ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಎಬಿವಿಪಿ ಆಗ್ರಹ
ಮೈಸೂರು; ಉಪನ್ಯಾಸಕರಿಲ್ಲದ ಸರ್ಕಾರಿ ಕಾಲೇಜುಗಳಲ್ಲಿ ತಕ್ಷಣವೇ ಉಪನ್ಯಾಸಕರ ನೇಮಕಾತಿ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಎಬಿವಿಪಿ ಆಗ್ರಹಿಸಿದೆ.ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ಮೈಸೂರು ಜಿಲ್ಲಾ ಸಂಚಾಲಕ ನಂದನ್ ಕುಮಾರ್ ಹೆಚ್, ರಾಜ್ಯದಲ್ಲಿ ಸುಮಾರು 430+ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಅವುಗಳು ಇಂದು “ಶಿಕ್ಷಕರಿಲ್ಲದ ಶಿಕ್ಷಣ ಸಂಸ್ಥೆಗಳಾಗಿ” ಮಾರ್ಪಟ್ಟಿವೆ. ರಾಜ್ಯದ ಮೂಲೆ ಮೂಲೆಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಅವಲಂಬಿಸಿರುವ ಈ ಕಾಲೇಜುಗಳಲ್ಲಿ , ಅತಿಥಿ ಉಪನ್ಯಾಸಕರ ನೇಮಕಾತಿ…