3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಸ್.ಸಿ.ಬಸವರಾಜುಗೆ ವಿಧಾನ ಪರಿಷತ್ ಸ್ಥಾನ ಮತ್ತು ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಲು ದೇವರಾಜ್ ಟಿ.ಕಾಟೂರು ಒತ್ತಾಯ

ಮೈಸೂರು; ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಸಿ.ಬಸವರಾಜು ಅವರಿಗೆ ವಿಧಾನಪರಿಷತ್ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು ಒತ್ತಾಯಿಸಿದರು.ಮಂಗಳವವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದ ನಾಯಕ ಸಮಾಜದವರಿಗೆ ಸ್ವಾತಂತ್ರ ನಂತರದಿAದಲ್ಲೂ ಕಾಂಗ್ರೇಸ್ ಪಕ್ಷದಿಂದ ವಿಧಾನ ಪರಿಷತ್ ಸ್ಥಾನ ನೀಡದೆ, ರಾಜಕೀಯ ಅನ್ಯಾಯ ಮಾಡಿರುವ ಕಾಂಗ್ರೇಸ್ ಹೈಕಮಾಂಡ್, ಈ ಅನ್ಯಾಯವನ್ನು…

Read More

ವಿ.ಎಸ್.ಉಗ್ರಪ್ಪರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಒತ್ತಾಯ ದ್ಯಾವಪ್ಪ ನಾಯಕ

ಮೈಸೂರು; ಮಾಜಿ ಸಂಸದ ವಿ.ಎಸ್. ಉಗ್ರಪ್ಪರವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಬೇಕೆಂದು ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿ.ಎಸ್. ಉಗ್ರಪ್ಪ ಅವರು, ಸುಮಾರು 35 ವರ್ಷಗಳಿಂದ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದು, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಜನಪರವಾಗಿ ಧ್ವನಿಯೆತ್ತಿದ್ದರು. ನಾಯಕ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಹಿಳೆಯ…

Read More

ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ; ಸಂಸದ ಯದುವೀರ್ ಒಡೆಯರ್

ಮೈಸೂರು: ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ತಿಳಿಸಿದ್ದಾರೆ.ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬAಧಿಸಿದ ವಿವಿಧ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಿದರು.ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗಕ್ಕೆ ಸಂಬAಧಿಸಿದAತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ…

Read More

ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗಲೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು

ಮೈಸೂರು; ಜಿಲ್ಲೆಯ ಎಚ್.ಡಿ ಕೋಟೆ ಕ್ಷೇತ್ರದ ಶಾಸಕ ಅನೀಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗಬೇಕೆಂದು ಅಭಿಮಾನಿಗಳು ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮೈಸೂರಿನ ಅಗ್ರಹಾರದಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಮಹಾಗಣಪತಿಗೆ ಹಿಡುಗಾಯಿ ಸೇವೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ನಗರಪಾಲಿಕೆಯ ಮಾಜಿ ಸದಸ್ಯ ಲೋಕೇಶ್ ಪಿಯಾ,ಹಳೆ ಮೈಸೂರು ಭಾಗದಲ್ಲಿ ಏಕೈಕ ನಾಯಕ ಸಮುದಾಯದ ಯುವನಾಯಕರಾದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಕಾಂಗ್ರೆಸ್…

Read More

ರೈತರು ಬದಲಾದರೆ ಭಾರತ ದೇಶ ಮುಂದಿನ 5 ವರ್ಷಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು;ಆಹಾರ ತಜ್ಞ ಡಾ ಖಾದರ್

ಉತ್ತಮ ಆರೋಗ್ಯಕ್ಕಾಗಿ ಪರಿಸರ ಕಾಪಾಡಬೇಕು; ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡುವ ವ್ಯವಸಾಯ ಮಾಡಬೇಡಿಮೈಸೂರು; ರೈತರು ಆಹಾರ ಬೆಳೆಯುವ ಪದ್ಧತಿಯಿಂದ ರೋಗ ಬೆಳೆಯುತ್ತಿದೆ. ರೈತನೇ ನಿಜವಾದ ವೈದ್ಯ. ಹಾಗಾಗಿ ಭಾರತ ದೇಶದಲ್ಲಿ ರೋಗ ಮುಕ್ತವಾಗುವುದಕ್ಕೆ ರೈತನೇ ಹೊರತು ವೈದ್ಯರಿಂದ ಸಾಧ್ಯವಿಲ್ಲ ಎಂದು ಆಹಾರ ತಜ್ಞ ಸಿರಿಧಾನ್ಯ ಜಾಗೃತಿ ನೇತಾರ ಡಾಕ್ಟರ್ ಖಾದರ್ ಹೇಳಿದರು.ಮೈಸೂರಿನ ಇನ್ಸಿ÷್ಟಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ,…

Read More

ಎಲ್ಲರ ಕಣ್ಮನ ಸೆಳೆಯುತ್ತಿರುವ ನೀಲಿ ಸುಂದರಿ !

ಅಪಾರ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಹಾಗೂ ಮಧುಮೇಹಿಗಳಿಗೆಂದು ಪ್ರಕೃತಿಯೇ ನೀಡಿದ ದಿವ್ಯ ಔಷಧಿಯಾಗಿರುವ ನೀಲಿ ಸುಂದರಿ ನೇರಳೆ ಹಣ್ಣು ಇದೀಗ ಮಾರುಕಟ್ಟೆಗೆ ಬಂದು ಎಲ್ಲರ ಕಣ್ಮನ ಸೆಳೆಯುತ್ತಿವೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ನೇರಳೆ ಹಣ್ಣಿನ ರುಚಿಯನ್ನು ಸವಿಯಲು ಇಷ್ಟು ಪಡುತ್ತಾರೆ. ಯಾಕೇಂದರೆ ಇದು ಪ್ರಕೃತಿಯ ಸೀಜನ್ ಪ್ರೂಟ್ಸ್ಪ್ರಕೃತಿ ನಮಗೆ ಕಾಲಕಾಲಕ್ಕೆ ತಕ್ಕಂತೆ ವಿವಿಧ ಹಣ್ಣುಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಸಿಕ್ಕರೆ, ಜೂನ್ ವರೆಗೂ ಮಾವಿನ ಹಣ್ಣು ಬಾಯಿಯಲ್ಲಿ ನೀರೂರಿಸುತ್ತದೆ. ಇನ್ನೇನು ಮಾವು ಮುಗಿಯಿತು ಎನ್ನುವ…

Read More

ಇದು ಎಷ್ಟು ನಿಜ ಅಲ್ವಾ…,ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಬಿಟ್ಟರೆ..ಹೆತ್ತವರ ಗತಿಯೇನು ಹೆತ್ತವರು ದುಡಿದು ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ ತಕ್ಷಣದಿಂದ,ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಬಿಟ್ಟರೆ..,ಹೆತ್ತವರ ಗತಿಯೇನು,ನಾವು ಹಕ್ಕಿಗಳಲ್ಲ…, ನಮ್ಮಲ್ಲಿ ವಿವೇಚನಾ ಶಕ್ತಿ ಇದೆ.., ವಿವೇಚನಾ ಶಕ್ತಿ ಇರುವ ಏಕೈಕ ಪ್ರಾಣಿ ಮನುಷ್ಯ…,ಹಾಗಾದರೂ ಕೂಡ, ಮಕ್ಕಳು ಕೃತಘ್ನರಾಗುತ್ತಿರುವುದು ಹೇಗೆ?.,ಇಂದು ವಿದ್ಯಾವಂತ ಮಕ್ಕಳ ತಂದೆತಾಯಿಯರು ಇರುವುದು ಆಶ್ರಮದಲ್ಲಿ…,ತಿಂಗಳಿಗೋ ಅಥವಾ ವರ್ಷಕ್ಕೋ ಇಂತಿಷ್ಟು ಹಣ ನೀಡಿದರೆ ಮುಗಿಯಿತು ಎಂದು ಕೊಳ್ಳುವ ಮಕ್ಕಳಿಗೆ ಸಂಸ್ಕಾರದ ಕೊರತೆ…

Read More

ಗ್ರಾಹಕರಿಲ್ಲದೆ ಭಣಗುಡುತ್ತಿವೆ ಜ್ಯುವೆಲ್ಲರಿ ಶಾಪ್‌ಗಳು!

ಚಿನ್ನದ ವಹಿವಾಟು ಶೇಕಡಾ 70 ರಷ್ಟು ಡೌನ್ ಹೊಸದೆಹಲಿ; ದೇಶಾದ್ಯಂತ ಚಿನ್ನದ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ಹಳದಿ ಲೋಹದ ಖರೀದಿಯಲ್ಲಿ ಭಾರಿ ಇಳಿಕೆ ದಾಖಲಾಗಿದೆ. ಇದರ ನೇರ ಪರಿಣಾಮವಾಗಿ ಭಾರತಕ್ಕೆ ಆಗುತ್ತಿದ್ದ ಚಿನ್ನದ ಆಮದು ಪ್ರಮಾಣದಲ್ಲೂ ಭಾರಿ ಕುಸಿತ ಕಂಡುಬAದಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.ವಿದೇಶದಿಂದ ಆಮದು ಪ್ರಮಾಣ ಕೇವಲ 7.5 ಟನ್‌ಗೆ ಕುಸಿದಿದೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಚಿನ್ನದ ಆಮದು ಪ್ರಮಾಣದಲ್ಲಿ ಶೇಕಡಾ 70 ರಷ್ಟು ಬೃಹತ್ ಇಳಿಕೆಯಾಗಿದೆ. ಕಳೆದ…

Read More

ನಾಲ್ಮಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು” ಕೃತಿ ಬಿಡುಗಡೆ

ಮೈಸೂರು; ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ಜೂನ್ 4 ರಂದು ಮೈಸೂರಿನಲ್ಲಿ “ನಾಲ್ಮಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು” ಕೃತಿ ಬಿಡುಗಡೆ ಮಾಡಲಾಗುವುದು ಎಂದು ಪರಿಷತ್‌ನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ತಿಳಿಸಿದರು.ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಾಲ್ಮಡಿ ಅವರ ಕುರಿತು ‘ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ ಎಂಬ ಪುಸ್ತಕ ಪ್ರಕಟಿಸಿ, ಬೆಂಗಳೂರಿನಲ್ಲಿ ಜನಾರ್ಪಣೆ ಮಾಡಿ ಅವರಿಗೆ ಕೃತಜ್ಞತೆ ಮತ್ತು ಗೌರವಗಳನ್ನು…

Read More

ಸಾಧನೆಯ ಶಿಖರಗಳು’ ಕೃತಿ ಲೋಕಾರ್ಪಣೆ

ಮೈಸೂರು: ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಅವರ ಲೇಖನ ಸಂಕಲನಸಾಧನೆಯ ಶಿಖರಗಳು (ಸ್ಫೂರ್ತಿದಾಯಕ ವ್ಯಕ್ತಿ ಚಿತ್ರಗಳು)’ ಕೃತಿಯು ಇಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮAದಿರದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.ಭಾರತೀ ಪ್ರಕಾಶನ, ಮೈಸೂರು ವತಿಯಿಂದ ಪ್ರಕಟಿತ ಈ ಕೃತಿಯನ್ನು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಅವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ವ್ಯಕ್ತಿಗಳ ಸಾಧನೆಗಳನ್ನು ದಾಖಲಿಸಿ ಸಮಾಜಕ್ಕೆ ಸ್ಫೂರ್ತಿ ನೀಡುವ ಇಂತಹ ಕೃತಿಗಳು ಯುವಜನತೆಗೆ ಮಾರ್ಗದರ್ಶಿಯಾಗುತ್ತವೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್…

Read More