ಗುಂಡೇಟಿಗೆ ಮೂವರು ಬಲಿ ಪ್ರಕರಣ; ಅರಣ್ಯ ಇಲಾಖೆಯವರ ವಿರುದ್ಧ ಪೊಲೀಸರಿಂದ ಎಫ್ ಐಆರ್ ದಾಖಲು
ಹನೂರು ; ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ವಲಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಗೆ ಮೂವರು ಬಲಿಯಾದ ಘಟನೆಗೆ ಸಂಬ0ಧಿಸಿದ0ತೆ ಅರಣ್ಯಾಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.ಹನೂರು ತಾಲೂಕಿನ ತೋಮಿಯಾರ್ ಪಾಳ್ಯದ ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ದೂರು ಕೊಟ್ಟಿದ್ದು, ರಾತ್ರಿ ಬಂಡೆ ಬಳಿ ಮಲಗಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದಾರೆAದು ತಿಳಿಸಿದ್ದಾರೆ. ಆ.14ರಂದು ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳ ಪೈಕಿ ಎರಡು ಹಸುಗಳು ಮನೆಗೆ ವಾಪಸ್…