
ಮೈಸೂರು; ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯು ಮೈಸೂರಿನ ಸರಸ್ವತಿಪುರಂನಲ್ಲಿರುವ ತನ್ನ ಆವರಣದಲ್ಲಿ ರೋಟರಿ ಇಚಿಟರಾಕ್ಟ್ ಕ್ಲಬ್ನ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರೌಢಶಾಲೆಗಳ ಹಂತದ ‘ಸ್ಪರ್ಧಾ 2026–27’ ಸ್ಪರ್ಧೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಮೈಸೂರಿನ ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಸಿ.ಎ. ನಾಗರಾಜ್, ಉದ್ಘಾಟಿಸಿದರು. ವಿಜಯ ವಿಠ್ಠಲ ವಿದ್ಯಾಶಾಲೆಯ ಧರ್ಮದರ್ಶಿ ಎಸ್. ಪಣಿರಾಜ್ಮ ವಿಜಯ ವಿಠ್ಠಲ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಸಿ.ಎ. ವಿಶ್ವನಾಥ ಎ., ರೋಟರಿಇಂಟರಾಕ್ಟ್ ಕ್ಲಬ್ ಪ್ರತಿನಿಧಿಸಿದ ಡಾ. ನಂಜರಾಜೇಅರಸ್, ವಿಜಯ ವಿಠ್ಠಲ ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಹೆಚ್. ಸತ್ಯಪ್ರಸಾದ್ ಹಾಗೂ ವಿಜಯ ವಿಠ್ಠಲ ವಿದ್ಯಾಶಾಲೆಯ ಪ್ರಾಂಶುಪಾಲ ವೀಣಾಎಸ್. ಎ. ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡುತಮ್ಮ ಪ್ರತಿಭೆ, ಸೃಜನಶೀಲತೆ ಮತ್ತುತಂಡದ ಮನೋಭಾವವನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯ ವಿಠ್ಠಲ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ವಾಸುದೇವ ಭಟ್ ಅವರು ವಿಜೇತರನ್ನು ಘೋಷಿಸಿ, ಬಹುಮಾನ ವಿತರಿಸಿದರು.
ಜಯಲಕ್ಷ್ಮೀಪುರಂನ ಸೇಂಟ್ಜೋಸೆಫ್ ಸಿಬಿಎಸ್ಇ ಶಾಲೆ ‘ಸವಾರ್ಚಿಗೀಣ ಚಾಂಪಿಯನ್ಷಿಪ್’ (ರೋಲಿಂಗ್ ಶೀಲ್ಡ್) ಪಡೆದುಕೊಂಡರೆ, ಭಾರತೀಯ ವಿದ್ಯಾ ಭವನ ‘ರನ್ನರ್ಅಪ್ ಶೀಲ್ಡ್’ ತನ್ನದಾಗಿಸಿಕೊಂಡಿತು. ವಿಜೇತರು ಮತ್ತುರನ್ನರ್ ಅಪ್ಗಳು ತಮ್ಮಅತ್ಯುತ್ತಮ ಸಾಧನೆಗಾಗಿರೋಲಿಂಗ್ ಶೀಲ್ಡ್, ರನ್ನರ್-ಅಪ್ ಶೀಲ್ಡ್, ಪಾರಿತೋಷಕಗಳು, ಪದಕಗಳು ಮತ್ತು ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸಿದರು.