ಮೈಪಾಲ್ ಪಾಲಿಮರ್ಸ್ ಹಾಗೂ ರಬ್ಬರ್ ಪ್ರಾಡಕ್ಟ್ ನ 300 ಉದ್ಯೋಗಿಗಳಿಂದ ಸ್ವಯಂ ಪ್ರೇರಿತ ರಕ್ತದಾನ
ಮೈಸೂರು: ನಗರದ ಕೆ ಆರ್ ಎಸ್ ರಸ್ತೆಯಲ್ಲಿರುವ ಮೈಸೂರು ಪಾಲಿಮರ್ಸ್ ಹಾಗೂ ರಬ್ಬರ್ ಪ್ರಾಡಕ್ಟ್÷್ಸ ಸಂಸ್ಥೆಯ 45ನೇ ವರ್ಷದ ಸಂಸ್ಥಾಪನ ದಿನಾಚರಣೆ ಅಂಗವಾಗಿ 300ಕ್ಕೂ ಹೆಚ್ಚು ಸಿಬ್ಬಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ ಡಿ ನಾಗರಾಜನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಾರ್ಮಿಕರು ಹಾಗೂ ಮಾಲೀಕರು ಎಂಬ ಭೇದಭಾವವಿಲ್ಲ. ಸಂಸ್ಥೆಯ ಏಳಿಗೆಗಾಗಿ ದುಡಿಯುವವರೆಲ್ಲರೂ ಇಲ್ಲಿ ಮಾಲೀಕರೇ. ರಕ್ತದಾನದ ಸಾಮಾಜಿಕ ಕಾರ್ಯದ ಮೂಲಕ…