ನಗರದಲ್ಲಿ ಪೊಲೀಸರಿಂದ ರೌಡಿಗಳ ಪರೇಡ್
ಮೈಸೂರು; ನಗರದಲ್ಲಿ ಪೊಲೀಸರು ರೌಡಿಗಳ ಪರೇಡ್ ನಡೆಸಿದರು.ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ ಸೂಚನೆಯಂತೆ, ಡಿಸಿಪಿಗಳಾದ ಡಾ:ಹರ್ಷ ಪ್ರಿಯಂವದ ಮತ್ತು ಶಿ ಸುಂದರ್ ರಾಜ್ ಕೆ.ಎಸ್ ಅವರ ನೇತೃತ್ವದಲ್ಲಿ ವಿಜಯನಗರ ಉಪವಿಭಾಗದ ರೌಡಿಗಳ ಪರೇಡ್ ನಡೆಸಲಾಯಿತು. ರೌಡಿ ನಿಗ್ರಹ ದಳದ ಈ ಕಾರ್ಯಾಚರಣೆಯಲ್ಲಿ, ಯಾವುದೇ ಕಾನೂನು ಬಾಹಿರ ಚಟುವಟಿಕೆ ಅಥವಾ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಯಿತು. ಅಲ್ಲದೆ, ತಪುö್ಪ ಹಾದಿ ಬಿಟ್ಟು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕುವಂತೆ ಬುದ್ಧಿವಾದ ಹೇಳಲಾಯಿತು.