Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ಅರಮನೆಯ ಮಟ್ಟಿ ಮಣ್ಣಿನಲ್ಲಿ ರಣರೋಚಕವಾಗಿ ನಡೆಯಲಿದೆ ವಜ್ರ ಮುಷ್ಠಿ ಕಾಳಗ

(file photo ) ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಬುಧವಾರ ಅಂಬಾವಿಲಾಸ ಅರಮನೆಯಲ್ಲಿ ರಣ ರೋಚಕ ವಜ್ರಮುಷ್ಠಿ ಕಾಳಗ ನಡೆಯಲಿದೆ. ಇದಕ್ಕಾಗಿ ಅಖಾಡವನ್ನು ಸಿದ್ದಗೊಳಿಸಲಾಗಿದ್ದು, ಕಾಳಗಕ್ಕೆ ಜಟ್ಟಿಗಳನ್ನು ಆಯ್ಕೆ ಮಾಡಲಾಗಿದೆ.ಯದುವಂಶದ ರಾಜರಿಗೆಂದು ವಿಜಯ ದಶಮಿಯ ದಿನ ಅರಮನೆಯಲ್ಲಿ ಜಟ್ಟಿಗಳು ವಜ್ರಮುಷ್ಠಿ ಕಾಳಗವನ್ನು ನಡೆಸುವುದು ಸಂಪ್ರದಾಯ. ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಗರಡಿಯಿಂದ ನಾಲ್ವರು ಜಟ್ಟಿಗಳನ್ನು ಆಯ್ಕೆ ಮಾಡಲಾಗಿದೆ. ವಜ್ರಮುಷ್ಠಿ ಕಾಳಕದ ಬಗ್ಗೆ ಗೊತ್ತಿರುವ ಯಜಮಾನರು ಸೇರಿಕೊಂಡು ವಜ್ರಮುಷ್ಠಿಕಾಳಗಕ್ಕೆ ಪೈಲ್ವಾನರನ್ನು…

Read More

ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿದ ಯದುವೀರ್

ಮೈಸೂರು: ನಗರದಲ್ಲಿರುವ ವಿಶ್ವ ಪ್ರಸಿದ್ಧ ಅಂಬಾ ವಿಲಾಸ ಅರಮನೆಯಲ್ಲಿ ಮಂಗಳವಾರ ರಾಜ ಮನೆತನದವರು ಆಯುಧಗಳ ಪೂಜೆ ಸಂಬ್ರಮದಿAದ ನೆರವೇರಿಸಿದರು.ಇಂದು ಬೆಳಗ್ಗೆ 11:32 ರಿಂದ 11:52ರಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವಂಶದ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದರು. ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳಿಗೂ ಪೂಜೆ ಮಾಡಲಾಯಿತು.ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಸೇರಿ…

Read More

ಜಂಬೂಸವಾರಿ ನೋಡಲು ಬರುತ್ತಿದ್ದಾರೆ ಲಕ್ಷಾಂತರ ಜನ !

*ಸಿಎಂ,ಡಿಸಿಎ0,ಉಸ್ತುವಾರಿ ಸಚಿವರು,ರಾಜವಂಶಸ್ಥ ಯದುವೀರ್‌ರಿಂದ ಪುಷ್ಪಾರ್ಚನೆ*ನೆರೆಯ ಕೇರಳ,ತೆಲಂಗಾಣ ಸಿಎಂ ಕೂಡ ಜಂಬೂಸವಾರಿಯಲ್ಲಿ ಭಾಗಿ*ವಿವಿಧ ದೇಶಗಳ ರಾಯಭಾರಿಗಳ ಆಗಮನ*ಜನರ ಕಣ್ಮುಂದೆ ಹಾದು ಹೋಗಲಿರುವ ಪರಂಪರೆ ಸಾರುವ ಸ್ತಬ್ದಚಿತ್ರಗಳು,ಜಾನಪದ ಕಲಾತಂಡಗಳು ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಐತಿಹಾಸಿಕ ಪ್ರಸಿದ್ಧ ಜಂಬೂಸವಾರಿ ಮೆರವಣಿಗೆ ನಾಡಿನ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಹೊತ್ತು ವೈಭವದಿಂದ ಜರುಗಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಅ.21ರಂದು ಮಧ್ಯಾಹ್ನ 1.36ರಿಂದ 1.56 ರವರೆಗೆ ಗಂಟೆಗೆ ಸಲ್ಲುವ ಶುಭ…

Read More

3,473 ಡ್ರೋನ್‌ಗಳಿಂದ ಆಗಸದಲ್ಲಿ ಅರಳಿನಿಂತ ನವಿಲು ಪಕ್ಷಿಯ ವಿನ್ಯಾಸಕ್ಕೆ ಗಿನ್ನಿಸ್ ದಾಖಲೆಯ ಗರಿ

*ಎರಡನೇ ದಿನವೂ ಜನಮನಗೆದ್ದ ಡ್ರೋಣ್ ಪ್ರದರ್ಶನಮೈಸೂರು; ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವತಿಯಿಂದ ಭಾನುವಾರ ನಡೆಸಿದ ಡ್ರೋನ್ ಪ್ರದರ್ಶನ ಮತ್ತೊಮ್ಮೆ ಜಾಗತಿಕ ದಾಖಲೆ ನಿರ್ಮಿಸುವ ಮೂಲಕ ಗಮನ ಸೆಳೆದಿದೆ. ಕಳೆದ ವರ್ಷ ಡ್ರೋನ್‌ಗಳ ಮೂಲಕ ಹುಲಿಯ ಚಿತ್ರವನ್ನು ರಚಿಸಿ ಗಿನ್ನಿಸ್ ದಾಖಲೆ ಬರೆದಿದ್ದ ಸೆಸ್ಕ್, ಈ ಬಾರಿ 3,473 ಡ್ರೋನ್‌ಗಳ ಮೂಲಕ ಪಕ್ಷಿ(ನವಿಲು)ಯ ವಿನ್ಯಾಸ ಮೂಡಿಸುವ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆಯ ಗರಿಯನ್ನು ತನ್ನ ಮುಕುಟಕ್ಕೆ…

Read More

ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ: ಸಿಎಂ ಡಿ.ಕೆ.ಶಿವಕುಮಾರ್

*ಕಂಬಳ ಕ್ರೀಡೆಯನ್ನು ಉದ್ಘಾಟಿಸಿದ ಸಿಎಂಮೈಸೂರು: ರಾಜ್ಯದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ರಾಜ್ಯವನ್ನು ಆವರಿಸಿರುವ ತೀವ್ತ ಬರಗಾಲ ಬಗ್ಗೆ ಚರ್ಚೆ ನಡೆಸಲು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ದಿನ, ಸಮಯ ಕೇಳಿದ್ದೇನೆ. ಅವಕಾಶ ನೀಡಿದರೆ, ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಭಾನುವಾರ ಸಂಜೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳ ಬಳಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋದರೆ ಬರುವುದಾಗಿ ವಿರೋಧ ಪಕ್ಷದ ನಾಯಕರು ಈ…

Read More

ಕೆ.ಆರ್.ನಗರದಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ

ಕೆ.ಆರ್.ನಗರ; ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸತತ ಮಳೆಯಿಂದ ಕೃಷಿಕ ವರ್ಗ ಒಂದೆಡೆ ಸಂತಸÀಗೊAಡಿದ್ದರೆ, ಮತ್ತೊಂದೆಡೆ ಅದೇಕೃಷಿಕ ವರ್ಗ ಸಂಕಟಪಡುವAತೆ ಮಾಡಿದೆ.ಇಡೀ ರಾತ್ರಿ ಸುರಿದ ಮಳೆ ಭಾನುವಾರ ಬೆಳಿಗ್ಗೆ 8ಗಂಟೆಯವರೆವಿಗೂ ಎಡೆಬಿಡದೆ ಸುರಿದ ಕಾರಣ ಪಟ್ಟಣದ ಹಲವೆಡೆ ಎಲ್ಲೆಂದರಲ್ಲಿ ನೀರಿನ ಹೊಂಡ ನಿರ್ಮಾಣವಾಗಿದ್ದು ಪಟ್ಟಣದಲ್ಲಿ ತುಂಬಿದ್ದ ಕೊಳೆ ಹೊರಹೋಗುವಂತಾಯಿತು.ಮಳೆಯಿಂದ ಒಂದೆ ಕೃಷಿಕವರ್ಗ ಹೊಲಗಳಲ್ಲಿ ಬೆಳದಿರುವ ಜೋಳ, ರಾಗಿ ಇನ್ನಿತರೆ ಬೆಳೆಗಳಿಗೆ ಹಾಗೂ ಒಂದಷ್ಟು ಮೇವಿಗೆ…

Read More

ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಗಲ್ಲುಶಿಕ್ಷೆ: ನ್ಯಾಯಾಲಯದ ತೀರ್ಪಿಗೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ವಾಗತ

ಮೈಸೂರು: ಕಳೆದ ವರ್ಷ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವದ ವೇಳೆ ತನ್ನ ಪೋಷಕರೊಂದಿಗೆ ಮಲಗಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿಗೆ ಗಲ್ಲುಶಿಕ್ಷೆ ವಿಧಿಸಿರುವ ವಿಶೇಷ ಪೋಕ್ಸೋ ನ್ಯಾಯಾಲಯದ ತೀರ್ಪನ್ನು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.ಮೈಸೂರು ನಗರದ ಇಟ್ಟಿಗೆಗೂಡಿನ ನಾಗಲಕ್ಷಿ÷್ಮÃ ದೇವಸ್ಥಾನದ ಸಮೀಪ 2025ರ ಅಕ್ಟೋಬರ್ 9ರಂದು ನಡೆದಿದ್ದ 9 ವರ್ಷದ ಮುಗ್ಧ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ…

Read More

ಕಳೆಗಟ್ಟಿದ ಗ್ರಾಮೀಣ ಯೋಗ ದಸರಾ 

ಮಳೆ ಅಡಚಣೆ; ದಿಢೀರ್ ಬದಲಾವಣೆ  ಜೆಎಸ್‌ಎಸ್ ಮಂಟಪದಲ್ಲಿ ಅದ್ಧೂರಿ ಆಚರಣೆ ನಂಜನಗೂಡು: ಭಾನುವಾರ ಮುಂಜಾನೆ ಸುರಿದ ಧಾರಾಕಾರ ಮಳೆಗೆ ಗ್ರಾಮೀಣ ಯೋಗ ದಸರಾ ರದ್ದಾಗಬೇಕಿತ್ತು. ಆದರೆ ಮಳೆಯ ನಡುವೆಯೂ ಕ್ಷಣಮಾತ್ರದಲ್ಲಿ ತೆಗೆದುಕೊಂಡ ನಿರ್ಧಾರ ಹಾಗೂ ಸುತ್ತೂರು ಶ್ರೀಮಠದ ನೆರವಿನಿಂದ ಗ್ರಾಮೀಣ ಯೋಗ ದಸರಾ ನಿಗದಿಯಂತೆ ಯಶಸ್ವಿಯಾಯಿತು.     ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಯೋಗಬಂಧುಗಳು ಯೋಗ ನೃತ್ಯರೂಪಕ ಪ್ರದರ್ಶಿಸುವ ಮೂಲಕ ಕಳೆಗಟ್ಟಿಸಿದರು.    ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಮುಂಜಾನೆ 6 ಗಂಟೆಗೆ…

Read More

ಒತ್ತಡದ ಬದುಕಿನ ನಡುವೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಹೊಸ ದೃಷ್ಟಿಕೋನ ಬೆಳೆಯುತ್ತದೆ; ಚಿತ್ರ ನಿರ್ದೇಶಕ ಬಿ. ಸುರೇಶ್

‘ಮೈಸೂರು : ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ಬಿ. ಸುರೇಶ್ ರಚನೆಯ ‘ಸಡಗರಕೆ ಸಾವಿಲ್ಲ’ ಪುಸ್ತಕ ಲೋಕಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮವು ನಗರದ ಸಿದ್ಧಾರ್ಥ ಲೇಔಟಿನಲ್ಲಿನ ವಿನಯ ಮಾರ್ಗದಲ್ಲಿರುವ ‘ಮಲ್ಲಿಗೆ ಬುಕ್ ಹೌಸ್’ ನಲ್ಲಿ ಂ ನಡೆಯಿತು.ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಬಿ. ಸುರೇಶ್, ‘ಒತ್ತಡದ ಬದುಕಿನ ನಡುವೆಯೂ ಸಮಯ ಹೊಂದಿಸಿಕೊAಡು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಹೊಸ ದೃಷ್ಟಿಕೋನ ಬೆಳೆಯುತ್ತದೆ. ‘ಎದೆಗೆ ಬಿದ್ದ ಅಕ್ಷರ’ದಂತಹ ಪುಸ್ತಕ ಓದಿದರೆ ಹೊಸ ಆಲೀಚನಾ ಕ್ರಮ ಬೆಳೆಯುತ್ತದೆ. ಅದಕ್ಕೆ…

Read More

ದಸರಾ ಕಂಬಳದಲ್ಲಿ ಕೋಣಗಳ ಓಟ ಸ್ಪರ್ಧೆಗೆ ಚಾಲನೆ ; ಕಂಬಳ ಕ್ರೀಡೆಯಲ್ಲಿ 150 ಜೋಡಿ ಕೋಣಗಳು ಭಾಗಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಗರದ ಸಾತಗಳ್ಳಿ ವಿಟಿಯು ಕಾಲೇಜು ಸಮೀಪದ ವಿಶಾಲವಾದ ಆವರಣದಲ್ಲಿ ದಸರಾ ಕಂಬಳ ಉಪಸಮಿತಿ ವತಿಯಿಂದ ಆಯೋಜಿಸಿರುವ ಎರಡು ದಿನಗಳ ದಸರಾ ಕಂಬಳ ಭಾನುವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆಗೊಂಡಿತು.ಕರಾವಳಿ ಭಾಗದ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಕರೆಯನ್ನು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿ ಚಾಲನೆ ನೀಡಿದರು.ಬಳಿಕ ಮಾತನಾಡಿ,ಕಂಬಳ ಕರಾವಳಿ ಪ್ರದೇಶದ ಗ್ರಾಮೀಣ ಜನಪ್ರಿಯ ಜಾನಪದ ಕ್ರೀಡೆಯಾಗಿದೆ. ಆ…

Read More