ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ*ಲಕ್ಷಿö್ಮ ಅಲಂಕಾರದಲ್ಲಿ ಕಂಗೊಳಿಸಿದ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿ ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ನಗರದ ಚಾಮುಂಡಿಬೆಟ್ಟದಲ್ಲಿ ನೆಲೆನಿಂತಿರುವ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತುಮುAಜಾಬೆ ಜಾವ 4 ಗಂಟೆಯಿAದಲೇ ತುಂತುರು ಮಳೆ ಹನಿ ನಡುವೆ ಮೈ ಕೊರೆಯುವ ಚಳಿ ಗಾಳಿಯನ್ನೂ ಲೆಕ್ಕಿಸದೆ ಬೆಟ್ಟಕ್ಕೆ ವಿವಿಧೆಡೆಯಿಂದ ಧಾವಿಸಿ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ…
Month: July 2026
ಓದುವ ಹವ್ಯಾಸ ನಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗುತ್ತದೆಪ್ರಮತಿಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ
ಮೈಸೂರು; ಇಲ್ಲಿನ ಕುವೆಂಪುನಗರದ ಪ್ರಮತಿ ಹಿಲ್‌ವ್ಯೂ ಅಕಾಡೆಮಿಯ ಶಾಲಾ ಆವರಣದಲ್ಲಿ ವಿದ್ಯಾರ್ಥಿ ನಾಯಕರಪದಗ್ರಹಣ ಸಮಾರಂಭ ನಡೆಯಿತು. ವಾಯುಪಡೆಯ ಆಯ್ಕೆ ಮಂಡಳಿಯ (ಏರ್‌ಫರ‍್ಸ್ ಸೆಲೆಕ್ಷನ್ಬೋರ್ಡ್ನ) ಗ್ರೂಪ್ ಕ್ಯಾಪ್ಟನ್ ನವಲ್ ಸೈನಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿಆಯ್ಕೆಯಾದ ನಾಯಕ – ನಾಯಕಿಯರಿಗೆ ಬ್ಯಾಡ್ಜ್ ಹಾಗು ಶಾಲಾ ಧ್ವಜ ನೀಡಿ ಗೌರವಿಸಿದರು.ಬಳಿಕ ಮಾತನಾಡಿ ಶಾಲೆಯ ನಾಯಕತ್ವದ ಧ್ವಜ ಹಿಡಿದ ಕೈಗಳು ಮುಂದಿನ ದಿನಗಳಲ್ಲಿ ಭಾರತದ ತ್ರಿವರ್ಣ ಧ್ವಜ ಎತ್ತಿಹಿಡಿಯುವಂತಾಗಲಿ ಎಂದು ಶುಭ ಹಾರೈಸಿದರು. ಉತ್ತಮ ನಾಯಕ ಉತ್ತಮ ಓದುಗಾರನಾಗಿರಬೇಕು. ಓದುವ ಹವ್ಯಾಸ ನಮ್ಮ…
ಪಾಲಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಜ್ಜಾಗೋಣ: ಎಸ್.ಬಿ.ಎಂ.ಮಂಜು
ಮೈಸೂರು: ಮುಂಬರುವ ನಗರಪಾಲಿಕೆ ಚುನಾವಣೆಯಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಇಂದಿನಿಂದಲೇ ಸಂಘಟಿತರಾಗೋಣ ಎಂದು ಮಹಾನಗರಪಾಲಿಕೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು ತಿಳಿಸಿದರು.ವಿಜಯನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.20ರ ಅಧ್ಯಕ್ಷ, ಉಪಾಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. ಜಾತ್ಯಾತೀತ ಜನತಾದಳ ಪಕ್ಷ ಜನರ ಸಾಮಾನ್ಯರಿಗೆ ನೇರವಾಗಿ ಸಿಗುವ ಪಕ್ಷವಾಗಿದೆ. ಅದರಲ್ಲೂ ಚಾಮರಾಜ ಕ್ಷೇತ್ರದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಜತೆಗೆ 65 ವಾರ್ಡ್ ನಲ್ಲಿ ಶೇ.30ರಷ್ಟು ಮೀಸಲಾತಿ ಜಾರಿ ಸೇರಿ…
ಅನಗತ್ಯ ಭಯದಿಂದ ಹಾವುಗಳನ್ನು ಸಾಯಿಸಲಾಗುತ್ತಿದೆ, ಎಲ್ಲಾ ಹಾವುಗಳು ವಿಷಕಾರಿಯಲ್ಲ’
ಮೈಸೂರು: ` ಅನಗತ್ಯ ಭಯದಿಂದ ಹಾವುಗಳನ್ನು ಸಾಯಿಸಲಾಗುತ್ತಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ’ ಎಂದು ಉರಗ ರಕ್ಷಕ ಸ್ನೇಕ್ ಶ್ಯಾಮ್ ಹೇಳಿದರು.ಗುರುವಾರ ನಗರದ ಆರ್‌ಟಿಒ ಕಚೇರಿ ಬಳಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ ಆಶ್ರಯದಲ್ಲಿ ವಿಶ್ವ ಹಾವುಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 98 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರಿಗೆ ಅಭಿನಂದನಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ನಾಗರಹಾವು, ಕಾಳಿಂಗ ಸರ್ಪ ವಿಷಕಾರಿಯಾಗಿದ್ದು, ಹಪ್ಪಟೆ, ಕೇರೆ ಹಾವು, ಹಸಿರು…
ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳ ಸಾಧನೆ
ಮೈಸೂರು; ಇಲ್ಲಿನ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು WIZ ಇಂಟರ್ನ್ಯಾಷನಲ್ ಸ್ಪೆಲ್ ಬೀ ನ್ಯಾಷನಲ್ ಮೆಗಾ ಫೈನಲ್ 2025–2026 ರಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಧನುಷ್ ಪ್ರಸಾದ್ (ನಾಲ್ಕನೇ ತರಗತಿ) 39ನೇ ರಾಂಕ್, ಅರಂಜೇಯನ್ ಆರ್. (ಐದನೇ ತರಗತಿ) 43ನೇ ರಾಂಕ್, ಸುಶಾಂತ್ ಹೆಗಡೆ (ಎರಡನೇ ತರಗತಿ) 48ನೇ ರಾಂಕ್ ಮತ್ತು ಅಭಿಗ್ನ್ಯಾ ಶರತ್ (ಐದನೇ ತರಗತಿ) 53ನೇ ರಾಂಕ್ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಸಾಧನೆಗಾಗಿ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯು…
ಕಾವೇರಿ ಕಣಿವೆಯ ಜಲಾಶಯ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ಕೂಡಲೇ ನೀರು ಹರಿಸಿ; ಎಸ್.ಜಯಪ್ರಕಾಶ್ ಆಗ್ರಹ
ಮೈಸೂರು: ಕಾವೇರಿ ಕಣಿವೆಯ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ಮೈಸೂರು,ಮಂಡ್ಯ, ಬೆಂಗಳೂರು ಸೇರಿದಂತೆ ಇನ್ನಿತರೆ ನಗರಗಳಿಗೆ ಕುಡಿಯುವ ನೀರು ಒದಗಿಸಲು ಒಂದು ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊAಡು, ಉಳಿದ ನೀರನ್ನು ರೈತರ ಬೆಳೆಗಳಿಗೆ ಒದಗಿಸ ಬೇಕು ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ (ಜೆಪಿ) ಒತ್ತಾಯಿಸಿದರು.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್ ಅವರು ಈ ವಿಚಾರದಲ್ಲಿ ಯಾವುದೇ ರಾಜಿ, ಮುಲಾಜಿಗೆ ಒಳಗಾಗದೆ ನಮ್ಮ ರೈತರ ಹಿತ ಕಾಯಬೇಕು ಎಂದು ಆಗ್ರಹಿದರು.2024ರಲ್ಲಿ ಇಂಥದ್ದೇ ಸಂದರ್ಭ ಎದುರಾ…
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ‘ಜುಲೈ ಆವೃತ್ತಿಯ ಪ್ರವೇಶಾತಿ’ ಪ್ರಾರಂಭ; ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್
ಮೈಸೂರು: ನಗರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ‘ಜುಲೈ ಆವೃತ್ತಿಯ ಪ್ರವೇಶಾತಿ’ ಆರಂಭಿಸಲಾಗಿದೆ ಎಂದು ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ತಿಳಿಸಿದರು.ಗುರುವಾರ ಕೆಎಸ್‌ಒಯುನ ಬಿಒಎಂ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯುಜಿಸಿ ಅನುಮೋದಿತ ಸ್ನಾತಕ/ ಸ್ನಾತಕೋತ್ತರ ಪದವಿ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್‌ಡಬ್ಲು÷್ಯ, ಬಿಎಲ್‌ಐಎಸ್ಸಿ, ಬಿಎಸ್ಸಿ-ಜನರಲ್, ಬಿಎಸ್ಸಿ-ಐಟಿ, ಎಂಎ, ಎಂಸಿಜೆ, ಎಂಕಾA, ಎಂಎಲ್‌ಐಎಸ್ಸಿ, ಎಂಸಿಎ, ಎಂಎಸ್‌ಡಬ್ಲು÷್ಯ, ಎಂಎಸ್ಸಿ, ಎಂಬಿಎ, ಪಿಜಿ ಸರ್ಟಿಫಿಕೆಟ್ ಪ್ರೋಗ್ರಾಮ್‌ಗಳು, ಯುಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್ಗಳಿಗೆ ಪ್ರವೇಶ…