ಗಜಪಡೆಯ ಮಾವುತರು, ಕಾವಾಡಿಗಳು ಕುಟುಂಬದವರಿಗೆ ಟೀ ಶರ್ಟ್, ದಿನ ಬಳಕೆ ಪದಾರ್ಥ, ಆಟದ ವಸ್ತುಗಳ ವಿತರಣೆ
ಮೈಸೂರು; ನಗರದ ಅಂಬಾವಿಲಾಸ ಅರಮನೆ ಆವರಣದ ದಸರಾ ಗಜಪಡೆಗಳ ಕ್ಯಾಂಪ್ ನಲ್ಲಿ ಸೋಮವಾರಗಜಪಡೆಯ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದವರಿಗೆ ಟೀ ಶರ್ಟ್, ದಿನ ಬಳಕೆಯ ವಸ್ತುಗಳು, ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಆಟದ ವಸ್ತುಗಳನ್ನು ವಿತರಿಸಲಾಯಿತು.ಜಂಗಲ್ ಲಾಡ್ಜಸ್ ಅಧ್ಯಕ್ಷ, ಶಾಸಕ ಅನಿಲ್ ಚಿಕ್ಕಮಾದು ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ವಸ್ತುಗಳನ್ನು ವಿತರಿಸಿದರು. ಮಾವುತರು ಮತ್ತು ಕಾವಾಡಿಗಳ ಕುಟುಂಬಗಳ ಜೊತೆ ಅವರು ಬೆರೆತು ಸಂತಸದ ಕ್ಷಣಗಳನ್ನು ಕಳೆದರು. ಇದರ ಜೊತೆಗೆ ಲಲಿತ್…