
ಮೈಸೂರು; ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಹರಕೆ ತೀರಿಸಲಾಯಿತು.
ಚಾಮುಂಡಿ ಬೆಟ್ಟದಲ್ಲಿ ಡಿಕೆ ಶಿವಕುಮಾರ್ ಭಾವಚಿತ್ರ ಹಿಡಿದು 101 ತೆಂಗಿನಕಾಯಿ ಹೊಡೆದು ನಂತರ ಚಾಮುಂಡಮ್ಮನ ತೇರು ಸೇವೆ ನೆರೆವೇರಿಸುವ ಮೂಲಕ ಅಭಿಮಾನಿಗಳು ಹರಕೆ ತೀರಿಸಿದರು,
ಆರು ತಿಂಗಳ ಹಿಂದೆ ಡಿಕೆ ಶಿವಕುಮಾರ್ ರವರು ಮುಖ್ಯಮಂತ್ರಿ ಆಗಲಿ ಎಂದು ಅಭಿಮಾನಿಗಳು ಚಾಮುಂಡಮ್ಮನ ಮೊರೆ ಹೋಗಿ, ಹರಕೆ ಮಾಡಿಕೊಂಡಿದ್ದರು, ಇಂದು ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶಕ್ತಿ ಎಂದರೆ ಡಿಕೆ.ಶಿವಕುಮಾರ್ ರವರ ನಾಯಕತ್ವ ಆಡಳಿತ. ವಿದ್ಯಾರ್ಥಿ ಯುವ ಕಾಂಗ್ರೆಸ್ ಮೂಲಕ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನ ಸಂಘಟಿಸಿ, ಪಂಚಾಯತಿಯಿAದ ವಿಧಾನಸೌಧದವರೆಗೂ ಡಿಕೆ.ಶಿವಕುಮಾರ್ ರವರು ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರವರು ನುಡಿದಂತೆ ಗ್ಯಾರೆಂಟಿ ಯೋಜನೆಗಳ ಮೂಲಕ ಕರ್ನಾಟಕದ ಮನೆಮನಗಳಲ್ಲಿ ಸ್ಥಾನ ಪಡೆದಿದ್ದಾರೆ. 2028ರಲ್ಲೂ ಸಹ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಡಿಕೆ.ಶಿವಕುಮಾರ್ ನಾಯಕತ್ವದಲ್ಲಿ ಆಡಳಿತ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ, ಆನಂದ, ಜಿ ರಾಘವೇಂದ್ರ, ಕಿರಣ್, ದಿನೇಶ್,ಯೋಗೇಶ್, ಹರೀಶ ನಾಯ್ಡು,ಎಸ್ ಎನ್ ರಾಜೇಶ್, ಕಾಂಗ್ರೆಸ್ ಮುಖಂಡರುಗಳಾದ ಆನಂದ್ ಕುಮಾರ್, ಅರ್ಜುನ್, ಮಲ್ಲಿಗೆ ವೀರೇಶ್, ಲತಾ ಮೋಹನ್, ವಿಜಯಲಕ್ಷಿ÷್ಮ ಅಯ್ಯಂಗಾರ್, ಕೃಷ್ಣ, ರಾಜು, ಲೋಕೇಶ್, ಮಂಜೇಶ್, ಹಾಗೂ ಇನ್ನಿತರರು ಹಾಜರಿದ್ದರು.