3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೂನ್ 7ರಂದು ಮೈಸೂರು ಯೋಗ ಒಕ್ಕೂಟದ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ


*ಶರೀರ ಶಾಸ್ತç, ಚಿಕಿತ್ಸಾ ಯೋಗ, ಸ್ವರ ಯೋಗ ಗೋಷ್ಠಿಗಳು ಮತ್ತು ಒಕ್ಕೂಟದ ಸದಸ್ಯರಿಗೆ ಗೌರವ ಸಮರ್ಪಣೆ

ಮೈಸೂರು; ಮೈಸೂರು ಯೋಗ ಒಕ್ಕೂಟದ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜೂನ್ 7ರಂದು ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಜಿ ದೇವರಾಜು ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ರಜತಮೋತ್ಸವ ಅಂಗವಾಗಿ ಆರೋಗ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶರೀರ ಶಾಸ್ತç, ಚಿಕಿತ್ಸಾ ಯೋಗ, ಸ್ವರ ಯೋಗ ಗೋಷ್ಠಿಗಳು ಮತ್ತು ಒಕ್ಕೂಟದ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಹೇಳಿದರು.
ಮೈಸೂರಿನ ರಾಮಕೃಷ್ಣನಗರದ ಶ್ರೀ ರಾಮಕೃಷ್ಣ ವಿದ್ಯಾರ್ಥಿ ಕೇಂದ್ರ ಶಾರದಾ ಸಭಾಂಗಣದಲ್ಲಿ ನಡೆಯುªನೀ ಕಾರ್ಯಕ್ರಮದಲ್ಲಿ ಅಂದು ಬೆಳೆಗೆ 9:30ಕ್ಕೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ ದೇವರಾಜು ಹಾಗೂ ಗೌರವಾಧ್ಯಕ್ಷ ಡಾ. ಎ ಎಸ್ ಚಂದ್ರಶೇಖರ್ ವಹಿಸುವರು ಅತಿಥಿಗಳಾಗಿ ಜಿಎಸ್‌ಎಸ್ ಯೋಗ ಫೌಂಡೇಶನ್ ಅಧ್ಯಕ್ಷ ಶ್ರೀ ಹರಿ ದ್ವಾರಕನಾಥ್, ಶ್ರೀ ರಾಮಕೃಷ್ಣ ವಿದ್ಯಾ ಕೇಂದ್ರ ಮತ್ತು ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಏನ್ ಪಾಪೇಗೌಡ, ಹಿರಿಯ ಸಮಾಜಸೇವಕ ಡಾ. ಕೆ ರಘುರಾಮ್, ಎಪಿಎಂ ಪ್ರಾಪರ್ಟೀಸ್ ಮ್ಯಾನೇಜಿಂಗ್ ಪಾರ್ಟ್ನರ್ ಎಂಪಿ ನಾಗೇಶ್ ಆಗಮಿಸುವರು. ಪ್ರಾಥಮಿಕ ನುಡಿಗಳನ್ನು ಒಕ್ಕೂಟದ ಗೌರವಾಧ್ಯಕ್ಷ ಟೀ ಜಲೇಂದ್ರ ಕುಮಾರ್ ನುಡಿಯುವರು. ಬೆಳಿಗ್ಗೆ 10:30 ರಿಂದ 11:30 ತನಕ ಯೋಗ ಘೋಷ್ಠಿ ಒಂದು ನಡೆಯಲಿದ್ದು, ಶರೀರ ಶಾಸ್ತç ವಿಷಯವಾಗಿ ಮೈಸೂರು ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ. ರಾಜಪುರ ಪರಶುರಾಮ್ ಮಾತನಾಡುವರು. ಅಧ್ಯಕ್ಷತೆಯನ್ನ ಮೈಸೂರು ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷಿ÷್ಮÃನಾರಾಯಣ ಶೈಣೈ ವಹಿಸುವರು. ಮುಖ್ಯ ಅತಿಥಿಗಳಾಗಿ ಪಿವೈಎಸ್‌ಎಸ್ ಅಧ್ಯಕ್ಷ ನಂಜುAಡಸ್ವಾಮಿ, ಮೈಸೂರು ಯೋಗ ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ರಮೇಶ್ ಕುಮಾರ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಸಿ.ರಮೇಶ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷರಾದ ಬಿ.ಪಿ ಮೂರ್ತಿ, ಬಿ.ಶಾಂತರಾಮ, ಹಿರಿಯ ಯೋಗಾಚಾರ್ಯ ಲಕ್ಷ÷್ಮಮ್ಮ, ಒಕ್ಕೂಟದ ಖಜಾಂಚಿ ನರಸಿಂಹ ಭಾಗವಹಿಸುವರು ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯೋಗ ಕುಮಾರ್ ಅವರು ನಿರೂಪಣೆ ಮಾಡುವರು.
ಯೋಗಾಗೋಷ್ಠಿ ಎರಡು ಬೆಳಗ್ಗೆ 11:30 ರಿಂದ 12:30 ರ ತನಕ ನಡೆಯಲಿದ್ದು, ಚಿಕಿತ್ಸೆ ಯೋಗ ವಿಷಯದ ಕುರಿತು ಚಿರಂಜೀವಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಜಯಶ್ರೀ ಬಂಗೇರಿ ಮಾತನಾಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ರೇಣುಕಾದೇವಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಡಾ. ಕೆ.ರಾಘವೇಂದ್ರ ಪೈ, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಎಂಎಸ್.ಶಿವಪ್ರಕಾಶ್, ಎಸ್‌ಟಿವೈಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಕಾಲಾಜಿ, ಭರತ ಸ್ವಾಭಿಮಾನ ಟ್ರಸ್ಟ್ನ ಅಧ್ಯಕ್ಷ ಎಸ್ ಶಶಿಕುಮಾರ್, ಹಿಮಾಲಯ ಪ್ರತಿಷ್ಠಾನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅನಂತ್.ಎನ್, ಹಿರಿಯ ಯೋಗಾಚಾರ್ಯ ಬಿಎಸ್ ಲಕ್ಷಿ÷್ಮÃ ಭಾಗವಹಿಸುವರು. ಒಕ್ಕೂಟದ ಯೋಗ ಒಕ್ಕೂಟದ ಉಪಾಧ್ಯಕ್ಷರಾದ ಎನ್.ಆಶಾದೇವಿ ನಿರೂಪಣೆ ಮಾಡುವರು.
ಮಧ್ಯಾಹ್ನ 12:30 ರಿಂದ 1 ಗಂಟೆ ತನಕ ಒಂದೇ ಮಾತರಂ 150 ವರ್ಷ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ರಿಂದ 3 ಗಂಟೆ ತನಕ ಯೋಗ ಘೋಷ್ಠಿ ಮೂರು ನಡೆಯಲಿದ್ದು, ಸ್ವರಯೋಗ ಕುರಿತು ಮೈಸೂರು ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಡಾ. ಶ್ರೀ ವತ್ಸ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಸುಯೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎಸ್.ಪಿ.ಯೋಗಣ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರು ಯೋಗ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ವಿ.ವೆಂಕಟೇಶಯ್ಯ, ಶ್ರೀರಾಮಕೃಷ್ಣ ವಿದ್ಯಾ ಕೇಂದ್ರದ ಅಧ್ಯಕ್ಷ ಪ್ರೊ. ಚಂದ್ರಶೇಖರ್, ಎಸ್‌ಪಿವೈಎಸ್‌ಎಸ್ ನ ಸತ್ಯನಾರಾಯಣ, ಮೈಸೂರು ಯೋಗ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಚಂದ್ರು, ಹಿರಿಯ ಯೋಗ ಆಚಾರ್ಯರುಗಳಾದ ಲಕ್ಷಿ÷್ಮನಾಥ್, ಮಧುಬಾಲ ಗುಪ್ತ, ನಂದಿನಿಮೂರ್ತಿ, ನರಸಿಂಹ ಪ್ರಸಾದ್, ದುಂಡಯ್ಯ ಭಾಗವಹಿಸುವರು. ಮಣಿಕಂಠನ್ ನಿರೂಪಣೆ ಮಾಡುವರು. ಮಧ್ಯಾಹ್ನ ಮೂರರಿಂದ ನಾಲ್ಕರ ತನಕ ಮೈಸೂರು ಯೋಗ ಒಕ್ಕೂಟದ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು ಸುದ್ದಿಗೋಷ್ಢಿಚಿiÀÄಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.