3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ


*ಡಿಸಿಎಂ ಆಗಿ ಡಾ.ಜಿ.ಪರಮೇಶ್ವರ್, ಸಚಿವರಾಗಿ ಡಾ.ಯತೀಂದ್ರ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಯು.ಟಿ.ಖಾದರ್,
ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಬೈರತಿ ಸುರೇಶ್ ಮತ್ತು ಶರಣಪ್ರಕಾಶ್ ಪಾಟೀಲ್
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬುಧವಾರ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
4:15 ಗಂಟೆಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಗೌಪ್ಯತಾ ಪ್ರಮಾಣವಚನವನ್ನು ನೊಣವಿನಕೆರೆ ಅಜ್ಜಯ್ಯನ ಹೆಸರಿನಲ್ಲಿ
ಸ್ವೀಕಾರ ಮಾಡಿದರು. ರೇಷ್ಮೆ ಶಲ್ಯ, ಪಂಚೆಯ ವಿಶೇಷ ಧಿರಿಸಿನೊಂದಿಗೆ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ ಕೈಯಲ್ಲಿ ಸಂವಿಧಾನದ ಪುಸ್ತಕದ ಪ್ರತಿ ಹಿಡಿದಿದ್ದು ಗಮನ ಸೆಳೆಯಿತು. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಪ್ರಮಾಣ ವಚನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರುನೀ ವೇಳೆ ಡಿಸಿಎಂ ಆಗಿ ಜಿ. ಪರಮೇಶ್ವರ್ ಪ್ರಮಾಣವಚನ: ಇತ್ತ ಡಾ. ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಡಾ. ಜಿ.ಪರಮೇಶ್ವರ್ ಅವರು ಡಾ. ಅಂಬೇಡ್ಕರ್ ಅವರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದರು.
ಉಳಿದಂತೆ ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಉಳಿದವರು ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣಪ್ರಕಾಶ್ ಪಾಟೀಲ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಅಜ್ಜಯ್ಯನ ಫೋಟೋಗೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಸಮಾರಂಭಕ್ಕೆ ಆಗಮಿಸಿದ್ದ ಸರ್ವ ಧರ್ಮ ಗುರುಗಳು ಹಾಗೂ ಸಮಯದಾಯವಾರು ಸ್ವಾಮೀಜಿಗಳಿಂದ ಡಿಕೆಶಿ ಆಶೀರ್ವಾದ ಪಡೆದರು.
ಶ್ರೀಗಳು ಡಿ.ಕೆ. ಶಿವಕುಮಾರ್ ತಲೆ ಮೇಲೆ ಹೂವು ಹಾಕಿ ಹರಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರ ಬಳಿ ಹೋಗಿ ಡಿ.ಕೆ. ಶಿವಕುಮಾರ್ ಹಸ್ತಲಾಘವ ಮಾಡಿದರು. ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರ ಕಾಲು ಮುಟ್ಟಿ ಆಶೀರ್ವಾದ ಪಡೆದರು.
ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳಂ ಸಿಎಂ ಸತೀಶನ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಉಪಸ್ಥಿತರಿದ್ದರು.
ವೇದಿಕೆ ಮೇಲಿದ್ದ ಎಲ್ಲರಿಗೂ ಹೂಗುಚ್ಛ ನೀಡಿ ಗೌರವಿಸಿದರು. ಪ್ರತಿಜ್ಞಾವಿಧಿಯ ಸಮಯ ಸಮೀಪಿಸುತ್ತಿರುವುದನ್ನು ಗಮನಿಸಿ ಡಿಕೆಶಿ ಪದೇ ಪದೆ ಸಮಯ ನೋಡುತ್ತಿರುವುದು ಕಂಡುಬAತು. ಪ್ರಮಾಣವಚನದ ವೇಳೆ ಬೆಂಬಲಿಗರು ಡಿಕೆಶಿ ಪರ ಘೋಷಣೆ ಕೂಗಿದರು.

ನಾಡಗೀತೆ ಅರ್ಧಕ್ಕೆ ಮೊಟಕುಗೊಳಿಸಿ ವಂದೇ ಮಾತರಂ ಹಾಡಿಸಿದ ಸಿಬ್ಬಂದಿ:
ಪ್ರಮಾಣವಚನ ಸ್ವೀಕಾರ ಸಮಾರಂಭದ ಮುಂಚೆ ಮೊದಲಿಗೆ ವಂದೇ ಮಾತರಂ ಹಾಡನ್ನು ಹಾಡಿಸಲಾಯಿತು. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ‘ವಂದೇ ಮಾತರಂ’ ಅನ್ನು ಮೊದಲ ಸ್ಥಾನದಲ್ಲಿ ಇರಿಸಲಾಗಿತ್ತು. ಸಮಾರಂಭದ ಆರಂಭದಲ್ಲಿ ವಂದೇ ಮಾತರಂ ಅನ್ನು ಪೂರ್ಣವಾಗಿ (ಆರು ಚರಣಗಳು) ಹಾಡಲಾಯಿತು. ನಂತರ ರಾಷ್ಟçಗೀತೆ (ಜನಗಣಮನ) ಮತ್ತು ಕೊನೆಯದಾಗಿ ನಾಡ ಗೀತೆಯನ್ನು ನುಡಿಸಲಾಯಿತು. ಆದರೆ, ಈ ವೇಳೆ ರಾಜಭವನ ಸಿಬ್ಬಂದಿ ಎಡವಟ್ಟು ಮಾಡಿದರು. ವಂದೇ ಮಾತರಂ ಗೀತೆ ಹಾಡುವಂತೆ ಮುಖ್ಯ ಕಾರ್ಯದರ್ಶಿ ಸೂಚಿಸಿದರು. ಈ ವೇಳೆ ಸಿಬ್ಬಂದಿ ನಾಡಗೀತೆಯನ್ನು ಹಾಡಿಸಿದರು. ಬಳಿಕ ಅರ್ಧಕ್ಕೆ ನಾಡಗೀತೆಯನ್ನು ಮೊಟಕುಗೊಳಿಸಿ ವಂದೇ ಮಾತರಂ ಗೀತೆ ಹಾಡಿಸಲಾಯಿತು. ಬಳಿಕ ರಾಷ್ಟçಗೀತೆ ಹಾಡಿಸಿದ ಅಧಿಕಾರಿಗಳು, ಕೊನೆಯಲ್ಲಿ ನಾಡಗೀತೆ ನುಡಿಸಿದರು.
ಸಚಿವರುಗಳ ಪ್ರಮಾಣವಚನ ಸ್ವೀಕಾರ;
ಸಚಿವ ಎಂ.ಬಿ. ಪಾಟೀಲ್‌ಗೆ ರಾಜ್ಯಪಾಲರ ಕ್ಲಾಸ್: ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕಾರದ ಬಳಿಕ ಎಂ.ಬಿ. ಪಾಟೀಲ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ ಬಸವಣ್ಣ ಹಾಗೂ ಸಿದ್ದೇಶ್ವರ ಮಹಾಸ್ವಾಮಿ ಹೆಸರಲ್ಲಿ ಎಂ.ಬಿ. ಪಾಟೀಲ್ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಮಧ್ಯ ಪ್ರವೇಶಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪ್ರಮಾಣ ಪತ್ರದಲ್ಲಿರುವ ವಾಖ್ಯಗಳನ್ನು ಮಾತ್ರ ಓದಬೇಕು. ಅದನ್ನು ಬಿಟ್ಟು ಬೇರೆಯದನ್ನು ಓದದಂತೆ ರಾಜ್ಯಪಾಲರು ತಾಕೀತು ಮಾಡಿದ್ದಾರೆ. ಹಾಗಾಗಿ ಎಲ್ಲರೂ ಪತ್ರದಲ್ಲಿರುವುದನ್ನು ಮಾತ್ರ ಓದುವಂತೆ ಮನವಿ ಮಾಡಿದರು.

ಪ್ರಮಾಣವಚನ ಸ್ವೀಕರಿಸಿ ಬಳಿಕ ರಾಜ್ಯಪಾಲರಿಗೆ ಹೂಗುಚ್ಛ ನೀಡಲು ತೆರಳಿದ ವೇಳೆ ಪ್ರಮಾಣವಚನ ಪ್ರತಿಯಲ್ಲಿ ಏನು ಬರೆದಿದೆ ಅದನ್ನೇ ಓದುವಂತೆ ಸಚಿವ ಎಂ.ಬಿ. ಪಾಟೀಲ್ ಅವರಿಗೆ ತಾಕೀತು ಮಾಡಿದರು. ಈ ವೇಳೆ ಎಂ.ಬಿ. ಪಾಟೀಲ್ ಬಸವಣ್ಣನ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ಅವರು ಸಾಂಸ್ಕöÈತಿಕ ರಾಯಭಾರಿಯಾಗಿದ್ದಾರೆ ಎಂದು ಸಮಜಾಯಿಶಿ ನೀಡಿದರು. ಈ ವೇಳೆ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ಪತ್ರದಲ್ಲಿ ಏನ್ ಬರೆಯಲಾಗಿದೆ ಅದನ್ನಷ್ಟೇ ಓದುವಂತೆ ಮತ್ತೊಮ್ಮೆ ತಾಕೀತು ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅಲ್ಲಿಗೆ ಆಗಮಿಸಿ ಎಂ.ಬಿ. ಪಾಟೀಲ್ ಅವರನ್ನು ತಮ್ಮತ್ತ ಕರೆದು ಹೂಗುಚ್ಛ ನೀಡಿದರು.