ಮಾನಸಿಕವಾಗಿ ಚಿಂತನೆ ಮಾಡಿ ಆಗಸ್ಟ್ ತಿಂಗಳಲ್ಲಿ 66 ಗಂಡು. 75 ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಪಟ್ಟು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಇದಕ್ಕೆಲ್ಲ ಸೂಕ್ತ ಮಾರ್ಗದರ್ಶನ ಮಾನಸಿಕ ಒತ್ತಡದಿಂದ ಬಳುತ್ತಿರುವ ಜನರಿಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಅರಿವು ಅರಿವು ಮೂಡಿಸುವ ಕಾರ್ಯಕ್ರಮಗಳು ಇಲಾಖೆ ವತಿಯಿಂದ ಹಬ್ಬಿಕೊಳ್ಳಲಾಗಿದೆ ಯಾವುದೇ ಸಂಕೋಚ ಇಲ್ಲದೆ ನಮ್ಮ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು
ಮೈಸೂರು ಜೆಎಸ್ಎಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಮನೋವೈದ್ಯಕೀಯ ವಿಭಾಗ ಸಹಪಾಧ್ಯಪಕ
ಡಾ,ಶಿವನಂದ ಮಹಾನ್ ಜೆ ಮನೋಹರ್. ಮಾತನಾಡಿ
ಆತ್ಮಹತ್ಯೆ ತಡೆಗಟ್ಟಲು ಮಾಧ್ಯಮ ಸಹಕಾರ ಅತ್ತಗತ್ಯ ತಮ್ಮ ಬರವಣಿಗಳ ಮೂಲಕ ಲೇಖಗಳನ್ನು ಪ್ರಕಟ ಮಾಡಿ ಆತ್ಮಹತ್ಯೆ ಒಂದು ಪರಿವಾರ ಅಲ್ಲ ಸೂಕ್ತ ಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಿ ತಮ್ಮ ಜೀವ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು
ಮೈಸೂರು ಜೆಎಸ್ಎಸ್ ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕಿ ರಕ್ಷಿತ್ ಪೂಜಾರಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಏನೇ ಸಮಸ್ಯೆ ಬಂದರೂ ಕಾಲೇಜಿನಲ್ಲಿ ಪ್ರಾಂಶುಪಾಲರು ಅಥವಾ ಪ್ರೊಫೆಸರ್ ಗಳು. ನಿಮ್ಮ ಗೆಳೆಯರು ಹಾಗೂ ನಿಮ್ಮ ಪೋಷಕರಿಗೆ ಗಮನಕ್ಕೆ ತಂದು ಸೂಕ್ತ ಕಾಲದಲ್ಲಿ ನಿಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ ಇದಕ್ಕೆಲ್ಲ ಕಾರಣ ನಿಮ್ಮ ದೈನಂದಿನ ಚಟುವಟಿಕೆಗಳು ಸೂಕ್ತ ಕಾಲದಲ್ಲಿ ನಿದ್ದೆ ಇಲ್ಲ ಆದ್ದರಿಂದ ಯೋಗ ಹೆಚ್ಚಿನ ಆದ್ಯತೆ ನೀಡಿ ಅವಾಗ ನಿಮ್ಮ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದರು
ಕಾಲೇಜಿನ ಎಲ್ಲಾ ಪ್ರೊಫೆಸರ್ ಗಳು ವಿದ್ಯಾರ್ಥಿಗಳು ಹಾಜರಿದ್ದರು