Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮುಚ್ಚಿದ್ದ ಮದ್ಯದಂಗಡಿ ಓಪನ್, ಕೆರಳಿದ ಗ್ರಾಮಸ್ಥರು.ಬಾರ್ ಸ್ಥಳಾಂತರಕ್ಕೆ ಶಾಸಕ ನೇತೃತ್ವದಲ್ಲೇ ಪ್ರತಿಭಟನೆ ಎಚ್ಚರಿಕೆ.

ಎಚ್.ಡಿ.ಕೋಟೆ : ತಾಲೂಕಿನ ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳ ಶ್ರೀ ಚಿಕ್ಕದೇವಮ್ಮ ಸನ್ನಿಧಿಯ ಹಾಲುಗಡ ಸಮೀಪದ ಗಣೇಶನ ಗುಡಿ ಬಳಿ ತೆರೆದಿರುವ ನಕಲಿ ದಾಖಲೆ ಸೃಷ್ಟಿಸಿ ತೆರೆದಿರುವ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟನ್ನು ಕೂಡಲೇ ಸ್ಥಳಾಂತರ ಮಾಡದಿದ್ದರೇ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರ ನೇತೃತ್ವದಲ್ಲಿ ಇಟ್ನಾ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಹಾಗೂ ಪ್ರಗತಿಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಕ್ರಮ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ಚಿಕ್ಕದೇವಮ್ಮ ಹಾಲುಗಡ ಜಾತ್ರಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಇಟ್ನಾ ದೊಡ್ಡವೀರ ನಾಯ್ಕ ಎಚ್ಚರಿಕೆ ನೀಡಿದರು.

ಎಚ್ ಡಿ ಕೋಟೆ ತಾಲೂಕು ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿ ನೆರವೇರಿಸಿ ಮಾತನಾಡಿದ ಅವರು,ತಾಲೂಕಿನ ಪವಿತ್ರ ಸ್ಥಳ ಪ್ರಮುಖ ಧಾರ್ಮಿಕ ಸ್ಥಳ ಎನಿಸಿಕೊಂಡಿರುವ ತಾಲೂಕಿನ ಅಧಿದೇವತೆ ಶ್ರೀ ಚಿಕ್ಕದೇವಮ್ಮ ಬೆಟ್ಟ ಸಮೀಪದ ಗಣೇಶನ ಗುಡಿ ಬಳಿ ಎಂ ಕೆ ಪಿ ಬಾರ್ ಅಂಡ್ ರೆಸ್ಟೋರೆಂಟ್ ಹೆಸರಿನಲ್ಲಿ ಮೈಸೂರಿನ ಉದ್ಯಮಿಯೊಬ್ಬರು ತೆರೆದಿರುವ ಮದ್ಯದಂಗಡಿಯಿಂದ ಪವಿತ್ರ ಧಾರ್ಮಿಕ ಕ್ಷೇತ್ರ ಶ್ರೀ ಚಿಕ್ಕದೇವಮ್ಮ ಅಮ್ಮನವರ ಬೆಟ್ಟ ಹಾಗೂ ಹಾಲುಗಡ ಕ್ಷೇತ್ರಕ್ಕೆ ಬರುವ ಮಹಿಳೆಯರಿಗೆ ಮಕ್ಕಳಿಗೆ ಈ ಭಾಗದ ಗ್ರಾಮಗಳ ರೈತರಿಗೆ ಆಗುತ್ತಿದ್ದ ತೀವ್ರ ಅನಾನುಕೂಲಗಳನ್ನು ಮನಗಂಡು ಇಟ್ನಾ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರು ಸದರಿ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ತೆರವು ಮಾಡಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಕೊತ್ತೇಗಾಲ ಗ್ರಾಮ ಪಂಚಾಯಿತಿ ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮವಾಗಿ ತೆರೆದಿರುವ ಮದ್ಯದಂಗಡಿಯನ್ನು ಬಂದ್ ಮಾಡಿಸಿದ್ದರು.

ಬಾರ್ ಓಪನ್ ಮಾಡಲು ಕೋರ್ಟ್ ಆದೇಶ ಮಾಡಿಲ್ಲ;
ಜನರ ಪ್ರತಿಭಟನೆ ಮತ್ತು ಶಾಸಕರ ಸೂಚನೆ ಮೇರೆಗೆ ಪಂಚಾಯತ್ ಅಧಿಕಾರಿಗಳು ಬಂದ್ ಮಾಡಿಸಿದ್ದ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ನಮಗೆ ನ್ಯಾಯಾಲಯ ಬಾರ್ ತೆರೆಯಲು ಆದೇಶ ನೀಡಿದೆ ಎಂದು ಹೇಳಿಕೊಂಡು ಬಾರ್ ಮಾಲೀಕರು ಗ್ರಾಮ ಪಂಚಾಯಿತಿ ಪಿಡಿಒ ಬಂದ್ ಮಾಡಿಸಿದ್ದ ಮದ್ಯದಂಗಡಿಯನ್ನು ಏಕಾಏಕಿ ಮತ್ತೆ ಓಪನ್ ಮಾಡಿದ್ದಾರೆ.
ಬಾರ್ ಮಾಲೀಕರು ಸುಳ್ಳು ಹೇಳುತ್ತಿದ್ದಾರೆ ಗ್ರಾಮ ಪಂಚಾಯಿತಿ ಪಿಡಿಒ ನೀಡಿದ್ದ ನೋಟಿಷಿಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆಯೇ ಹೊರತು ಬಂದ್ ಆಗಿದ್ದ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ತೆರೆಯಲು ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡಿದ್ದಾರೆ.
ಇಷ್ಟು ಸಾಲದೆಂಬಂತೆ ಎಂ ಕೆ ಪಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಂಬಂಧಿಕರು ಮತ್ತು ಸಹೋದ್ಯೋಗಿಗಳು ತಾಲೂಕು ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನ್ಯಾಯಾಲಯದ ಆದೇಶ ಇದ್ದರು ಎಂಕೆಪಿ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ನಡೆಸಲು ಉನ್ನಾರ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ.
ಕ್ಷೇತ್ರದ ಶಾಸಕರು ಮತ್ತು ತಾಲ್ಲೂಕು ಆಡಳಿತ ಶೀಘ್ರ ಕ್ರಮವಹಿಸಿ ಧಾರ್ಮಿಕ ಸ್ಥಳ ಹಾಲುಗಡ ಗಣೇಶನ ಗುಡಿ ಬಳಿ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಅಕ್ರಮವಾಗಿ ತೆರೆದಿರುವ ಮದ್ಯದ ಅಂಗಡಿಯನ್ನು ಕೂಡಲೇ ಬಂದ್ ಮಾಡಿಸಿ ಇಲ್ಲಿಂದ ಸ್ಥಳಾಂತರ ಮಾಡಬೇಕು ತಪ್ಪಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಹೋರಾಟದ ಯಾವುದೇ ಪ್ರಾಣ ಮಾನ ಹಾನಿಯಾದರೆ ಅದಕ್ಕೆ ತಾಲೂಕು ಆಡಳಿತವೇ ಹೊಣೆಯಾಗಲಿದೆ ಎಂದು ಹೇಳಿದರು.
ಸುದ್ದಿ ಗೊಷ್ಠಿಯಲ್ಲಿ ಶ್ರೀ ಚಿಕ್ಕದೇವಮ್ಮ ಹಾಲುಗಡ ಜಾತ್ರಾಭೀವೃದ್ಧಿ ಟ್ರಸ್ಟ್ ಅಧ್ಯಕ್ಷ ಇಟ್ನಾ ದೊಡ್ಡವೀರ ನಾಯ್ಕ, ಇಟ್ನಾ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವನಾಯ್ಕ, ಮುಖಂಡರಾದ ಸಿದ್ದರಾಜು, ಜಯರಾಜು ಸೇರಿದಂತೆ ಇನ್ನಿತರರು ಇದ್ದರು.


———————————————————————————-
ಶಾಸಕರ ಗಡುವು, ಪ್ರತಿಭಟನೆ ಕೈಬಿಟ್ಟಿದ್ದೇವೆ ಅಷ್ಟೇ,
ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ಹಾಲುಗಡ ಗಣೇಶನ ಗುಡಿ ಬಳಿಯ ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಒಂದು ವಾರದ ಒಳಗೆ ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಒಂದು ವಾರ ಕಾಲಾವಕಾಶ ಕೊಡಿ ತಪ್ಪಿದ್ದಲ್ಲಿ ತಮ್ಮ ಹೋರಾಟದಲ್ಲಿ ನನ್ನ ನೇತೃತ್ವದಲ್ಲೇ ಪ್ರತಿಭಟನೆ ಮಾಡೋಣ ಎಂದು ತಿಳಿಸಿದ್ದಾರೆ.
ಹಾಗಾಗಿ ಕಳೆದ ಜೂ. 27ರಂದು ನಡೆಸಬೇಕಿದ್ದ ಪ್ರತಿಭಟನೆ ಯನ್ನು ಕೈಬಿಟ್ಟಿದ್ದೇವೆ. ಎಂ.ಕೆ.ಪಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಭಕ್ತರು ಈ ಭಾಗದ ಜನರ ಭಾವನೆಗಳ ಜೊತೆ ಚೆಲ್ಲಾಟವಾಡದೆ ಶಾಸಕರ ಮಾತಿಗೆ ಉದ್ಧಟತನ ತೋರದೆ ಕೂಡಲೇ ಹಾಲುಗಡ ಗಣೇಶನ ಗುಡಿ ಧಾರ್ಮಿಕ ಸ್ಥಳದಿಂದ ತಮ್ಮ ಮದ್ಯದಂಗಡಿಯನ್ನು ಸ್ಥಳಾಂತರ ಮಾಡಬೇಕು ತಪ್ಪಿದಲ್ಲಿ ಶಾಸಕರ ನೇತೃತ್ವದಲ್ಲಿ ಬಾರ್ ಮುಂದೆಯೇ ಉಗ್ರ ಪ್ರತಿಭಟನೆ ನಡೆಸುತ್ತೇವೆ.
ಇಟ್ನಾ ದೊಡ್ಡವೀರನಾಯಕ. ಅಧ್ಯಕ್ಷರು.
ಶ್ರೀ ಚಿಕ್ಕದೇವಮ್ಮ ಹಾಲುಗಡ ಜಾತ್ರಾಭಿವೃದ್ಧಿ ಟ್ರಸ್ಟ್.