
ಚಾಮರಾಜನಗರ; ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಕೋರ್ ವಲಯದಲ್ಲಿ ಮೂವರು ಮದ್ಯ ಸೇವನೆ ಮಾಡಿದ್ದ ಫೋಟೋ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಸಂಬAಧ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ವಲಯ ಅರಣ್ಯಾಧಿಕಾರಿಯನ್ನು ಸರ್ಕಾರ ಸಸ್ಪೆಂಡ್ ಮಾಡಿದೆ.
ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಡಿ.ಪುನೀತ್ ಕುಮಾರ್ ಅಮಾನತಾದವರು.
ಮದ್ದೂರು ವಲಯದ ಕಳ್ಳ ಬೇಟೆ ಶಿಬಿರದ ಬಳಿಯ ಹುಲಿ ಕಟ್ಟೆಯಲ್ಲಿ ಮೂವರು ಮದ್ಯ ಸೇವನೆ ಮಾಡಿದ್ದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬAದಿಸಿದAತೆ ಅರಣ್ಯ ಇಲಾಖೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮಹದೇವಪ್ರಸಾದ್ ಬಿನ್ ನಾಗಪ್ಪ(38), ಗುಂಡ್ಲುಪೇಟೆ ಪಟ್ಟಣದ ಗಂಗಾಧರ್ ಬಿನ್ ನಾಗೇಗೌಡ(50) ಹಾಗೂ ಕಗ್ಗಳ ಗ್ರಾಮದ ಚೇತನ್ ಬಿನ್ ನಂಜಪ್ಪ(33) ಎಂಬ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕ್ರಮ ವಹಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕಂಡುಬAದ ಫೋಟೋ ಮಾಹಿತಿ ಮೇರೆಗೆ, ಅರಣ್ಯ ಅತಿಕ್ರಮ ಪ್ರವೇಶ ಅಪರಾಧಕ್ಕೆ ಸಂಬAಧಿಸಿದAತೆ ಮದ್ದೂರು ವನ್ಯ ವಲಯದ ಕಾಕನಕೋಟೆ ಬೆಟ್ಟ ಗಸ್ತಿನ ಹುಲಿ ಕಟ್ಟೆ ಕಳ್ಳಬೇಟೆ ಶಿಬಿರದಲ್ಲಿ ನಡೆಸಲಾದ ಮದ್ಯ ಪಾರ್ಟಿಗೆ ಸಂಬAದಿಸಿದAತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸೆಕ್ಷನ್ 27(1), (4)ರಡಿ ಪ್ರಕರಣ ದಾಖಲಾಗಿದೆ. ನಿಷೇಧಿತ ಅಭಯಾರಣ್ಯದಲ್ಲಿ ಮದ್ಯ ಸೇವನೆ ಮಾಡಿ ಫೋಟೋ ಕ್ಲಿಕ್ಕಿಸಿದ್ದ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ನಿಷೇಧಿತ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ವಲಯ ಅರಣ್ಯಾಧಿಕಾರಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ಲೇಗಿ ಅವರು ಅಮಾನತು ಮಾಡಿ, ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.