Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬಸವ ಬಳಗದ ವತಿಯಿಂದ ಲಿಂಗೈಕ್ಯರಾದ ಶ್ರೀ ಚಿದಾನಂದ ಸ್ವಾಮೀಜಿಗೆ ಶ್ರದ್ಧಾಂಜಲಿ


ಮೈಸೂರು; ಮೈಸೂರಿನ ಶ್ರೀ ಹೊಸಮಠದ ಮಠಾಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮೀಜಿಗೆ ಚಾಮುಂಡಿಪುರA ಬಸವ ಬಳಗದ ವತಿಯಿಂದ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಟರಾಜ ವಿದ್ಯಾಸಂಸ್ಥೆಯ ಮೂಲಕ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿ, ಅವರ ಭವಿಷ್ಯಕ್ಕೆ ಬೆಳಕಾಗಿದ್ದ ಶ್ರೀಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ಸದಾ ಸ್ಮರಣೀಯ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಗಳ ಭಕ್ತ ಬೃಂದದ ಪ್ರಮುಖರಾದ ಅಂಬಳೆ ಶಿವಣ್ಣ, ಸಿ. ಸಂದೀಪ್, ಗೆಜ್ಜಗಳ್ಳಿ ಶಂಕರ್, ಕೆ.ಆರ್. ಬ್ಯಾಂಕ್ ಭಾಸ್ಕರ್, ಪಾರ್ಥಸಾರಥಿ, ಮಹದೇವಸ್ವಾಮಿ, ಚಂದ್ರು, ಬಸವರಾಜು, ಪುರುಷೋತ್ತಮ್, ಮಂಜುಳ, ಪಾರ್ವತಿ, ಗಾಯತ್ರಿ, ಲತಾ, ಅನ್ನಪೂರ್ಣ, ಸುರೇಶ್, ರವಿ, ಗೋಪಾಲ್ ಅರಸ್, ಮೋಹನ್, ಲಕ್ಷ÷್ಮಣ್, ಮಹದೇವಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಶ್ರೀ ಚಿದಾನಂದ ಸ್ವಾಮೀಜಿಗೆ ಭಾವಪೂರ್ಣ ನಮನ ಸಲ್ಲಿಸಿದರು.