Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಗರ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡಿ; ಸಚಿವ ಹೆಚ್.ಸಿ.ಬಾಲಕೃಷ್ಣ

ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಒತ್ತುವರಿ ತೆರವಿಗೆ ಅಭಿಯಾನ ಮೈಸೂರು; ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಇರುವ ಕೋರ್ಟ್ ಪ್ರಕರಣಗಳ ಕುರಿತು ಪೌರಾಡಳಿತ ಇಲಾಖೆಯ ಕಾನೂನು ವಿಭಾಗ ಸಮರ್ಥವಾಗಿ ವಾದ ಮಂಡಿಸಬೇಕು. ಸ್ಥಳೀಯ ಸಂಸ್ಥೆಗಳು ಆಸ್ತಿಗಳ ಒತ್ತುವರಿ ತೆರವು ಮಾಡಲು ಅಭಿಯಾನ ಕಾರ್ಯವನ್ನು ಹಮ್ಮಿಕೊಳ್ಳುವುದು. ಒತ್ತುವರಿ ತೆರವಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ತಿಳಿಸಿದರು.ಸೋಮವಾರ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು…

Read More

ಶ್ರೀ ಗುರುರಾಘವೇಂದ್ರತೀರ್ಥ, ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ವಿಶೇಷ ಅಲಂಕಾರ

ಮೈಸೂರು; ಅರಮನೆ ನಗರಿ ಮೈಸೂರಿನ ವಿವಿಧೆಡೆ ಇರುವ ಶ್ರೀರಾಘವೇಂದ್ರಸ್ವಾಮಿ ದೇವಸ್ಥಾನ, ಮಠಗಳಲ್ಲಿ ಶ್ರೀ ಗುರುರಾಘವೇಂದ್ರತೀರ್ಥ, ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ಮಹೋತ್ಸವ ಸಡಗರ, ಸಂಭ್ರಮದಿAದ ನಡೆಯಿತು. ರಾಮಕೃಷ್ಣನಗರದ ಐ ಬ್ಲಾಕ್‌ನ ಸ್ವಾಮಿವಿವೇಕಾನಂದರಸ್ತೆಯಲ್ಲಿರುವ ಶ್ರೀ ಶ್ರೀನಿವಾಸ ದೇವಸ್ಥಾನದಆವರಣದಲ್ಲಿ ಶ್ರೀ ಗುರುರಾಘವೇಂದ್ರತೀರ್ಥ, ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ಅಂಗವಾಗಿ ರಾಯರಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ನೈವೇಧ್ಯ, ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಕುವೆಂಪುನಗರದಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಧ್ಯಾರಾಧನೆ ಸಡಗರದಿಂದ ನಡೆಯಿತು. ಶ್ರೀಗುರುರಾಘವೇಂದ್ರಸ್ವಾಮಿಯವರಿಗೆ ವಿಶೇಷ ಅಭಿಷೇಕ, ಪೂಜೆಗಳನ್ನು ನೇರವೇರಿಸಿ, ಅಲಂಕಾರ ಮಾಡಲಾಗಿತ್ತು. ನೂರಾರು ಮಂದಿ…

Read More

ದಸರಾದಲ್ಲಿ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಮೈಸೂರು; 2026-27 ನೇ ಸಾಲಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅ. 11 ರಿಂದ 21 ರ ವರೆಗೆ ವಿಜೃಂಭಣೆಯಿAದ ಆಚರಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದ್ದು, ಈ ಸಂಬ0ಧ ಸಾಂಸ್ಕೃತಿಕ ಉಪಸಮಿತಿಯಿಂದ ನವರಾತ್ರಿ ಅ. 11 ರಿಂದ 19 ವರೆಗೆ ವಿವಿಧ ಕಲಾಪ್ರಕಾರಗಳ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಅರಮನೆ ಹಾಗೂ ಇತರೆ ವೇದಿಕೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.ಸಾಂಸ್ಕöÈತಿಕ ಕಾರ್ಯಕ್ರಮ ನೀಡಲು ಕಲಾವಿದರಿಂದ, ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆ.16 ಆಗಿರುತ್ತದೆ. ಸದರಿ ಅರ್ಜಿಗಳನ್ನು ಸಹಾಯಕ…

Read More

9 ಆನೆಗಳಲ್ಲಿನ ತೂಕದಲ್ಲಿ ಶ್ರೀಕಂಠ ಆನೆಯೇ ಬಲ ಭೀಮ !

ಮೈಸೂರು: ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸಲೆಂದು ಕಾಡಿನಿಂದ ಅರಮನೆ ನಗರಿ ಮೈsಸೂಗೆ ಬಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಮೊದಲ ತಂಡದ 9 ಆನೆಗಳ ತೂಕ ಪರಿಶೀಲನೆಯನ್ನು ಭಾನುವಾರ ನಡೆಸಲಾಯಿತು. ಅಂಬಾವಿಲಾಸ ಅರಮನೆಯ ಶೆಡ್‌ಗಳಿಂದ ಎಲ್ಲಾ 9 ಆನೆಗಳನ್ನು ಧನ್ವಂತರಿ ರಸ್ತೆಯಲ್ಲಿರುವ ತೂಕ ಮಾಪನ ಕೇಂದ್ರ ಸಾಯಿರಾಂ ಅಂಡ್ ಕಂಪನಿ ಕೇಂದ್ರಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ಜನರು ತಮ್ಮ ಕಣ್ಣ ಮುಂದೆ ಸಾಲಾಗಿ ಹಾದು ಹೋಗುತ್ತಿದ್ದ ಆನೆಗಳನ್ನು ನೋಡಿ ಖುಷಿಗೊಂಡರು. ತಮ್ಮ…

Read More

ಶಾಖಾ ಗ್ರಂಥಾಲಯ ಆಗಸ್ಟ್ 31 ರಂದು ಸಾರ್ವಜನಿಕ ಸೇವೆಗೆ ಲಭ್ಯಮೈಸೂರು: ಗ್ರಂಥಾಲಯ ಪಿತಾಮಹ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಆಗಸ್ಟ್ 31 ರಂದು ಮೈಸೂರು ನಗರ ಕೇಂದ್ರ ಗ್ರಂಥಾಲಯದ ವ್ಯಾಪ್ತಿಯ ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯದಲ್ಲಿ ಮಾತ್ರ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸಾರ್ವಜನಿಕ ಓದುಗರ ಸೇವೆಗೆ ತೆರೆದಿರಲಿದೆ.ಸೋಮವಾರ ವಾರದ ರಜಾ ದಿನವಾಗಿದ್ದರೂ, ಇಲಾಖಾ ಆಯುಕ್ತರ ನೂತನ ಆದೇಶದನ್ವಯ ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯದಲ್ಲಿ ಮಾತ್ರ…

Read More

ಡಿಜಿಟಲ್ ವೇದಿಕೆಯಿಂದ ಕೃಷಿ ವಹಿವಾಟಿಗೆ ವೇಗ; ಮಮತಾ ಹೆಚ್.ಎನ್.

ಮೈಸೂರು: ಸ್ಥಳೀಯ ಮಾರುಕಟ್ಟೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ತಮ್ಮ ಉತ್ಪನ್ನಗಳನ್ನು ಯುಎಂಪಿ- ಆರ್‌ಇಎಂಎಸ್ ಡಿಜಿಟಲ್ ವೇದಿಕೆಯಡಿ ಸ್ಪರ್ಧಾತ್ಮಕ ರೀತಿಯಲ್ಲಿ ಮಾರಾಟ ಮಾಡುವುದರಿಂದ ಕೃಷಿ ವಹಿವಾಟಿಗೆ ಹೆಚ್ಚಿನ ವೇಗ ನೀಡಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕಿ ಮಮತಾ ಹೆಚ್.ಎನ್. ತಿಳಿಸಿದರು.ಮೈಸೂರು ತಾಲೂಕಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಲಾನಯನ ಅಭಿವೃದ್ಧಿ ಹಾಗೂ ಕೃಷಿ ಇಲಾಖೆ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಬೆಂಗಳೂರು, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ…

Read More

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ನಿತೀನ್ ವೆಂಕಟೇಶ್

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ಪಿರಿಯಾಪಟ್ಟಣ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು. ಪಟ್ಟಣದ ಗೋಣಿಕೊಪ್ಪಲು ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಧರ್ಮ ಪ್ರವರ್ತಕ ಬೆಂಗಳೂರು ಸುಬ್ಬಣ್ಣನವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೇತೃತ್ವದಲ್ಲಿ ಆಯೋಜಿಸಿದ್ದ ಕಸಬಾ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳ ಆಸಕ್ತಿಯನ್ನು ಗುರುತಿಸಿ…

Read More

ಕಲ್ಪವೃಕ್ಷಕ್ಷೇತ್ರದಲ್ಲಿ 355ನೇ ಶ್ರೀರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ ಮಹೋತ್ಸವ

ಮೈಸೂರು; ಇಲ್ಲಿನ ಎಂ.ಬಿ.ಹಳ್ಳಿ ರಸ್ತೆ, ನಿರ್ಮಾಣ್ ನಗರ, ಜಂತಗಳ್ಳಿಯಲ್ಲಿರುವ ಕಲ್ಪವೃಕ್ಷಕ್ಷೇತ್ರ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ 355ನೇ ರಾಯರ ಪೂರ್ವಾರಾಧನೆ ಮಹೋತ್ಸವ ಸಂಭ್ರಮದಿAದ ನಡೆಯಿತು.ಪೂರ್ವಾರಾಧನೆ ಅಂಗವಾಗಿ ಬೆಳಿಗ್ಗೆ 7 ಕ್ಕೆ ಪಂಚಾಮೃತಅಭಿಷೇಕ, ಹೂವಿನ ಅಲಂಕಾರ, ಗೋವುಗಳಿಗೆ ಮುತ್ತೆöÊದೆಯರಿಂದ ಪೂಜೆ, ಧಾನ್ಯಗಳ ಹಾಗೂ ಫಲಗಳಿಂದ ಅಲಂಕಾರ, ಮಧ್ಯಾಹ್ನ 12 ಕ್ಕೆ ಹಸ್ತೋದಕ, ಮಹಾಮಂಗಳಾರತಿ, ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನೆರವೇರಿತು.

Read More