ನಾಡ ಹಬ್ಬ ಮೈಸೂರು ದಸರಾ ಆರಂಭಕ್ಕೂ ಮುನ್ನ ಪ್ಯಾಚ್ ವರ್ಕ್ಗಳನ್ನು ಮುಗಿಸಲು ನಗರ ಪಾಲಿಕೆಗೆ ಸಚಿವರ ಸೂಚನೆ
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗುವ ಕಾರಣ ಆಗಸ್ಟ್ 15ರ ಬಳಿಕ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ನಗರಪಾಲಿಕೆಯಿಂದ ಕೈಗೊಳ್ಳುವ ರಸ್ತೆ ಪ್ಯಾಚ್ ವರ್ಕ್ಗಳ ಕಾಮಗಾರಿಯನ್ನು ದಸರಾ ಆರಂಭಕ್ಕೂ ಮುನ್ನ ಮುಗಿಸಬೇಕು ಎಂದು ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು. ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳು ಕೈಗೊಂಡಿರುವ ಪ್ರಮುಖ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಸರಾ ಮಹೋತ್ಸವ ಸಂದರ್ಭದಲ್ಲಿ ಹೊರಗಿನಿಂದ ಹೆಚ್ಚು…