ಇರಾನ್ ಯುದ್ಧದಿಂದ ನನ್ನ ಮಗನ ಮದುವೆಗೂ ಹೋಗಲು ಆಗ್ತಿಲ್ಲ: ಟ್ರಂಪ್ ಬೇಸರ
ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧದಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ತಮ್ಮ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ‘ಇದು ಕೆಟ್ಟ ಘಳಿಗೆ’ ಎಂದು ಟ್ರಂಪ್ ಬೇಸರ ಹೊರಹಾಕಿದ್ದಾರೆ. 48 ವರ್ಷದ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವಾರಾಂತ್ಯದಲ್ಲಿ ಎರಡನೇ ಬಾರಿಗೆ ವಿವಾಹವಾಗಲಿದ್ದಾರೆ. ಬಹಾಮಾಸ್‌ನಲ್ಲಿ ಬೆಟ್ಟಿನಾ ಆಂಡರ್ಸನ್ ಅವರನ್ನು ವರಿಸಲಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಆದರೆ, ಅದೇ ಸಮಯದಲ್ಲಿ ಟ್ರಂಪ್ ಇರಾನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದವೊಂದನ್ನು ರೂಪಿಸುತ್ತಿದ್ದಾರೆ. ಇದನ್ನೂ ಓದಿ: ಗಡಿಯಾರ ಓಡುತ್ತಿದೆ, ಸಮಯ ಮೀರುತ್ತಿದೆ…