ಭೂ ಮಾಫಿಯಾ ಕೈವಾಡ; ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಜಮೀನಿನ ಪಾಲುದಾರ ರೈತರ ಮೇಲೆ ಹಲ್ಲೆ ಸುಳ್ಳು ಪ್ರಕರಣ ದಾಖಲು.
ಪಿರಿಯಾಪಟ್ಟಣ : ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಭೂಮಾಫಿಯಾ ಇಂದು ಗ್ರಾಮಾಂತರ ಪ್ರದೇಶಗಳಿಗೂ ನುಗ್ಗಿದ್ದು ರೈತರ ಬದುಕು ಬೀದಿ ಪಾಲಾಗುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ರಾವಂದೂರು ಗ್ರಾಮದಲ್ಲಿ ಆರ್.ಪಿ .ಹೊನ್ನಪ್ಪ ಎಂಬುವರ ಕುಟುಂಬಕ್ಕೆ ಸೇರಿದ ಜಮೀನನ್ನು ಕುಟುಂಬದ ಆರ್.ಎಚ್. ಚೆನ್ನಬಸಪ್ಪ ಎಂಬುವರು ಇತರೆ ಸಹೋದರ ಸಹೋದರಿಯರಿಗೆ ತಿಳಿಸದೆ ತಮ್ಮ ಜಮೀನನ್ನು ಅಮೃತೇಶ್ ಎಂಬುವರಿಗೆ ಮಾರಾಟ ಮಾಡಲು ಯತ್ನಿಸಿ, ಅಗ್ರಿಮೆಂಟ್ ಮಾಡಿಕೊಟ್ಟಿರುತ್ತಾರೆ. ಈ ವಿಚಾರ ತಿಳಿದ ಕುಟುಂಬದ ಮತ್ತಿತರರು ಅವರ ಪಾಲಿಗಾಗಿ ಪಿರಿಯಾಪಟ್ಟಣದ ನ್ಯಾಯಾಲಯದಲ್ಲಿ ಪ್ರಕರಣ…