ಜುಲೈ 1ರಿಂದ 3ರ ವರೆಗೆ 3 ದಿನಗಳ ಕಾಲ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಉದ್ಘಾಟನೆ ಹಾಗೂ ಅಮ್ಮನವರ ವಿಗ್ರಹ ಪುನರ್ ಪ್ರತಿಷ್ಠಾಪನೆ ಮಹೋತ್ಸವ
ಎಚ್.ಡಿ.ಕೋಟೆ : ದಾನಿಗಳು ಮತ್ತು ಅಮ್ಮನವರ ಭಕ್ತರ ಸಹಕಾರದಲ್ಲಿ ಸುಮಾರು 65 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಉದ್ಘಾಟನೆ ಹಾಗೂ ಅಮ್ಮನವರ ವಿಗ್ರಹ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಜುಲೈ 1ರಿಂದ 3ರ ವರೆಗೆ 3 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಸ್ಥಾನ ಸೇವಾ ಟ್ರಸ್ಟ್ ಖಜಾಂಚಿ ಸಿ.ಎನ್. ನಾಗಣ್ಣ ತಿಳಿಸಿದರು.ಎಚ್.ಡಿ.ಕೋಟೆ ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 1 ಮತ್ತು 2…