ಬಾನಂಗಳದಲ್ಲಿ ಜಾದೂ ಮಾಡಿದ ಡ್ರೋನ್‌ಗಳ ಚಿತ್ತಾರ
– 3,500 ಡ್ರೋನ್‌ಗಳಿಂದ ಅತ್ಯಾಕರ್ಷಕ ಪ್ರದರ್ಶನ – ತಂತ್ರಜ್ಞಾನದ ಬೆಳಕಿನಲ್ಲಿ ಮೂಡಿದ ದಸರಾ ವೈಭವ ಮೈಸೂರು: ಕತ್ತಲ ಆಗಸದಲ್ಲಿ ಮಿನುಗಿದ ಸಾವಿರಾರು ಬೆಳಕಿನ ಚುಕ್ಕಿಗಳು… ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಬಣ್ಣಬಣ್ಣದ ಆಕೃತಿಗಳು… ಬಾನಂಗಳದಲ್ಲೇ ಜೀವತಳೆದ ನವಿಲು, ಸಿಂಹ, ಚಾಮುಂಡೇಶ್ವರಿ ಹಾಗೂ ಚಿನ್ನದ ಅಂಬಾರಿಯ ಮನಮೋಹಕ ದೃಶ್ಯಗಳು…! ಹೀಗೆ 3,500 ಡ್ರೋನ್‌ಗಳು ಸೃಷ್ಟಿಸಿದ ಬೆಳಕಿನ ಮಾಯಾಲೋಕ ಮೈಸೂರು ದಸರಾ ವೈಭವಕ್ಕೆ ಹೊಸ ಮೆರುಗು ನೀಡಿತು. ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನದಲ್ಲಿ ನಾಡಿನ…