Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಪರಾಧ ಪತ್ತೆಯಲ್ಲಿ ಹೊಸ ಸವಾಲುಗಳು ಹೇರಳವಾಗುತ್ತಿವೆ; ಸ್ಮಿತಾ ರಾವ್


ಮೈಸೂರು; ಇಂದಿನ ಪರಿಸ್ಥಿತಿ ಸಾಕಷ್ಟು ಬದಲಾಗಿದ್ದು ಅಪರಾಧ ಪತ್ತೆಯಲ್ಲಿ ಹೊಸ ಸವಾಲುಗಳು ಹೇರಳವಾಗುತ್ತಿವೆ ಎಂದು ಅಬಕಾರಿ ಇಲಾಖೆಯ ಬೆಂಗಳೂರಿನ ಉಪ ಆಯುಕ್ತೆ ಸ್ಮಿತಾ ರಾವ್
ಹೇಳಿದರು.
ಸಿವಿಲ್ ಪೋಲೀಸ್ ಕಾನ್ಸೆ÷್ಟÃಬಲ್ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಆಗಸ್ಟ್ ತಿಂಗಳ 2ರಂದು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ನಡೆದ ಐದನೇ ಅಣಕು ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪೋಲೀಸ್ ಇಲಾಖೆಗೆ ಸೇರಲು ಇಚ್ಚಿಸಿರುವುದು ಪ್ರಶಂಸಾರ್ಹ ಎಂದರು. ಇಂದಿನ ಪರಿಸ್ಥಿತಿ ಸಾಕಷ್ಟು ಬದಲಾಗಿದ್ದು ಅಪರಾಧ ಪತ್ತೆಯಲ್ಲಿ ಹೊಸ ಸವಾಲುಗಳು ಹೇರಳವಾಗುತ್ತಿವೆ ಎಂದರು. ಅಪರಾಧಿ ಯಾರೆಂದು ತಿಳಿಯಲಾಗದ ಹಾಗೂ ಅಪರಾಧ ಎಲ್ಲಿಂದ ಎಸಗಲಾಗುತ್ತದೆ ಎಂದು ತಿಳಿಯುವುದು ಕಷ್ಟ ಕೆಲಸವಾಗಿದೆ ಎಂದು ತಿಳಿಸಿದರು. ಪೋಲೀಸ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಪಾಡಿಕೊಂಡು, ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮಾನಸಿಕ ಸ್ಥೆöÊರ್ಯವನ್ನು ಹಾಗೂ ದೈಹಿಕ ಆರೋಗ್ಯ ಮತ್ತು ಸಧೃಡತೆಯನ್ನು ಕಾಪಾಡಿಕೊಂಡು ಹೋಗುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು. ಅಭ್ಯರ್ಥಿಯೊಬ್ಬರು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಮಾದಕ ವಸ್ತುಗಳ ಸೇವನೆ ಯುವಕರಲ್ಲಿ ವ್ಯಾಪಿಸುತ್ತಿದ್ದು ಪೋಲೀಸ್ ಇಲಾಖೆಯಂತೆಯೇ ಅಬಕಾರಿ ಇಲಾಖೆಗೂ ಅದನ್ನು ನಿಗ್ರಹಿಸುವುದು ದೊಡ್ಡ ಸವಾಲಾಗಿದೆ ಎಂದರು.
ಅಭ್ಯರ್ಥಿಗಳಿಗೆ ದಿನಪತ್ರಿಕೆಗಳ ಓದುವ ಮಹತ್ವ ಅದರಲ್ಲೂ ಸಂಪಾದಕೀಯ ಅಂಕಣಗಳು ಓದುವುದು ಜ್ಞಾರ್ನಾಜನೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ ಮಂಜುನಾಥಮಾತನಾಡಿ, ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ನಡೆಸುತ್ತಿರುವ ಅಣಕು ಪರೀಕ್ಷೆಯನ್ನು ಇತರೆ ಶಾಖಾ ಗ್ರಂಥಾಲಯಗಳಿಗೂ ವಿಸ್ತರಿಸಿ ಎಂದು ಮನವಿಗಳು ಬರುತ್ತಿರುವುದಾಗಿ ತಿಳಿಸಿದರು. ಯಾವುದೇ ಸರ್ಕಾರದ ಸಂಸ್ಥೆಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ,ಅಣಕು ಪರೀಕ್ಷೆ ನಡೆಸಲು ಬಯಸಿದ್ದಲ್ಲಿ ಸಂಬAಧಿಸಿದ ತರಬೇತಿ,ಅಣಕು ಪರೀಕ್ಷೆಗೆ ಸಹಾಯ ಹಸ್ತ ನೀಡಲು ಮೈಸೂರು ನಗರ ಕೇಂದ್ರ ಗ್ರಂಥಾಲಯ ಸದಾ ಸಿದ್ಧವಿದೆ ಎಂದರು.
ಕಾರ್ಯಕ್ರಮದಲ್ಲಿ ಅಣುಕು ಪರೀಕ್ಷೆ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ ಮಾತನಾಡಿ, ಸರ್ಕಾರದಿಂದ ಇತರೆ ಇಲಾಖೆಗಳ ನೇಮಕಾತಿಗೆ ಸಂಬAಧಿಸಿದ ಪರೀಕ್ಷೆಗಳಿಗೂ ತರಬೇತಿ, ಕಾರ್ಯಗಾರ ಹಾಗೂ ಅಣುಕು ಪರೀಕ್ಷೆಗಳನ್ನು ನಡೆಸಲು ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದಿಂದ ಯೋಜನೆಗಳನ್ನು ಬೇಡಿಕೆ ಮೇರೆಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸುಮಾ ಬಿ. ಕೋಡಿಹಳ್ಳಿ ಉಪಸ್ಥಿತರಿದ್ದರು.
ಇಂದಿನ ವಿಷಯವು ಅರ್ಥಶಾಸ್ತçವಾಗಿತ್ತು. 100ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.