Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಲಾವಿದರು ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನೈಜ ಸೈನಿಕರು : ಪ್ರೊ. ಕೆ. ರಾಮಕೃಷ್ಣಯ್ಯ


ಮೈಸೂರು; ಒಂದು ರಾಷ್ಟçದ ಗಡಿಯನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ, ಈ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೈನಿಕರಾಗಿ ಯುವ ಕಲಾವಿದರು ಅಷ್ಟೇ ಮುಖ್ಯವಾದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ. ರಾಮಕೃಷ್ಣಯ್ಯ ಹೇಳಿದರು.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಸಹಯೋಗದಲ್ಲಿ ಕೆ.ಎಸ್.ಜಿ.ಎಚ್ ರಂಗಮAದಿರದಲ್ಲಿ ಏರ್ಪಡಿಸಿದ್ದ ಯುವ ಸೌರಭ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕಲೆ ಎಂಬುದು ಕಣ್ಣಿಗೆ ಕಾಣಿಸದಿದ್ದರೂ, ಕಣ್ಣಿಗೆ ಕಟ್ಟುವ ಹಾಗೆ ವೇದಿಕೆಯ ಮೇಲೆ ಪ್ರದರ್ಶನ ಮಾಡುವ ಅದ್ಭುತ ಶಕ್ತಿ ಅದಕ್ಕಿದೆ. ಕಲೆಯ ಸೌಂದರ್ಯ, ಅದರ ನೋವು ಮತ್ತು ನಲಿವುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಶಕ್ತಿ ವಿವಿಧ ಕಲೆಗೆ ಇದೆ. ಕಲೆಗಳನ್ನು ಶಾಸ್ತಿಯವಾಗಿ ಕಲಿಸುವ ಜವಾಬ್ದಾರಿ ವಿಶ್ವವಿದ್ಯಾಲಯದ್ದಾದರೆ, ಆ ಕಲೆಗಳನ್ನು ಪೋಷಿಸಿ, ಜನಸಂಪರ್ಕದ ಮೂಲಕ ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯದ್ದಾಗಿದೆ ಎಂದು ಹೇಳಿದರು.
ಸೌರಭ ಎಂದರೆ ಪರಿಮಳ, ಒಂದು ಹೂವು ಅರಳಿ ತನ್ನ ಪರಿಮಳವನ್ನು ಹರಡುವಂತೆ, ಯುವ ಕಲಾವಿದರು ತಮ್ಮಲ್ಲಿರುವ ಡೊಳ್ಳು ಕುಣಿತ, ಕಂಸಾಳೆ, ನಾಟಕ, ಶಾಸ್ತಯ ಸಂಗೀತ ಮತ್ತು ಭಾವಗೀತೆಗಳಂತಹ ವಿವಿಧ ಕಲಾ ಪ್ರಕಾರಗಳ ಮೂಲಕ ಸಮಾಜದಲ್ಲಿ ಕಲೆಯ ಪರಿಮಳವನ್ನು ಪಸರಿಸುತ್ತಿದ್ದಾರೆ ಎಂದು ಹೇಳಿದರು.
ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎಂ. ಜಿ ಮಂಜುನಾಥ್ ಮಾತನಾಡಿ, ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಹಾಗೂ ಶೈಕ್ಷಣಿಕವಾಗಿ ಅದನ್ನು ಉಳಿಸಿ ಬೆಳೆಸುವುದು ನಮ್ಮ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ. ಇದೇ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಕöÈತಿ ಇಲಾಖೆಯೂ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಎರಡೂ ಸಂಸ್ಥೆಗಳ ಗುರಿ ಒಂದೇ ಆಗಿದೆ ಎಂದರು.
ವಿಶ್ವವಿದ್ಯಾಲಯದ ಒಳಗಿನ ಮತ್ತು ಹೊರಗಿನ ಗೋಡೆಗಳನ್ನು ಚಿತ್ರಕಲೆಗಳ ಮೂಲಕ ಜಗಮಗಿಸುವಂತೆ ಮಾಡುವುದು. ಇಲ್ಲಿನ ವಿದ್ಯಾರ್ಥಿಗಳಿಗೆ ಕಾವಾ ಕಾಲೇಜಿನ ಚಿತ್ರಕಲೆಯ ಪರಿಚಯ ಮಾಡಿಕೊಡುವುದು.ಸಂಗೀತ, ನೃತ್ಯ ಮತ್ತು ರಂಗಭೂಮಿಗೆ ಸಂಬAಧಿಸಿದ ಕಲಾಕೃತಿಗಳನ್ನು ಗೋಡೆಗಳ ಮೇಲೆ ರಚಿಸಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಜಂಟಿ ನಿರ್ದೇಶಕಿಯಾದ ನಿರ್ಮಲಾ ಮಠಮತಿ ಮಾತನಾಡಿ, ಕಲ್ಲು, ಇಟ್ಟಿಗೆಗಳಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ, ಜನರ ಮನಸ್ಸುಗಳನ್ನು ಬೆಸೆಯುವ ಮೂಲಕ ದೇಶ ಕಟ್ಟಬೇಕಾಗಿದೆ. ಅದಕ್ಕೆ ಸಾಂಸ್ಕöÈತಿಕ ಚಟುವಟಿಕೆಗಳು ಮತ್ತು ಕಲೆಯು ಮನಸ್ಸುಗಳನ್ನು ಆರೋಗ್ಯಪೂರ್ಣವಾಗಿಡಲು ನೆರವಾಗುತ್ತವೆ ಎಂದರು.
ಸಾAಸ್ಕöÈತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗವಹಿಸುವುದರಿಂದ ನಮ್ಮ ಸಂಸ್ಕöÈತಿ, ಪರಂಪರೆ, ಕಲೆ ಮತ್ತು ಸಾಹಿತ್ಯದ ಮೌಲ್ಯಗಳು ಪರಿಚಯವಾಗುತ್ತವೆ. ಇದು ಕೇವಲ ಕಲಾ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ, ಯುವ ಪೀಳಿಗೆಯನ್ನು ಮಾನವೀಯತೆ ಉಳ್ಳ ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವ ಕಲಾವಿದರು ಭಾಗವಹಿಸಿ ಸುಗಮ ಸಂಗೀತ, ಜಾನಪದ ಗೀತೆಗಳು ಹಾಗೂ ಸಮೂಹ ನೃತ್ಯಗಳನ್ನು ಪ್ರಸ್ತುತಪಡಿಸಿದರು.
ವಿಶೇಷವಾಗಿ ಜಾನಪದ ನೃತ್ಯಗಳಾದ ತಮಟೆ ಮತ್ತು ಕಂಸಾಳೆ ನೃತ್ಯಗಳೊಂದಿಗೆ ಕಲಾವಿದರು ಗಣ್ಯರನ್ನು ಮೆರವಣಿಗೆಯಲ್ಲಿ ಕರೆತಂದರು.