ಯುವ ನಿಧಿ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ
ಹೆಚ್.ಡಿ.ಕೋಟೆ; ಯವನಿಧಿ ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾಗಿದ್ದು, ನಿರುದ್ಯೋಗಿಗಳಿಗೆ ಆಶಾದೀಪವಾಗಿದ್ದು, ಕಾಲೇಜುಗಳಲ್ಲಿ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಅರುಣ್ ಕುಮಾರ್ ತಿಳಿಸಿದರು.ಸೋಮವಾರ ಹೆಚ್.ಡಿ ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಯೋಗದಲ್ಲಿ ಏರ್ಪಡಿಸಿದ್ದ ಯುವನಿಧಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿ, ಡಿಪ್ಲೋಮಾ ಪಡೆದ ನಂತರ ೧೮೦ ದಿನಗಳ ಕಾಲ ಕಳೆದರೂ ಉದ್ಯೋಗ ದೊರಕದಿದ್ದರೆ ಅನುಕ್ರಮವಾಗಿ ೩೦೦೦ ಹಾಗೂ…