Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಭಾರತದ ಆರು ದರ್ಶನಗಳಲ್ಲಿ ಪುರಾತನ ಪರಂಪರೆಯಾಗಿ ಯೋಗವು ಒಂದು ಮಹತ್ವದ ದರ್ಶನವಾಗಿದೆ: ಸಂಸದ ಯದುವೀರ್ ಒಡೆಯರ್

ಮೈಸೂರು: ಯೋಗವು ಭಾರತದ ಪುರಾತನ ಪರಂಪರೆಯಾಗಿದ್ದು, ಭಾರತದ ಆರು ದರ್ಶನಗಳಲ್ಲಿ ಯೋಗವು ಒಂದು ಮಹತ್ವದ ದರ್ಶನವಾಗಿದೆ. ಇದು ಕೇವಲ ಒಂದು ವ್ಯಾಯಾಮ ಪದ್ಧತಿಯಷ್ಟೇ ಅಲ್ಲ, ಬದಲಿಗೆ ಸಂಪೂರ್ಣವಾಗಿ ಇಡೀ ಬದುಕನ್ನು ತೃಪ್ತಿದಾಯಕವಾಗಿ ಹೇಗೆ ನಡೆಸಬೇಕು ಎಂಬುದನ್ನು ಕಲಿಸಿಕೊಡುವ ತತ್ವಶಾಸ್ತ್ರವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ಭಾನುವಾರ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು, ಆಯುಷ್ ಇಲಾಖೆ, ಮೈಸೂರು, ಮೈಸೂರು ಅರಮನೆ ಮಂಡಳಿ, ಯುವ ಸಬಲೀಕರಣ…

Read More

ಜೂನ್ 21ರಾಮಸಮುದ್ರದಲ್ಲಿ ಧಾರ್ಮಿಕ ಪೂಜೆ. ಬೆಳ್ಳಿ ಕಂಡಾಯ. ಪುಟಾಣಿ ಮಕ್ಕಳ ಹಾಲುರವೆ ಮೆರವಣಿಗೆ

ವರದಿ ಜಿ ಬಂಗಾರುಚಾಮರಾಜನಗರ. ಜೂನ್ 20; ರಾಮಸಮುದ್ರದ ನಾಯಕರ ಬಡಾವಣೆಯಲ್ಲಿಶ್ರೀ ಆಂಜನೇಯಸ್ವಾಮಿ, ಶ್ರೀ ಮಹರ್ಷಿ ವಾಲ್ಮೀಕಿ,ರಾಜವೀರ ಮದಕರಿನಾಯಕ ಪುತ್ಥಳಿಗಳು ಮತ್ತು ನೂತನವಾಗಿ ನಿರ್ಮಿಸಿರುವ ಮಹಾದ್ವಾರ ಉದ್ಘಾಟನೆ ಪೂಜಾ. ಹೋಮ ಪುಟಾಣಿ ಮಕ್ಕಳ ಹಾಲುರವೆ ಮಂಟೆಸ್ವಾಮಿ ದೇವರ ಮೆರವಣಿಗೆಮಹೋತ್ಸವದದಿನಾಂಕ 21.6,2026 ಭಾನುವಾರ ಬೆಳಿಗ್ಗೆ 4. 15, ರಿಂದ 5.45, ಹೋಮ , ನಡೆಯಲಿದೆ.5,45, ಗೋಪೂಜೆ. 6,15. ಊರಿನ ಪ್ರಮುಖ ಬೀದಿಗಳಲ್ಲಿ ಪುಟಾಣಿ ಮಕ್ಕಳ ಹಾಲರವೆ, ಹಾಗೂ ಬೆಳ್ಳಿ ಕಂಡಾಯ. ಮಂಟೇಸ್ವಾಮಿ ದೇವರ ಉತ್ಸವ ಮೆರವಣಿಗೆ. ರಾಮ ಸಮುದ್ರದ ಸುಭದಾರ್…

Read More

ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳ ಕೆಲಸಗಳನ್ನು ಚುರುಕುಗೊಳಿಸಿ: ಲಕ್ಷ್ಮಿಕಾಂತರೆಡ್ಡಿ ಜಿ

ಮೈಸೂರು: ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ 80 ರಷ್ಟು ಅನುದಾನ ಬಿಡುಗಡೆಯಾಗಿರುತ್ತದೆ. ಕೆಲಸ ಚುರುಕುಗೊಳಿಸಿ ಕಾಮಗಾರಿ ಪ್ರಾರಂಭಿಸುವಂತೆ ಜಿಲ್ಲಾದಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿಗಳ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದಲ್ಲಿ ಹೊಸದಾಗಿ ಅನುದಾನ ನೀಡುವುದಿಲ್ಲ. ಅನುಷ್ಠಾನ ಇಂಜಿನಿಯರಿಂಗ್ ಇಲಾಖೆಗಳು ಕಾಮಗಾರಿಗಳ ಬಗ್ಗೆ ಹೆಚ್ಚಿನ ನಿಗಾ…

Read More

ಸಿಕಲ್ ಸೆಲ್ ಅನಿಮಿಯಾ ಸ್ಕ್ರೀನಿಂಗ್ ನಲ್ಲಿ ಜಿಲ್ಲೆಯಲ್ಲಿ ಶೇ ನೂರರಷ್ಟು ಸಾಧನೆ ; ಡಿಎಚ್‍ಒ ಡಾ. ಪಿ ಸಿ ಕುಮಾರ್ ಸ್ವಾಮಿ

ಮೈಸೂರು; ಜಿಲ್ಲೆಯಲ್ಲಿ ಸಿಕಲ್ ಸೆಲ್ ಅನಿಮಿಯಾ ಸ್ಕ್ರೀನಿಂಗ್‍ನಲ್ಲಿ ಶೇಕಡಾ 100 ರಷ್ಟು ಪ್ರಗತಿ ಆಗಿದ್ದು, ಇದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರ್ ಸ್ವಾಮಿ ಪಿ ಸಿ ಅವರು ತಿಳಿಸಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಿಕಲ್ ಸೆಲ್ ಅನಿಮಿಯಾ ದಿನ ಹಾಗೂ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷದಿಂದ ಸಿಕಲ್ ಸೆಲ್ ಅನಿಮಿಯಾ…

Read More

ಆಗಸ್ತ್ಯ ಗುರುಕುಲ ಆಶ್ರಮದಲ್ಲಿ ಯೋಗ ಕಾರ್ಯಗಾರ

ಮೈಸೂರು; 12 ನೇಯ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಯಾಗಿ ಆಗಸ್ತ್ಯ ಗುರುಕುಲ ಆಶ್ರಮದಲ್ಲಿ ಹಾಗೂ ವಿದ್ಯಾರಣ್ಯಪ್ಯರಂ ಶ್ರೀ ವಾಣಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗದ ಕಾರ್ಯಗಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ಯೋಗೀಸ್ ಟ್ರಸ್ಟ್ ನ ಸಂಸ್ಥಾಪಕ ಅz ಮಹತ್ವ sÀ್ಯಕ್ಷ ಯೋಗ ಪ್ರಕಾಶ್, ಮುಕುಂದನ್ ಹಾಗೂ ಅಗಸ್ತ್ಯ ಗುರುಕುಲ ಆಶ್ರಮದ ಮುಖ್ಯಸ್ಥರಾದ ಭಾಗ್ಯಲಕ್ಷ್ಮಿ ಇನ್ನಿತರ ಶಿಬಿರರ್ಥಿಗಳು ಭಾಗವಹಿಸಿದ್ದರು.

Read More

ಆರೋಗ್ಯವಂತ ಪ್ರಜೆಗಳಾಗಬೇಕಾದರೆ ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಪ್ರಾಣಾಯಾಮ ಧ್ಯಾನ ಮಾಡಬೇಕಾಗಿದೆ; ಡಾ.ಎ. ಎಸ್ ಚಂದ್ರಶೇಖರ್

ಮೈಸೂರು; ನಗರದ ಹೂಟಗಳ್ಳಿಯಲ್ಲಿರುವ ಶ್ರೀ ಪರಮಹಂಸ ಯೋಗ ಶಿಕ್ಷಣ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 12ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಎ. ಎಸ್ ಚಂದ್ರಶೇಖರ್ ಮಾತನಾಡಿ, ಇಂದು ಕಲುಷಿತವಾಗಿರುವ ವಾತಾವರಣದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ. ಆರೋಗ್ಯವಂತ ಪ್ರಜೆಗಳಾಗಬೇಕಾದರೆ ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಪ್ರಾಣಾಯಾಮ, ಧ್ಯಾನ ಮಾಡಬೇಕಾಗಿದೆ. ದೈಹಿಕ , ಮಾನಸಿಕ, ಆಧ್ಯಾತ್ಮಿಕ ಮತ್ತು ಭೌತಿಕ ಸಾಧನೆಗೆ ಯೋಗವು ಅತ್ಯವಶ್ಯಕ. ಆರೋಗ್ಯವಂತ ಪ್ರಜೆಗಳಾದರೆ ಆರೋಗ್ಯವಂತ ದೇಶವನ್ನು ಕಟ್ಟಬಹುದು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು…

Read More

13 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಯ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಮಾಪನ

ಮೈಸೂರು ; ಗ್ರೂಪ್ ಹೆಚ್‍ಕ್ಯೂ ಎನ್‍ಸಿಸಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ 13 ಕರ್ನಾಟಕ ಬೆಟಾಲಿಯನ ಎನ್‍ಸಿಸಿಯ ಸಂಯೋಜಿತ ವಾರ್ಷಿಕ ಥಲ್ ಸೈನಿಕ್ ಶಿಬಿರ ವನ್ನು ಮೈಸೂರಿನ ಪೆÇಲೀಸ ತರಬೇತಿ ಶಾಲೆಯಲ್ಲಿ ಜೂನ್ 11 ರಿಂದ 20 ರವರೆಗೆ ಶಿಬಿರ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಸಂಜೀವ ಯಮನಪ್ಪ ಕೊಡತೆ ಮತ್ತು ಉಪ ಶಿಬಿರ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಅರುಣ ಪ್ರಕಾಶ ಮೌರ್ಯ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ 113 ಟಿಎಸ್‍ಸಿ ಕೆಡೆಟ್‍ಗಳು ಸೇರಿದಂತೆ ಮೈಸೂರು…

Read More

ವಿಕಸಿತ ಭಾರತದ ಗುರಿ ತಲುಪಲು ಔಪಚಾರಿಕ ವಲಯದ ಉದ್ಯೋಗ ಸೃಷ್ಟಿ ಅಗತ್ಯ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು; ಭಾರತದ ಸಮಗ್ರ ಮತ್ತು ಸಂಪೂರ್ಣ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿಯೊಬ್ಬರಿಗೂ ಉದ್ಯೋಗದ ಅವಕಾಶಗಳು ಸಿಗಬೇಕು ಹಾಗೂ ದೇಶದ ಬಹುಪಾಲು ಜನರನ್ನು ಅನೌಪಚಾರಿಕ ವಲಯದಿಂದ ಔಪಚಾರಿಕ ವಲಯಕ್ಕೆ ಫಾರ್ಮಲ್ ಸೆಕ್ಟರ್ ತರುವುದು ಇಂದಿನ ಅಗತ್ಯವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಶುಕ್ರವಾರ ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ ಪ್ರಾದೇಶಿಕ ಕಚೇರಿಯ ನೌಕರರ ಭವಿಷ್ಯನಿಧಿ ಸಂಸ್ಥೆಯ ವತಿಯಿಂದ ಮೂಲಕ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‍ಗಾರ್ ಯೋಜನೆ ಯ ಪೆÇ್ರೀತ್ಸಾಹ ಧನ ವಿತರಣ ಕಾರ್ಯಕ್ರಮವನ್ನು…

Read More

ವ್ಯಕ್ತಿಯಸಮಗ್ರವ್ಯಕ್ತಿತ್ವವಿಕಾಸಕ್ಕೆಸಾಂಸ್ಕøತಿಕಚಟುವಟಿಕೆಗಳುಅತ್ಯಗತ್ಯ; ಡಾ. ಸ್ಪರ್ಶಶೆಣೈ

ಮೈಸೂರು; ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಾಂಸ್ಕøತಿಕ ಚಟುವಟಿಕೆಗಳು ಅತ್ಯಗತ್ಯ ಎಂದು ಖ್ಯಾತ ಭರತನಾಟ್ಯ ಕಲಾವಿದೆ ಡಾ. ಸ್ಪರ್ಶ ಶೆಣೈ ಹೇಳಿದರು. ಮೈಸೂರಿನ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕøತಿಕ ವೇದಿಕೆಯನ್ನು  ಉದ್ಘಾಟಿಸಿ  ಮಾತನಾಡಿದ ಅವರು,  ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳ ಜ್ಞಾನವಲ್ಲ. ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಾಂಸ್ಕøತಿಕ ಚಟುವಟಿಕೆಗಳು ಅತ್ಯಗತ್ಯ. ನಮ್ಮ ಸಂಸ್ಕøತಿ, ಪರಂಪರೆ, ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸೃಜನಶೀಲತೆ ಮತ್ತು ಸಾಮಾಜಿಕ…

Read More

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಪ್ರಭುತ್ತದೊಳಗೆ ಪ್ರಜಾ ಪ್ರಭುತ್ವ ತೋರಿಸಿದ ಮಹಾತ್ಮರು

ಮೈಸೂರು: ಇಂದು ನೆಪಮಾತ್ರಕ್ಕೆ ಪ್ರಜಾಪ್ರಭುತ್ವ ಇದೆ. ಅದರೊಳಗೆ ರಾಜಪ್ರಭುತ್ವ ಎದ್ದು ಕಾಣಿಸುತ್ತಿದೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಪ್ರಭುತ್ತದೊಳಗೆ ಪ್ರಜಾ ಪ್ರಭುತ್ವ ತೋರಿಸಿದ ಮಹಾತ್ಮರು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹೇಳಿದರು.ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರುನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹನೀಯರನ್ನು ಪಡೆದ ಕನ್ನಡಿಗರು ಅದರಲ್ಲೂ ಮೈಸೂರಿಗರು ಅದೃಷ್ಟವಂತರು. ಆದರೆ…

Read More