ಕೇವಲ 10 ದಿನಕ್ಕೆ ಕಬಿನಿ ಜಲಾಶಯದಲ್ಲಿದ್ದ 10 ಅಡಿ ನೀರು ತಮಿಳುನಾಡಿನ ಪಾಲು !
*ಜಲಾಶಯದಲ್ಲಿದ್ದ 6 ಟಿಎಂಸಿ ನೀರು ಖಾಲಿಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ನಿರಂತರವಾಗಿ ಪ್ರತಿನಿತ್ಯವೂ ತಮಿಳುನಾಡಿಗೆ ಒಂದು ಟಿಎಂಸಿ ನೀರು ಹರಿಸುತ್ತಿರುವುದರಿಂದ ಜಲಾಶಯದಲ್ಲಿದ್ದ 10 ಅಡಿ ನೀರು ಅಂದರೆ 6 ಟಿಎಂಸಿ ನೀರು ಕೇವಲ 10 ದಿನಕ್ಕೆ ಖಾಲಿಯಾಗಿದೆ. ಈ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ.ಕೇರಳದ ವಯನಾಡು ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದ್ದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ…