Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮನೆಗೊಂದು ಮರ ಬೆಳೆಸುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳಸಬೇಕು; ಸಿ.ನಾರಾಯಣಗೌಡ

ಮೈಸೂರು: ಮನೆಗೊಂದು ಮರ ಬೆಳೆಸುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳಸಬೇಕೆಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದರು.ನಗರದ ಚಾಮುಂಡಿಪುರAನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಅರಿವು ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್,ಕಡಕೋಳ ಪಟ್ಟಣ ಪಂಚಾಯತ್ ಆರೋಗ್ಯ ನಿರೀಕ್ಷಿಕ ಮಂಜುನಾಥ್ ,ಪರಿಸರ ಪ್ರೇಮಿ ಕೃಷ್ಣಪ್ಪ (ಘಂಟಯ್ಯ),ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್,ಗಗನ್ ಗೌಡ ರವರಿಗೆ ಪರಿಸರ ಪ್ರೇಮಿ ಪ್ರಶಸ್ತಿ ಪ್ರದಾನ ಮಾಡಿ…

Read More

ಮಹಾರಾಜ, ಓವೆಲ್‌ ಮೈದಾನದಲ್ಲಿ ಯೋಗ

ಮೈಸೂರು: ಪ್ರಸಕ್ತ ಸಾಲಿನ ವಿಶ್ವ ಯೋಗ ದಿನವನ್ನು ಯೋಗ ನಗರ ಮೈಸೂರಿನ ನಾಲ್ಕು ಪ್ರಧಾನ ವೇದಿಕೆಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ವಿಶ್ವ ಸಂಸ್ಥೆ 2015ರಲ್ಲಿ ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ಕಳೆದ 11 ವರ್ಷಗಳಲ್ಲೂ ಯೋಗಾಚರಣೆಯ ಬಹುತೇಕ ಚಟುವಟಿಕೆಗಳು ಮೈಸೂರು ಅರಮನೆ ಅಂಗಳದಲ್ಲೇ ನಡೆದಿವೆ.ಈ ಬಾರಿ ಯೋಗಾಪಟುಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಿನೂತನ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಮೈಸೂರು ಅರಮನೆ ಅಂಗಳದಲ್ಲೂ ಯೋಗಾಭ್ಯಾಸ ನಡೆಯಲಿದೆ. ಹೆಚ್ಚುವರಿಯಾಗಿ ಮಹಾರಾಜ ಕಾಲೇಜು…

Read More

ಕೆಂಪೇಗೌಡರ ಜಯಂತಿಯ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ

ಮೈಸೂರು; ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂನ್ 27ರಂದು ಮೈಸೂರಿನ ಕಲಾಮಂದಿರದಲ್ಲಿ ಆಯೋಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಜಯಂತಿಯ ಕೆಂಪೇಗೌಡರ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.ಮೈಸೂರಿನ ಕುವೆಂಪು ನಗರದಲ್ಲಿರುವ ಬಂದAತಮ್ಮ ಕಾಳಮ್ಮ ದೇವಸ್ಥಾನದ ಮುಂಭಾಗ ಕೆಂಪೇಗೌಡರ ಜಯಂತಿಯ ಪ್ರಚಾರ ರಥಕ್ಕೆ ಮೈಸೂರಿನ ಆದಿ ಚುಂಚನಗಿರಿ ಶಾಖ ಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿಯವರು ಕೆಂಪೇಗೌಡರ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಅವರಿಗೆ ಶಾಸಕರುಗಳಾದ ಹರೀಶ್‌ಗೌಡ, ಜಿ.ಟಿ ದೇವೇಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು…

Read More

ಹಂಪಾಪುರ ಗ್ರಾಮದಲ್ಲಿ ಮಣ್ಣನ್ನು ರಕ್ಷಿಸಿ ಅಭಿಯಾನ

ಮೈಸೂರು; ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಹಾಗೂ ಎಟಿಎಂಎ ಮೈಸೂರು ಸಹಯೋಗದೊಂದಿಗೆ ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಖೇತ್ ಬಚ್ಚಾವೋ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಮಣ್ಣು ಪರೀಕ್ಷೆ, ಮಣ್ಣಿನ ಆರೋಗ್ಯ ನಿರ್ವಹಣೆ, ಹಸಿರು ಗೊಬ್ಬರ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಮಹತ್ವದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದರು. ಮಣ್ಣಿನ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ವೈಜ್ಞಾನಿಕ ಪೋಷಕಾಂಶ…

Read More

ಅಗ್ನಿ ದುರಂತದಲ್ಲಿ ಮೃತರಾದ ಕುಟುಂಬದವರಿಗೆ ತಲಾ 50 ಲಕ್ಷರೂ ಪರಿಹಾರ ನೀಡಿ; ಸಿ.ನಾರಾಯಣಗೌಡ ಆಗ್ರಹ

ಮೈಸೂರು; ಮೈಸೂರಿನ ದಟ್ಟಗಳ್ಳಿಯ ಪಬ್‌ವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಜೀವವಾಗಿ ದಹನವಾದ ಅಡುಗೆ ಸಿಬ್ಬಂದಿಗಳ ಕುಟುಂಬವರಿಗೆ ಕೂಡಲೇ 25 ಲಕ್ಷ ಪರಿಹಾರ ನೀಡಬೇಕೆಂದು ಮೈಸೂರು ಹೋಟಲು ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಟ್ಟಗಳ್ಳಿಯ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಅಡುಗೆ ಸಿಬ್ಬಂದಿಗಳು ಸಾವನ್ನಪ್ಪಿದ್ದು ಅತ್ಯಂತ ದು:ಖದ ವಿಷಯವಾಗಿದೆ. ಅವರ ಕುಟುಂಬದವರಿಗೆ ಭಗವಂತ ದು:ಖ ತಡೆಯುವ ಶಕ್ತಿನೀಡಲೆಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.ಮೃತರು ಡಾರ್ಜಲಿಂಗ್ ಮತ್ತು ನೇಪಾಳ ಮೂಲದವರಾಗಿದ್ದು, ಜೀವನ…

Read More

ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರ ಅಹೋರಾತ್ರಿ ಧರಣಿ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪ್ರವೇಶಾತಿ ಪಡೆದ ಸಂಶೋಧಕರುಗಳಿಗೆ ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ವಿವಿ ಸಂಶೋಧಕರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.ನಗರದ ಕ್ರಾಫಡ್9 ಹಾಲ್ ಬಳಿಯೇ ಸೋಮವಾರ ರಾತ್ರಿಯಿಂದಲೇ ಅಹೋರಾತ್ರಿ ಧರಣಿ ಆರಂಭಿಸಿದ್ದು, ಕೂಡಲೇ ಶಿಷ್ಯವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.ಇದೇ ವೇಳೆ ಮಾತನಾಡಿದ ಧರಣಿ ನಿರತರು, 2026-2027 ನೇ ಸಾಲಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡಲಾಗುವ ಶಿಷ್ಯವೇತನಕ್ಕೆ 2025 ಹಾಗೂ 2026 ನೇ ಸಾಲಿನ ಸಂಶೋಧಕರುಗಳು ಸೇರಿ ಒಟ್ಟು 96…

Read More

ಪಬ್‌ನಲ್ಲಿ ಅಗ್ನಿ ದುರಂತ; ಮೃತರ ದರ್ಶನ ಪಡೆದು, ಕುಟುಂಬದವರಿಗೆ ಸ್ವಾಂತಾನ ಹೇಳಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

*ಪಬ್‌ನವರು ಲೈಸನ್ಸ್ ಪಡೆದಿರಲಿಲ್ಲ, ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ*ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಚಿವರ ಸಭೆಮೈಸೂರು: ಮೈಸೂರಿನ ದಟ್ಟಗಳ್ಳಿ 3 ನೇ ಹಂತದ ನೇತಾಜಿ ವೃತ್ತದ ಬಳಿಯಿರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ರೆಸ್ಟೋ ಪಬ್‌ನ ಮಸಾಯಿ ಮರಾ ಕೆಫೆಯಲ್ಲಿ ಸೋಮವಾರ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡವರ ಪರಿಸ್ಥಿತಿಯನ್ನು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ವೀಕ್ಷಿಸಿ, ಅವರಿಗೆ ಧೈರ್ಯ ತುಂಬಿದರು.ಮಂಗಳವಾರ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಆಗಮಿಸಿದ ಸಚಿವರು, ಅಲ್ಲಿ ದಾಖಲಾಗಿರುವ ಘಟನೆಯಲ್ಲಿ ಗಾಯಗೊಂಡವರ ಪರಿಸ್ಥಿತಿಯನ್ನು ವೀಕ್ಷಿಸಿ,…

Read More

ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಇಬ್ಬರು ಸಾವು, 7 ಮಂದಿಗೆ ತೀವ್ರ ಗಾಯ

ಮೈಸೂರು: ಮೈಸೂರಿನ ದಟ್ಟಗಳ್ಳಿ ಸಮೀಪದಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ನಲ್ಲಿ ನಡೆದ ಬೆಂಕಿ ಅವಘಡ ಸಂಭವಿಸಿ, ಇಬ್ಬರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಗ್ಯಾರೇಜ್‌ನ ನೌಕರರು ಎಂದು ಹೇಳಲಾಗುತ್ತಿರುವ ಪ್ರಕಾಶ್ ಹಾಗೂ ಸುಹೆಲ್ ಎಂಬವರು ಮೃತಪಟ್ಟಿದ್ದು, ಪಬ್‌ನಲ್ಲಿದ್ದ ಸುಮಾರು 7 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಫಾಕ್ಸ್ ಡೆನ್ ಮೇಲಂತಸ್ತು ಮರ ಮತ್ತು ಹುಲ್ಲಿನಿಂದ ಅಲಂಕರಿಸಲಾಗಿತ್ತು.ಹಾಗಾಗಿ ಬೆಂಕಿ ಬೇಗ ಆವರಿಸಿದೆ,ಮೇಲಿಂದ ಕೆಳಗೆ ಬರಲು ಚಿಕ್ಕ ಸ್ಟೆಪ್ ಮಾತ್ರ ಇದೆ.ಜತೆಗೆ ಹೊರಗೆ ಬರಲು ಕೂಡಾ ಒಂದೇ…

Read More

ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಪರಿಸರ ದಿನಾಚರಣೆ

ಮೈಸೂರು; ಇಲ್ಲಿನ ಕುವೆಂಪು ನಗರದ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ ವತಿಯಿಂದ ಹಸಿರಿದ್ದರೆ ಉಸಿರು ಎಂಬ ಶೀರ್ಷಿಕೆ ಅಡಿಯಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಸಮಾಜದ ಸದಸ್ಯರಿಗೆ ಗಿಡ ನೀಡುವುದರ ಮೂಲಕ ವಿಶ್ವ ಪರಿಸರದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತುಅಲ್ಲದೆ ಮೆನೂ ಪಾಸ್ ಅವೇರ್ನೆಸ್ ಬಗ್ಗೆ ಜೆ ಎಸ್ ಎಸ್ ಆಸ್ಪತ್ರೆಯ ( ಆಯುರ್ವೇದ ವಿಭಾಗ ) ಡಾ. ತೇಜಸ್ವಿನಿ ಅವರ ತಂಡದಿAದ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ಇದರ ಉಪಯೋಗವನ್ನು…

Read More

ಅಭ್ಯುದಯ ಮಹಿಳಾ ಸಮಾಜದಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು; ಅಭ್ಯುದಯ ಮಹಿಳಾ ಸಮಾಜದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಂಪಿಗೆ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಮತ್ತು ಮಾಜಿ ಮೇಯರ್ ಬಿ .ಎಲ್. ಭೈರಪ್ಪನವರಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.ಈ ವೇಳೆ ಅಭ್ಯುದಯ ಮಹಿಳಾ ಸಮಾಜದ ಅಧ್ಯಕ್ಷೆ ಅಂಬಿಕ, ಉಪಾಧ್ಯಕ್ಷೆ ಸುಜಾತ, ಕಾರ್ಯದರ್ಶಿ ಮಧುರ ಮೈತ್ರಿ , ಉಪ ಕಾರ್ಯದರ್ಶಿ ಗಾಯತ್ರಿ ಜಯರಾಮ್, ಗೌರವಾಧ್ಯಕ್ಷೆ ಉಷಾ ಸಿಂಗ್ , ಸಂಸ್ಥಾಪಕ ಸದಸ್ಯರಾದ ಡಾ….

Read More