ಬಿಜೆಪಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರಕ್ಕೆ ಚಾಲನೆ
ಮೈಸೂರು; ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರವನ್ನು ಶಾರದಾದೇವಿನಗರದಲ್ಲಿ ಮುಖಂಡ ಕವೀಶ್ ಗೌಡ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, 2002ರ ಮತಪಟ್ಟಿಯಲ್ಲಿ ಹೆಸರು ಹುಡುಕಲು ಅನೇಕರಿಗೆ ಕಷ್ಟವಾಗುತ್ತಿರುವುದನ್ನು ಮನಗಂಡು, ಬಿಜೆಪಿ ವತಿಯಿಂದ ಕ್ಷೇತ್ರದ ವಿವಿದೆಡೆ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದನ್ನು ಕ್ಷೇತ್ರದ ಮತದಾರರು ಸದುಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.ನಂತರ ಮತದಾರರಿಗೆ ಬಿ.ಎಲ್.ಓ.ಗಳ ಸಂಪರ್ಕ, 2002ರ ಮತ ಪಟ್ಟಿಯಲ್ಲಿ ಹೆಸರು ಹುಡುಕಲು, ಎನ್ಯೂಮರೇಷನ್ ಅರ್ಜಿ ಭರಿಸಲು ಸಹಾಯ ಮಾಡಲಾಯಿತು. ಈ ವೇಳೆಚಾಮುಂಡೇಶ್ವರಿ ನಗರ ಮಂಡಲದ…