Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಿನ್ನದ ಅಂಬಾರಿಯನ್ನು ಹೊತ್ತ ಪ್ರಶಾಂತ ಜಂಬೂಸವಾರಿ ಯಶಸ್ವಿಗೊಳಿಸಿದ್ದಕ್ಕೆ ಮಾವುತ , ಕಾವಾಡಿ ದಿಲ್ ಖುಷ್


ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಬುಧವಾರ ನಡೆದ ವಿಜೃಂಭಣೆಯ ಜಂಬೂ ಸವಾರಿಯಲ್ಲಿ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿದ್ದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಗುರಿ ಮುಟ್ಟುವ ಮೂಲಕ ಯಶಸ್ವಿಗೊಳಿಸಿದ ಗಜಪಡೆಯ ಕ್ಯಾಪ್ಟನ್ ಪ್ರಶಾಂತ ಕೆಲಸಕ್ಕೆ ಅದರ ಮಾವುತ ಮಾವುತ ಚಿನ್ನಪ್ಪ ಹಾಗೂ ಕಾವಾಡಿ ಚಂದ್ರ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾವುತ ಚಿನ್ನಪ್ಪ, ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಎರಡು ಗಂಟೆ ಸಮಯದಲ್ಲಿ ರಾಜ ಗಾಂಭೀರ್ಯದಿAದ ಬನ್ನಿಮಂಟಪ ತಲುಪಿದ್ದ ಪ್ರಶಾಂತ ಆನೆ ಬಲರಾಮ ಆನೆಯ ಹೋಲಿಕೆಯಲ್ಲಿ ಕಂಡುಬAದಿದ್ದು, ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನಗಳ ಮಧ್ಯ ರಾಜಗಾಂಭೀರ್ಯದಿAದ ಹೆಜ್ಜೆ ಹಾಕಿದ್ದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ೧೮ ವರ್ಷದಿಂದ ದಸರಾಕ್ಕೆ ಬರುತ್ತಿದ್ದೇನೆ. ೧೮ ವರ್ಷಗಳ ಕಾಲ ಪ್ರಶಾಂತ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಲಾನೆ ಆಗಿ ಹೋಗುತ್ತಿದ್ದ. ಈಗ ೧೯ನೇ ವರ್ಷ ಅಂಬಾರಿ ಆನೆಯಾಗಿ ಆಯ್ಕೆಯಾಗಿದ್ದು, ನಂಬಿಕೆ ಉಳಿಸಬೇಕೆಂದು ಯಶಸ್ವಿಯಾಗಿ ಹಾಗೂ ಒಳ್ಳೆ ರೀತಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದಾನೆ. ಇದರಿಂದ ಖುಷಿಯಾಗಿದೆ. ಎಲ್ಲ ರೀತಿಯ ಸಹಕಾರ ನೀಡಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆನೆ ಕಾಡಿನ ಶಿಬಿರದಲ್ಲಿ ಸೌಮ್ಯವಾಗಿ ಇರುತ್ತದೆ. ಅಲ್ಲಿ ಚಿಕ್ಕ ಮಕ್ಕಳು ಹೋದರೂ ಏನು ಮಾಡುವುದಿಲ್ಲ ಎಂದು ಅಭಿಮಾನದಿಂದ ಹೇಳಿದರು.
ಕಾವಾಡಿ ಚಂದ್ರ ಮಾತನಾಡಿ, ಜಂಬೂ ಸವಾರಿ ಮೆರವಣಿಗೆ ತುಂಬಾ ಚೆನ್ನಾಗಿತ್ತು, ಖುಷಿಯಾಯಿತು. ಎಲ್ಲಾ ಅಧಿಕಾರಗಳ ಸಹಕಾರ ಚೆನ್ನಾಗಿತ್ತು. ಆದರೆ ಕಾಡಿಗೆ ಹೋಗುತ್ತಿರುವುದು ಬೇಜಾರಾಗಿದೆ ಎಂದರು.