ಹೊಸಗನ್ನಡದ ಸಿರಿತನಕ್ಕೆ ಹಳಗನ್ನಡವೇ ಬೇರು:ನಾಡೋಜ ಡಾ. ಹಂಪ ನಾಗರಾಜಯ್ಯ
ಮೈಸೂರು: ಹೊಸಗನ್ನಡದ ಹೂವುಗಳು ಕಂಗೊಳಿಸುತ್ತಿದ್ದರೆ, ಅದಕ್ಕೆ ಹಳಗನ್ನಡವೇ ಬೇರು ಕಾರಣ. ಹಳೆಗನ್ನಡ ಕಾವ್ಯಗಳು ಕಠಿಣವಾದವುಗಳಲ್ಲ, ಅವುಗಳನ್ನು ಓದುತ್ತಾ ಹೋದಂತೆ ವ್ಯಾಖ್ಯಾನಗಳು ಸುಲಭವಾಗಿ ಅರ್ಥವಾಗುತ್ತವೆ ಎಂದು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದರು.ಮಂಗಳವಾರ ನಗರದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ…