Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬಿಜೆಪಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರಕ್ಕೆ ಚಾಲನೆ


ಮೈಸೂರು; ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರವನ್ನು ಶಾರದಾದೇವಿನಗರದಲ್ಲಿ ಮುಖಂಡ ಕವೀಶ್ ಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 2002ರ ಮತಪಟ್ಟಿಯಲ್ಲಿ ಹೆಸರು ಹುಡುಕಲು ಅನೇಕರಿಗೆ ಕಷ್ಟವಾಗುತ್ತಿರುವುದನ್ನು ಮನಗಂಡು, ಬಿಜೆಪಿ ವತಿಯಿಂದ ಕ್ಷೇತ್ರದ ವಿವಿದೆಡೆ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದನ್ನು ಕ್ಷೇತ್ರದ ಮತದಾರರು ಸದುಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ನಂತರ ಮತದಾರರಿಗೆ ಬಿ.ಎಲ್.ಓ.ಗಳ ಸಂಪರ್ಕ, 2002ರ ಮತ ಪಟ್ಟಿಯಲ್ಲಿ ಹೆಸರು ಹುಡುಕಲು, ಎನ್ಯೂಮರೇಷನ್ ಅರ್ಜಿ ಭರಿಸಲು ಸಹಾಯ ಮಾಡಲಾಯಿತು. ಈ ವೇಳೆ
ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರ ಉಪಾಧ್ಯಕ್ಷರಾದ ಅರುಣ್ ಕುಮಾರ್ ಗೌಡ, ವಕ್ತಾರರಾದ ಎಂ.ಎ ಮೋಹನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಪಾಲಿಕೆ ಮಾಜಿ ಸದಸ್ಯರಾದ ಜೆ.ಎಸ್. ಜಗದೀಶ್, ಎಂ.ಕೆ. ಶಂಕರ್, ಹೇಮಾ ಗಂಗಪ್ಪ, ಕಿರಣ್ ಮಾದೇಗೌಡ, ಚಾಮುಂಡೇಶ್ವರಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಪೈ ಟಿ. ರವಿ, ಪದಾಧಿಕಾರಿಗಳಾದ ದಾರಿಪುರ ಸುನಿಲ್, ಎನ್. ಪ್ರತಾಪ್, ಶಿವು ಪಟೇಲ್, ಹೆಚ್.ಎಸ್. ಹಿರಿಯಣ್ಣ, ಬಿ.ಸಿ. ಶಶಿಕಾಂತ್, ಲಕ್ಷಿ÷್ಮ ಜಯಶಂಕರ್, ವಿಜಯ ಮಂಜುನಾಥ್, ನಾಗರಾಜ್ ಜನ್ನು, ಎ.ಎಂ.ಗಿರೀಶ್, ಪಿ.ಸೋಮಣ್ಣ, ರಾಚಪ್ಪಾಜಿ, ಮಧು ಸೋಮಶೇಖರ್, ಜೆ.ರಂಗೇಶ್, ಸಿ.ರಾಘವೇಂದ್ರ, ಎನ್.ಶುಭಶ್ರೀ, ಪುಟ್ಟಮ್ಮಣ್ಣಿ, ಪ್ರೇಮಾವತಿ, ರಾಹುಲ್, ಸಾಗರ್ ಸಿಂಗ್, ಕಾಂತರಾಜ ಅರಸ್, ವಸುಮತಿ, ಚೇತನಾ ಭೂಷಣ್, ಸಂಜಯ್ ಪ್ರಸನ್ನ, ಮಲ್ಲಣ್ಣ, ನವೀನ್, ಪ್ರಜ್ವಲ್, ಗೌತಮ್, ಅವಿನಾಶ್ ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.