ಮೈಸೂರು ತಾಲ್ಲೂಕು ಪದವೀಧರ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಮೈಸೂರು : ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ಜಿ.ಪಿ.ಟಿ.)ದ ಮೈಸೂರು ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ಮೆಲ್ಲಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಹೆಚ್.ಎಸ್. ಸುನಿಲ್ ಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಜಾರ್ಯದರ್ಶಿಯಾಗಿ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ. ಮಾದೇಶ್, ಖಜಾಂಚಿಯಾಗಿ ನಗರ್ತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ. ಅಶ್ವಿನಿ ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರಾದ ಅಪ್ಸರ್ ಪಾಷ, ಎಚ್.ಎಸ್. ಮಧುರಾಣಿ, ನಾಗಶ್ರೀ, ಆಶಾ ತೇಜಸ್ವಿನಿ,…